ಯುನಿಕ್ ಕಾಲೇಜಿನಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ ಸಿಗುತ್ತಿದೆ:ಹಂಚಲಿ

ತಾಳಿಕೋಟೆ:ಜ.೧೯: ಇಂದಿನ ದಿನಮಾನದಲ್ಲಿ ಕೇವಲ ಹಣ ಗಳಿಕೆಗೆ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಳ್ಳುತ್ತಿದ್ದರೆ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿಸುವತ್ತ ದಾಪುಗಾಲ ಹಾಕುತ್ತಿರುವ ಯುನಿಕ್ ಸೈನ್ಸ್ ಪಿಯು ಕಾಲೇಜ್‌ನಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕಾಗಿ ಸ್ಪರ್ದಾತ್ಮಕ ಪರಿಕ್ಷೆ ಕೈಗೊಂಡಿರುವದು ಹೆಮ್ಮೆಯ ಸಂಗತಿಯಾಗಿದೆ ಎಂದು ಮಡಿಕೇಶ್ವರ ಸರ್ಕಾರಿ ಪ್ರೌಢ ಶಾಲೆಯ ಉಪನ್ಯಾಸಕರಾದ ಬಸವರಾಜ ಹಂಚಲಿ ಅವರು ಹೇಳಿದರು.
ರವಿವಾರರಂದು ತಾಲೂಕಿನ ಮೂಕೀಹಾಳ ಕ್ರಾಸ್‌ನಲ್ಲಿರುವ ಪ್ರಾರ್ಥನಾ ಶಿಕ್ಷಣ ಸಂಸ್ಥೆಯ ಯುನಿಕ್ ಸೈನ್ಸ್ ಪಿಯು ಕಾಲೇಜ್‌ನಲ್ಲಿ ಪ್ರಥಮ ವರ್ಷಕ್ಕೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗಾಗಿ ಸದ್ಯ ಎಸ್.ಎಸ್.ಎಲ್.ಪರಿಕ್ಷೆಯ ಸಿದ್ದತೆಯಲ್ಲಿರುವ ವಿದ್ಯಾರ್ಥಿಗಳಿಗೆ ಟ್ಯಾಲೇಂಟ್ ಸರ್ಚ ಪರಿಕ್ಷೆ ಸ್ಕಾಲರಸೀಫ್ ಘೋಷಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಬಡತನದ ಹಿನ್ನೆಲೆಯಿಂದ ಬಂದವರು ಈ ಭಾಗದಲ್ಲಿ ಮಕ್ಕಳಿಗಾಗಿಏನಾದರೂ ಮಾಡಬೇಕೆಂಬ ಹಂಬಲದಿAದ ಈ ಯುನಿಕ್ ಸಂಸ್ಥೆ ಯನ್ನು ಕಟ್ಟಿದ್ದಾರೆ ಈ ಪರಿಕ್ಷೆಯನ್ನು ಪಾಸ್ ಆಗುವದು ಮುಖ್ಯವಲ್ಲಾ ನಿಜವಾದ ಶಿಕ್ಷಣವೆಂದರೆ ಕಷ್ಟ ಬಂದಾಗಲು ಸೊಲಾದಗಲು ಮುಂದೆ ಗೆಲ್ಲುತ್ತೇವೆಂಬ ನಂಬಿಕೆಯ ಮೇಲೆ ಶಿಕ್ಷಣವೆಂಬುದು ನಿಂತಿದೆ ಶಾಲೆಯಲ್ಲಿ ಪಾಸ್ ಆಗುವದು ಪರಿಕ್ಷೆಯಲ್ಲಾ ನೀವು ಮುಂದೆ ಕಾಂಪಿಟೆಟಿವ್ಯ ಎಕ್ಸಾಮ್ ಪಾಸ್ ಆಗಿ ಜೀವನವನ್ನು ಕಟ್ಟಿಕೊಂಡು ಮತ್ತೊಬ್ಬರ ಜೀವನಕ್ಕೆ ಆಸರೆ ಆಗುತ್ತಿರಲ್ಲಾ ಅದು ನಿಜವಾದ ಪರಿಕ್ಷೆ ಎದುರಿಸಿದಂತೆ ನೀವು ಸಾಧನೆ ಮಾಡುವ ಮಕ್ಕಳಾಗಿದ್ದಿರಿ ನಿಮ್ಮಗೆ ಜನ್ಮ ನೀಡಿದ ತಾಯಿಯ ಮಾತನ್ನು ಕೇಳಿ ನಿಮ್ಮನ್ನು ಹೆಚ್ಚಾಗಿ ಪ್ರೀತಿಸುವ ಗುರುಗಳ ಮಾತನ್ನು ಕೇಳಿ ಯಾಕೆಂದರೆ ನಿಮ್ಮನು ಹತ್ತಿರದಿಂದ ಗಮನಿಸಿರುತ್ತಾರೆ ಪಾಲಕರು ಮಕ್ಕಳ ಮೇಲೆ ಒತ್ತಡ ಹಾಕಬೇಡಿ ಅವರ ಕನಸ್ಸನ್ನು ಹಾಗೂ ಆಸಕ್ತಿಯನ್ನು ಅರೀತುಕೊಳ್ಳುವಂತಹ ಕಾರ್ಯ ಮಾಡಿ ಶಿಕ್ಷಣ ಒದಗಿಸುವಂತಹ ಕೆಲಸ ಮಾಡಬೇಕೆಂದರು. ಮೂಕೀಹಾಳ ಎಂದರೆ ಭಾವಯುಕ್ಯತೆ ಸ್ಥಳವಾಗಿದೆ ಇಂತಹ ನೆಲದಲ್ಲಿ ಸ್ಥಾಪನೆಯಾಗಿರುವ ಯುನಿಕ್ ಶಿಕ್ಷಣ ಸಂಸ್ಥೆ ಕೇವಲ ೨ ವರ್ಷಗಳಲ್ಲಿ ಅಘಾದವಾದ ಸಾಧನೆಯನ್ನು ಹೊರಗೆ ತರಲು ಮುಂದಾಗಿರುವದು ಮೇಚ್ಚುವಂತಹದ್ದಾಗಿದೆ ಎಂದರು.
ಇನ್ನೋರ್ವ ಅತಿಥಿ ವಿನಾಯಕ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಂಗಮೇಶ ದೇಸಾಯಿ ಅವರು ಮಾತನಾಡಿ ಯುನಿಕ್ ಟೀಮ್ ಒಂದೇ ಬಳಗವಾಗಿದೆ ಸಾವಿರಾರು ಮಕ್ಕಳ ಭವಿಷ್ಯವನ್ನು ರೂಪಿಸಿವಂತಹ ಕೆಲಸ ಈ ಯುನಿಕ್ ಟೀಮ್ ಮಾಡುತ್ತಿದೆ ಎಲ್ಲ ಮಕ್ಕಳನ್ನು ಗುರುತಿಸುವ ಕಾರ್ಯ ಈ ಸಂಸ್ಥೆ ನಡೆಯುತ್ತಿದೆ ಎಲ್ಲ ವಿದ್ಯಾರ್ಥಿಗಳ ಮೇಲೆ ಕಳಕಳಿ ಕಾಳಜಿ ಜೊತೆಗೆ ಶಿಕ್ಷಣ ಒದಗಿಸುವಂತಹ ಕಾರ್ಯ ಮಾಡಲಾಗುತ್ತಿದೆ ಪಾಲಕರು ಉತ್ತಮ ಶಿಕ್ಷಣಕೊಡಿಸಲು ದೂರದೂರದ ಊರುಗಳಿಗೆ ತೆರಳುವದನ್ನು ತಪ್ಪಿಸುವ ಸಲುವಾಗಿ ಈ ಯುನಿಕ್ ವಿಜ್ಞಾನ ಪ.ಪೂ. ಮಹಾ ವಿದ್ಯಾಲಯವನ್ನು ಕಟ್ಟಿದ್ದಾರೆ ವಿದ್ಯಾರ್ಥಿಗಳು ನಿಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಶಾಲೆಯನ್ನು ಸೇರಿಕೊಳ್ಳಿ ಎಂದ ಅವರು ಇಂದಿನ ಸ್ಪರ್ದಾತ್ಮಕ ಯುಗದಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಬೇಕೆಂಬುದು ಎಲ್ಲ ಪಾಲಕರ ಆಸೆಯಾಗಿರುತ್ತದೆ ಆದರೆ ಅದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ರಾಜ್ಯದ ಅನ್ಯ ಜಿಲ್ಲೆಯಲ್ಲಿರುವ ಅನೇಕ ಶಿಕ್ಷಣ ಸಂಸ್ಥೆಗಳು ಈ ಭಾಗದಲ್ಲಿ ಪ್ರಾಚಾರವನ್ನು ಕೈಗೊಂಡು ಪಾಲಕರು ಮತ್ತು ಮಕ್ಕಳನ್ನು ಸೇಳೆಯುವಂತಹ ಕಾರ್ಯ ಮಾಡುತ್ತಿರುವದು ವಿಷಾದನಿಯವಾಗಿದೆ ನಮ್ಮದೇ ಜಿಲ್ಲೆಯಲ್ಲಿ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿಸುವದರೊಂದಿಗೆ ಉತ್ತಮ ವಿದ್ಯಾರ್ಥಿಗಳನ್ನಾಗಿ ರೂಪಿಸುವದರ ಕಡೆಗೆ ಅನೇಕ ಶಿಕ್ಷಣ ಸಂಸ್ಥೆಗಳು ಮುಂದೆ ಬರುತ್ತಿರುವದು ಸಂತೋಷದ ಸಂಗತಿಯಾಗಿದೆ ಕೇವಲ ಎರಡು ವರ್ಷದಲ್ಲಿ ಉತ್ತಮ ಶಿಕ್ಷಣದ ಜೊತೆಗೆ ಅಗಾದವಾದ ಫಲಿತಾಂಶವನ್ನು ನೀಡುವದರೊಂದಿಗೆ ಮುಂದೆ ಸಾಗುತ್ತಿರುವ ಯುನಿಕ್ ಕಾಲೇಜ್‌ನ ಆಡಳಿತ ಮಂಡಳಿ ಟ್ಯಾಲೇಂಟ್ ಸರ್ಚ ಪರಿಕ್ಷೆಯ ಮೂಲಕ ಉಚಿತ ಶಿಕ್ಷಣಕ್ಕೆ ಮುಂದಾಗಿರುವದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಇನ್ನೋರ್ವ ಅತಿಥಿ ಉಪನ್ಯಾಸಕ ವಿಕ್ರಮ ಡೋಲೆ, ಅರ್ಜುನ ರಾಠೋಡ, ಮಾತನಾಡಿ ಈ ಶಿಕ್ಷಣ ಸಂಸ್ಥೆಯಲ್ಲಿ ಸ್ವಾರ್ಥವಿಲ್ಲದ ಉತ್ತಮ ಆಡಳಿತ ಮಂಡಳಿ ಮಕ್ಕಳಲ್ಲಿ ಹೊಸತನ್ನು ತರುವದರೊಂದಿಗೆ ಈ ಭಾಗದ ವಿದ್ಯಾರ್ಥಿಗಳು ವೈಧ್ಯರು, ಇಂಜಿನಿಯರ್ ಅಲ್ಲದೇ ಅನೇಕ ದೊಡ್ಡ ದೊಡ್ಡ ಹುದ್ದೆಯಲ್ಲಿ ಈ ಭಾಗದ ವಿದ್ಯಾರ್ಥಿಗಳು ಬೆಳಗಬೇಕೆಂಬ ಕನಸ್ಸನ್ನು ಕಟ್ಟಿಕೊಂಡು ಹೋಗುತ್ತಿರುವದು ಇಂದು ನಡೆದ ಟ್ಯಾಲೇಂಟ್ ಸರ್ಚ ಪರಿಕ್ಷೆಯೇ ಉದಾರಣೆಯಾಗಿದೆ ಮಕ್ಕಳಲ್ಲಿ ಸ್ಪರ್ದಾತ್ಮಕ ಮನೋಭಾವನೆ ಎಂಬುದು ಬರಬೇಕು ಮಕ್ಕಳಲ್ಲಿರುವ ಚಂಚಲತೆ ದೂರವಾಗಬೇಕು ನಿರ್ದಿಷ್ಟ ಗುರಿಯೊಂದಿಗೆ ಮುಂದೆ ಸಾಗಿದರೆ ಸಾಧನೆಯ ಮೆಟ್ಟಿಲು ಮುಟ್ಟಲು ಸಾಧ್ಯವಾಗಲಿದ್ದು ಉತ್ತಮ ಶಿಕ್ಷಣಕ್ಕೆ ಹೆಸರುವಾಸಿಯಾಗಿರುವ ಯುನಿಕ್ ಸೈನ್ಸ್ ಪಿಯು ಕಾಲೇಜ್ ಮುಂದೆ ಎತ್ತರ ಮಟ್ಟದಲ್ಲಿ ಬೆಳೆಯುವದರೊಂದಿಗೆ ಈ ಭಾಗದಲ್ಲಿ ಶಿಕ್ಷಣದ ಕ್ರಾಂತಿ ಬೆಳೆಸಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುದ್ದೇಬಿಹಾಳ ಕ್ಷೇತ್ರ ಸಮನ್ವಯ ಅಧಿಕಾರಿ ಆರ್.ಬಿ.ದಮ್ಮೂರಮಠ ಅವರು ಮಾತನಾಡಿ ಸಾಧಿಸಬೇಕೆಂಬ ಛಲವಿದ್ದಾಗ ಸಾಧನೆಯ ಗುರಿ ಮುಟ್ಟಲು ಸಾದ್ಯ ಕಡಿಮೆ ಅಂಕಗಳು ಬಂದಿವೆ ಎಂದು ಕುಗ್ಗದೇ ಸಣ್ಣ ಪುಟ್ಟ ದೋಷಗಳನ್ನು ಸರಿಪಡಿಸಿಕೊಂಡು ಉಜ್ವಲ ಭವಿಷ್ಯವನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಸಾಗಿರಿ ಎಂದರು. ಇದೇ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊAಡರು.
