Home ಜಿಲ್ಲೆ ಭಾರತವನ್ನು ಪ್ರೀತಿಸುವವರೆಲ್ಲ ಹಿಂದೂಗಳೆ : ದಿಲೀಪ ವರ್ಣೇಕರ

ಭಾರತವನ್ನು ಪ್ರೀತಿಸುವವರೆಲ್ಲ ಹಿಂದೂಗಳೆ : ದಿಲೀಪ ವರ್ಣೇಕರ

ಔರಾದ್ : ಫೆ.10:ಭಾರತದಲ್ಲಿ ಹುಟ್ಟಿ ಭಾರತವನ್ನು ಪ್ರೀತಿಸುವ ಪ್ರತಿಯೊಬ್ಬರು ಸಹ ಹಿಂದೂಗಳೆ ಎಂದು ಸಾಮಾಜಿಕ ಕಾರ್ಯಕರ್ತ ದಿಲೀಪ ವರ್ಣೇಕರ ಬೆಳಗಾವಿ ಹೇಳಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಡೆದ ಹಿಂದೂ ಸಮ್ಮೇಳನದಲ್ಲಿ ದಿಕ್ಸೂಚಿ ಭಾಷಣ ನೀಡಿದ ಅವರು ಭಾರತವು ಸಾವಿರಾರು ವರ್ಷಗಳ ಇತಿಹಾಸವಿರುವ, ವೇದಗಳು, ಉಪನಿಷತ್ತುಗಳು, ರಾಮಾಯಣ ಮತ್ತು ಮಹಾಭಾರತಗಳ ಭವ್ಯ ಪರಂಪರೆಯನ್ನು ಹೊಂದಿರುವ ಅನನ್ಯ ಸನಾತನ ಸಂಸ್ಕøತಿಯ ದೇಶವಾಗಿದೆ. ಪ್ರೀತಿ, ಗೌರವ ಮತ್ತು ಶಾಂತಿಯುತ ಸಹಬಾಳ್ವೆಯನ್ನು ಪ್ರತಿಪಾದಿಸುವ, ‘ವಸುಧೈವ ಕುಟುಂಬಕಂ’ ಎಂಬ ತತ್ವಕ್ಕೆ ಬದ್ಧವಾಗಿದೆ. ನಮ್ಮ ಭಾರತವನ್ನು ಮತ್ತೆ ಪರಮ ವೈಭವ ಸ್ಥಿತಿಗೆ ಕರೆದೊಯ್ಯುವ ಜವಾವ್ದಾರಿ ನಮ್ಮ ಮೇಲಿದೆ.

ಬ್ರಿಟಿಷರು ವ್ಯಾಪಾರಕ್ಕಾಗಿ ನಮ್ಮಲ್ಲಿ ಬಂದು ನಮ್ಮ ಏಕತೆಯನ್ನು ಒಡೆದು ದೇಶ ಆಳಿದರು, ನಮ್ಮಲ್ಲಿ ಯಾವುದೇ ಜಾತಿ ಇಲ್ಲ ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಕೂಡ ಹಿಂದೂಗಳೆ ಕಾಯಕದಿಂದ ಜಾತಿಗಳು ಹುಟ್ಟಿಕೊಂಡಿದ್ದು, ವಿದೇಶರು ಜಾತಿಗಳ ಹೆಸರನ್ನು ಇಟ್ಟುಕೊಂಡು ಭಾರತವನ್ನು ಒಡೆದು ಆಳಿದರು, ಸ್ವಾಮಿ ವಿವೇಕಾನಂದರು ಛತ್ರಪತಿ ಶಿವಾಜಿ ಮಹಾರಾಜರು ಇಲ್ಲದೆ ಇದ್ದರೆ ನಾವೆಲ್ಲರೂ ಎನಾಗುತ್ತಿದೆಯೋ ಊಹಿಸಲು ಕೂಡ ಆಗದು. ಭಾರತ ಇಡೀ ವಿಶ್ವಕ್ಕೆ ಧರ್ಮವನ್ನು ಕಲಿಸಿಕೊಟ್ಟ ದೇಶ ನಮ್ಮಲ್ಲಿ ಮುಸ್ಲಿಂ ಕ್ರೈಸ್ತ ಎನ್ನುವ ಭೇದವಿಲ್ಲ ಭಾರತದಲ್ಲಿ ಹುಟ್ಟಿ ಭಾರತವನ್ನು ಪ್ರೀತಿಸುವವರನ್ನು ಪೂಜಿಸುವವರನ್ನು ನಾವು ಅಪ್ಪಿಕೊಳ್ಳುತ್ತೇವೆ ನಮ್ಮ ದೇಶದ ಸಂಸ್ಕೃತಿಯನ್ನು ಉಳಿಸುವ ಜೊತೆಗೆ ಪರಿಸರ ಸಂರಕ್ಷಣೆ, ಸ್ವದೇಶಿ ವಸ್ತುಗಳ ಬಳಕೆ ಮಾಡುವ ಮೂಲಕ ಶ್ರೇಷ್ಠ ಭಾರತವನ್ನು ಇನ್ನಷ್ಟು ಶ್ರೇಷ್ಠ ಮಾಡುವ ಕಾರ್ಯ ಪ್ರತಿಯೊಬ್ಬರ ಮಾಡೋಣ ಎಂದು ತಿಳಿಸಿದರು.

