
ಕೋಲಾರ ,ಮಾ, ೭- ಕೋಲಾರ ಜಿಲ್ಲಾ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜಿಗೆ ಡಿಪಿಆರ್ ತಯಾರಿಸುವ ಯೋಜನೆ ಬಿಟ್ಟರೆ ಮಾವು ಸಂಸ್ಕರಣದ ಘಟಕದ ವಿಷಯವೇ ಪ್ರಸ್ತಾಪವೇ ಇಒಲ್ಲ. ಕೋಈಲಾರಕ್ಕೆ ಮುಖ್ಯವಾಗಿ ವರ್ತೂಲ ರಸ್ಸ್ತೆ ವಿಚಾರವಂತೂ ಇಲ್ಲವೇ ಇಲ್ಲ. ಕೋಲಾರಕ್ಕೆ ಶಾಶ್ವತವಾದ ನೀರಾವರಿ ಯೋಜನೆಗಳ ಕುರಿತು ಪ್ರಸ್ತಾವನೆಯೇ ಇಲ್ಲವಾಗಿದೆ. ಹೈನುಗಾರಿಕೆ ಉದ್ಯಮಕ್ಕೆ ಯಾವೂದೇ ಕೊಡುಗೆ ಇಲ್ಲ. ಎ.ಪಿ.ಎಂ.ಸಿ. ಯಾರ್ಡ್ ಜಾಗದ ಬಗ್ಗೆ ಯಾವೂದೇ ಸದ್ದು ಇಲ್ಲ. ಒಟ್ಟಾರೆಯಾಗಿ ಕೋಲಾರಕ್ಕೆ ಏನೇನು ಇಲ್ಲವಾಗಿದೆ.ಸಾರ್ವಜನಿಕರ ನಿರೀಕ್ಷೆಗಳಿಗೆ ಸಿದ್ದರಾಮಯ್ಯ ಹುಸಿಯ ಗ್ಯಾರೆಂಟಿ ನೀಡಿದೆ ಎಂದು ಬಿಜೆಪಿ. ಜಿಲ್ಲಾಧ್ಯಕ್ಷ ಓಂ ಶಕ್ತಿ ಚಲಪತಿ ವ್ಯಂಗವಾಡಿದ್ದಾರೆ.
ಕೋಲಾರ ಜಿಲ್ಲೆಗೆ ಯಾವ ಬಜೆಟ್‌ನಲ್ಲೂ ಇಷ್ಟೊಂದು ಅನ್ಯಾಯವಾಗಿರಲಿಲ್ಲ. ಕಾಂಗ್ರೇಸ್ ನಾಯಕರು ಇಷ್ಟೂ ದಿನಗಳಿಂದ ಬೂಸಿ ಬಿಡುತ್ತಿದ್ದವರು ತಮ್ಮ ಮಾನ ಮಾರ್ಯದೆ ಉಳಿಸಿ ಕೊಳ್ಳಲು ಕೊಡಲೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಹೊರ ಬರಲಿ ಎಂದು ಒತ್ತಾಯಿಸಿದ್ದಾರೆ.