ಕಾರ್ಯಕ್ರಮವನ್ನು ಮೂಕೀಹಾಳ ಗ್ರಾಮದ ಮುಖಂಡರಾದ ಕಾಶೀಂಪಟೇಲ ಪಾಟೀಲ ಅವರು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ
ಇದೇ ಸಮಯದಲ್ಲಿ ಟ್ಯಾಲೇಂಟ್ ಸರ್ಚ ಪರಿಕ್ಷೆಯಲ್ಲಿ ವಿಜಯಪುರ ಸೈನಿಕ್ ಸ್ಕೂಲ್ ವಿದ್ಯಾರ್ಥಿ ಸಮೃದ್ದ ದೇಸಾಯಿ ಪ್ರಥಮ, ಬ್ರಿಲಿಯಂಟ್ ಶಾಲೆಯ ಗಂಗಮ್ಮ ಕೊಳೂರ ದ್ವಿತೀಯ, ಮಣಿಕಂಠ ಪತ್ತೇಪೂರ, ರಾಜುಗೌಡ ತಾಳಿಕೋಟಿ, ಸಂತೋಷ ಬಡಿಗೇರ ಅವರಿಗೆ ಫಲಿತಾಂಶದ ಕ್ರಮೇಣದಂತೆ ಸ್ಕಾಲರಸೀಫ್ ಘೋಷಿಸುವದರೊಂದಿಗೆ ಅವರಿಗೆ ಯುನಿಕ್ ಸೈನ್ಸ್ ಪಿಯು ಕಾಲೇಜ್‌ನಲ್ಲಿ ಶಿಕ್ಷಣ ಪಡೆಯಲು ಅವಕಾಶ ಮಾಡಿ ಕೊಡಲಾಯಿತು. ಅಲ್ಲದೇ ವಿಜೇತ ವಿಧ್ಯಾರ್ಥಿಗಳಿಗೆ ಕಾಲೇಜ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಮಯದಲ್ಲಿ ಬ್ರಿಲಿಯಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾನಾಗೌಡ ನಡುವಿನಮನಿ, ಪ್ರೌ.ಶಾ.ಶಿ.ಸಂಘದ ಅಧ್ಯಕ್ಷ ವಾಯ್.ಬಿ.ಬಡಿಗೇರ, ಎಚ್.ಎ.ಮೇಟಿ, ಕಾಲೇಜ್‌ನ ಅಧ್ಯಕ್ಷರಾದ ಎಂ.ಬಿ.ಮಡಿವಾಳರ, ಪ್ರಾಚಾರ್ಯ ಸಂಗಣ್ಣ ಗುರಿಕಾರ, ಗುಂಡುರಾವ ಧನಪಾಲ, ಬಸವರಾಜ ಕುಂಭಾರ, ಅಪ್ಪಾಸಾಹೇಬ ಮೂಲಿಮನಿ, ನಾನಾಗೌಡ ನಡುವಿನಮನಿ, ಬಸವರಾಜ ಮಡಿವಾಳರ, ಟಿ.ಸಿ.ಸಜ್ಜನ, ಪಿ.ಎಚ್.ಸುರಪೂರ, ವ್ಹಿ.ಎನ್.ಯಾತಗಿರಿ, ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕ ಗುಂಡುರಾವ್ ಧನಪಾಲ ಸ್ವಾಗತಿಸಿದರು. ಶಿಕ್ಷಕ ಸಿದ್ದು ಕರಡಿ ನಿರೂಪಿಸಿದರು. ಅಮರೇಶ ಸಜ್ಜನ ವಂದಿಸಿದರು.