ಆಲಮಟ್ಟಿ ಅಣೆಕಟ್ಟೆ ಎತ್ತರ: ಟೆಕ್ನಿಕಲ್ ಟೀಂ ಜೊತೆಗೆ ಚರ್ಚೆ: ಸಚಿವ ಎಂ.ಬಿ. ಪಾಟೀಲ್

ಸಂಜೆವಾಣಿ ವಾರ್ತೆ
ವಿಜಯಪುರ,ಜೂ. ೨:ಆಲಮಟ್ಟಿ ಅಣೆಕಟ್ಟೆ ಎತ್ತರಕ್ಕೆ ಸಂಬAಧಿಸಿ ದಂತೆ ಟೆಕ್ನಿಕಲ್ ಟೀಮ್ ಜೊತೆಗೆ ಚರ್ಚಿಸಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಹೇಳಿದರು.
ಆಲಮಟ್ಟಿ ಅಣೆಕಟ್ಟೆ ಒಂದು ಮೀಟರ್ ಎತ್ತರ ಮಾಡುವುದರಿಂದ ಯಾವುದೇ ರೀತಿಯ ಕಾನೂನು ತೊಡಕಿಲ್ಲ ಎಂದು ಸಚಿವ ಶಿವಾನಂದ ಪಾಟೀಲರ ಹೇಳಿಕೆ ಕುರಿತು ನಗರದಲ್ಲಿ ಭಾನುವಾರ ಅವರು ಪ್ರತಿಕ್ರಿಯಿಸಿದರು.
ಒಂದೇ ಮೀಟರ್ ಹೆಚ್ಚು ಮಾಡಲಿ, ನಾಲ್ಕು ಮೀಟರ್ ಹೆಚ್ಚು ಮಾಡಲಿ ಕಾನೂನಾತ್ಮಕವಾಗಿ ಮಾಡಬೇಕು. ನಮ್ಮ ಟೆಕ್ನಿಕಲ್ ಟೀಂ ಜೊತೆಗೆ ಚರ್ಚಿಸಲಾಗುವುದು ಎಂದರು.
ಎತ್ತರ ಹೆಚ್ಚಳವನ್ನು ಕಾನೂನು ತಂಡ ಹೇಳಬೇಕಾಗುತ್ತದೆ. ಸಚಿವ ಶಿವಾನಂದ ಪಾಟೀಲರ ಹೇಳಿಕೆಯನ್ನು ಪರಿಶೀಲನೆ ಮಾಡುತ್ತೇವೆ.. ಮೋಹನ ಕಾತರಕಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.ಅದನ್ನು ಪರಿಶೀಲನೆ ಮಾಡುತ್ತೇವೆ ಎಂದರು.
ಒAದು ಮೀಟರ್ ಹೆಚ್ಚಳದಿಂದ ಕಾನೂನು ತೊಡಕು ಇಲ್ಲ ಎಂದರೆ ಮಾಡೋಣ. ಎತ್ತರ ಹೆಚ್ಚಳ ಜೊತೆಗೆ ಭೂಸ್ವಾಧೀನ ಸಹ ಮಾಡಿಕೊಳ್ಳಬೇಕಾಗುತ್ತದೆ ಎಂದರು.
ಒAದು ಮೀಟರ್ ಅಂತರದಲ್ಲಿ ಎಷ್ಟು ಹಳ್ಳಿ ಬರುತ್ತವೆ ಅವುಗಳ ಸ್ಥಳಾಂತರ ಸಹ ಮಾಡಬೇಕಾಗುತ್ತದೆ. ಸಲಹೆ ಬಂದಾಗ ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇವೆ. ಈ ಬಗ್ಗೆ ಮೋಹನ್ ಕಾತರಕಿ ಜೊತೆಗೆ ಮಾತನಾಡಿ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.
ಆಲಮಟ್ಟಿ ಅಣೆಕಟ್ಟೆ ಎತ್ತರದಿಂದ ಮಹಾರಾಷ್ಟ್ರದಲ್ಲಿ ಪ್ರವಾಹ ಉಂಟಾಗುವುದಿಲ್ಲ.. ಈಗಾಗಲೇ ಈ ಸಂಬAಧ ರಿಪೋರ್ಟ್ ಗಳು ಬಂದಿವೆ ಎಂದರು.
ಇದು ಎರಡು ಬಾರಿ ಪ್ರೂವ್ ಆಗಿದೆ. ಆ ಆತಂಕಗಳು ಎಲ್ಲವೂ ಸುಳ್ಳು ಎಂದರು.