ಡೋಣಗಾಂವ ಹಾವಗಿ ಸ್ವಾಮಿ ಮಠದ ಪೂಜ್ಯರಾದ ಷ.ಬೃ 108 ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಭಾರತೀಯ ಸನಾತನ ಸಂಸ್ಕೃತಿಗೆ ಋಷಿಮುನಿಗಳು, ಸಾಧುಸಂತರು ಭದ್ರ ಬುನಾದಿ ಹಾಕಿದ್ದಾರೆ. ಭಾರತ ವೈವಿಧ್ಯತೆ ಯಲ್ಲಿ ಏಕತೆ ಹೊಂದಿರುವ ದೇಶ. ವಿಶ್ವದ ಯಾವುದೇ ದೇಶದಲ್ಲಿ ಇಂಥ ಏಕತೆ ಕಾಣಲು ಸಾಧ್ಯವಿಲ್ಲ. ಭಾರತೀಯ ಸನಾತನ ಪರಂಪರೆಯನ್ನು ಅಳಿಸಿ ಹಾಕಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

ಪಟ್ಟಣದ ದತ್ತ ಮಂದಿರದಿಂದ ಬಸವೇಶ್ವರ ವೃತ್ತದ ವರೆಗೆ ಭವ್ಯ ಶೋಭಾ ಯಾತ್ರೆ ಜರುಗಿತು. ವಾರಕಾರಿ ಸಮಾಜದ ಕೀರ್ತನೆ, ಬಂಜಾರ ನೃತ್ಯ, ಹಲಗೆ ನೃತ್ಯ, ಅನೇಕ ಕಲಾ ತಂಡಗಳು ಮೆರವಣಿಗೆಯಲ್ಲಿ ಮೆರಗು ನೀಡಿದವು. ಭಾರತ ದೇಶದ ಮಹನೀಯರ ವೇಷ ಭೂಷಣ ತೊಟ್ಟ ಮಕ್ಕಳು ಗಮನ ಸೆಳೆದರು.

ಈ ಸಂಧರ್ಭದಲ್ಲಿ ಗುಡಪಳ್ಳಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಹೆಡಗಾಪೂರ ಛಾಪಾ ಮಹಾರಾಜ, ಸಮಿತಿ ಅಧ್ಯಕ್ಷ ಡಾ.ವೈಜಿನಾಥ ಬುಟ್ಟೆ, ಶಾಸಕ ಪ್ರಭು ಚವ್ಹಾಣ, ಮಾಜಿ ಶಾಸಕ ಗುಂಡಪ್ಪ ವಕೀಲ, ಶಿವರಾಜ ಅಲ್ಮಾಜೆ, ವಿಠ್ಠಲ ಕೋಳಿ, ಕಲ್ಲಪ್ಪ ದೇಶಮುಖ, ಅಮೃತರಾವ ಬಿರಾದಾರ, ಕಿರಣ ಉಪ್ಪೆ, ಬಸವರಾಜ ಹಳ್ಳೆ, ಅಶೋಕ ಶೆಂಬೆಳ್ಳಿ, ಆನಂದ ದ್ಯಾಡೆ, ಅಮರಸ್ವಾಮಿ ಸ್ಥಾವರಮಠ, ಬಸವ ಚೌಕಂಪಳ್ಳೆ, ಚಂದ್ರಕಾಂತ ಜೋಶಿ, ಕೇಶವ ಹಕ್ಕೆ, ಸಂದೀಪ ಪಾಟೀಲ ಸೇರಿದಂತೆ ಅನೇಕರಿದ್ದರು.