ಅಫಜಲಪುರ ; ಅ.16: ಬಿಜೆಪಿ ಕೃಪಾ ಪೆÇೀಷಿತ ಉಡಾಳರ ಗುಂಪು ಹಾಗೂ ಆರ್.ಎಸ್. ಎಸ್. ಚೇಲಾಗಳು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಪೆÇೀನ್ ಮೂಲಕ ನಿಂದಿಸುವುದು ಬೆದರಿಕೆ ಹಾಕುವುದರಿಂದ ಅವರ ಧ್ವನಿ ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೆಕೆಆರ್ಟಿಸಿ ಅಧ್ಯಕ್ಷ ಹಾಗೂ ಕೆಪಿಸಿಸಿ ಸದಸ್ಯರಾದ ಅರುಣಕುಮಾರ ಎಂ. ವೈ.ಪಾಟೀಲ ಹೇಳಿದರು
ಸಂಜೆವಾಣಿ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು,
ರಾಷ್ಟ್ರೀಯ ಸ್ವಯಂ ಸೇವಕ ಸಂಘದ 100 ನೇ ವರ್ಷಾಚರಣೆ ಕಾರ್ಯಕ್ರಮಗಳನ್ನು ಸರ್ಕಾರಿ ಶಾಲೆ, ಕಾಲೇಜು, ಮುಜರಾಯಿ ಇಲಾಖೆ ದೇವಸ್ಥಾನಗಳು, ಸರ್ಕಾರಿ ಜಾಗಗಳಲ್ಲಿ ಮಾಡಲು ಅವಕಾಶ ಕೊಡಬಾರದು ಎಂದು ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಸರ್ಕಾರಕ್ಕೆ ಪತ್ರ ಬರೆದ ಹಿನ್ನೆಲೆ ಬಿಜೆಪಿ ಹಾಗೂ ಆರ್.ಎಸ್.ಎಸ್. ಚೇಲಾಗಳು ಸಚಿವರ ಬಗ್ಗೆ ವಯಕ್ತಿಕ ಟೀಕೆಗೆ ಇಳಿದಿರುವುದು ನಾಚಿಗೇಡಿತನ ಸಂಗತಿ ಎಂದು ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರ ಮನವಿಗೆ ಸೂಕ್ತವಾದ ರೀತಿಯಲ್ಲಿ ಸ್ಪಂದಿಸುವ ಮೂಲಕ ನಾಡಿನ ಬಡ ಮಕ್ಕಳು ಓದುವಂಥಹ ಸ್ಥಳಗಳಲ್ಲಿ ಹಾಗೂ ದತ್ತಿ ಇಲಾಖೆಗೆ ಒಳಪಡುವ ದೇವಾಸ್ಥಾನ ಆವರಣಗಳಲ್ಲಿ ಆರ್.ಎಸ್.ಎಸ್. ಬೈಟಾಕ್ ಮತ್ತು ಪಥಸಂಚಲನ ಮಾಡುವುದಕ್ಕೆ ನಿಬರ್ಂಧ ಹೇರಬೇಕು. ಸಂವಿಧಾನ ಒಪ್ಪದ, ನೊಂದಣಿ ಮಾಡಿಕೊಳ್ಳದೆ ಅನಧಿಕೃತವಾಗಿ ನಡೆಸುತ್ತಿರುವ ಆರ್.ಎಸ್.ಎಸ್. ಚಟುವಟಿಕೆಗಳನ್ನು ಸಿಎಂ ಸಿದ್ದರಾಮಯ್ಯ ಸರ್ಕಾರ ಕಡಿವಾಣ ಹಾಕಬೇಕೆಂದು ಎಂದು ಅರುಣಕುಮಾರ ಪಾಟೀಲ ಸರ್ಕಾರಕ್ಕೆ ಮನವಿ ಮಾಡಿದರು.
ಸೈದ್ಧಾಂತಿಕವಾಗಿ ಎದುರಿಸಲಾಗದ ರಣ ಹೇಡಿಗಳು ವಯಕ್ತಿಕ ನಿಂದನೆಗೆ ಇಳಿದಿರುವುದು ನೋಡಿದರೆ, ಅವರ ಹೇಡಿತನವನ್ನು ದೇಶದ ಜನತೆ ನೋಡುತ್ತಿದ್ದಾರೆ. ಸಚಿವ ಖರ್ಗೆ ಒಂಟಿಯಲ್ಲ ಅವರೊಂದಿಗೆ ನಾಡಿನ, ದೇಶದ ಅಸಂಖ್ಯಾತ ದೇಶಭಕ್ತರು ಜೊತೆಗಿದ್ದೇವೆ. ದ್ವೇಷ ಕಾರುವ ಕೃಪಾ ಪೆÇೀಷಿತ ಕಂಪನಿಯಿಂದ ಎಲ್ಲಾ ಸಮುದಾಯದ ಜನ ಅಂತರ ಕಾಯ್ದುಕೊಂಡು ಸಮಾಜದ ಸ್ವಾಸ್ಥ್ಯ ಹಾಳಾಗದಂತೆ ನೋಡಿಕೊಳ್ಳಬೇಕಿದೆ ಎಂದು ಅರುಣಕುಮಾರ ಪಾಟೀಲ ತಿಳಿಸಿದರು.
























