
ಕಲಬುರಗಿ,ನ.೨೨: ಅಫಜಲಪುರ ತಾಲೂಕಿನ ಹವಳಗಾ ಗ್ರಾಮದಲ್ಲಿರುವ ರೇಣುಕಾ ಶುಗರ್ಸ್ ಕಾರ್ಖಾನೆಯಿಂದ ೨೦೧೪-೧೫, ೨೦೧೫-೧೬ ರ ವರ್ಷದ ಸಂಗ್ರಹವಾದ ರಸ್ತೆಯ ಕರದ ಮೊತ್ತದ ಸುಮಾರು ೫೬ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಅನುದಾನ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮೀತಿ ಅಧ್ಯಕ್ಷ ಎಂ.ಎಸ್ ಪಾಟೀಲ ನರಿಬೋಳ ಆರೋಪಿಸಿದ್ದಾರೆ.
ಈ ಕುರಿತು ಒಂದು ತಾಂತ್ರಿಕ ತಂಡವನ್ನು ರಚಿಸಿ ಕಾಮಗಾರಿಗಳ ಅಂದಾಜು ಪತ್ರಿಕೆಯಂತೆ ಕಾಮಗಾರಿ ಮಾಡದೆ ಬೊಗಸ್ ಬಿಲ್ಲುಗಳನ್ನು ತಯಾರಿಸಿದ ಅಧಿಕಾರಿಗಳ ಮೇಲೆ ಮತ್ತು ಕಾಮಗಾರಿ ಗುತ್ತಿಗೆದಾರರನ ಮೇಲೆ ಪ್ರಕರಣ ದಾಖಲಿಸಬೇಕು. ಒಂದು ವೇಳೆ ಶೀಘ್ರ ಕ್ರಮ ಜರುಗಿಸದೆ ಇದ್ದಲ್ಲಿ ನಮ್ಮ ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ

























