
ಕಲಬುರಗಿ,ಸೆ.9: ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರ ವಿದ್ಯಾರ್ಥಿ ಕಲ್ಯಾಣದ ಪರಿಕಲ್ಪನೆ ಅತ್ಯಂತ ವಿಶಾಲವಾದದ್ದು, ಶಿಕ್ಷಣ, ಅನ್ನದಾಸೋಹ, ಕಾಯಕ, ದಾಸೋಹ, ಆಧುನಿಕ ತಂತ್ರಜ್ಞಾನ, ಮಹಿಳಾ ಶಿಕ್ಷಣ, ವ್ಯಕ್ತಿತ್ವ ವಿಕಸನ, ಕ್ರೀಡೆ, ಸಂಸ್ಕøತಿ ಮತ್ತು ಸಮಾಜಸೇವೆ ಇವೆಲ್ಲವೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಅವರು ಮಹತ್ವ ನೀಡಿದ್ದರು ಎಂದು ಗೋದುತಾಯಿ ಪದವಿಪೂರ್ವ ಮಹಿಳಾ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ.ಮರಿಯಮ್ಮ ಅವರು ಹೇಳಿದರು.
ಅಖಿಲ ಭಾರತ ಶಿವಾನುಭವ ಮಂಟಪ ಶರಣಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ 40 ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಮಂಗಳವಾರ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರು ಮತ್ತು ವಿದ್ಯಾರ್ಥಿ ಕಲ್ಯಾಣ ವಿಕಸನ ವಿಷಯ ಕುರಿತು ಮಾತನಾಡಿ, ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಶಿಕ್ಷಣವೇ ಮುಖ್ಯವೆಂಬುದು ಡಾ.ಅಪ್ಪ ಅವರ ದೃಷ್ಟಿಕೋನವಾಗಿತ್ತು. ಅವರ ಮಾರ್ಗದರ್ಶನದಲ್ಲಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಬೌದ್ಧಿಕ, ಸಾಮಾಜಿಕ, ಸಾಂಸ್ಕೃತಿಕ, ನೈತಿಕ ಮತ್ತು ವ್ಯಕ್ತಿತ್ವ ವಿಕಾಸಕ್ಕೆ ಅವಕಾಶ ಕಲ್ಪಿಸಲಾಯಿತು. ಇಂಗ್ಲೀಷ ಓದಿಗೆ ಬಹಳ ಮಹತ್ವ ನೀಡಿದರು.
ವಿದ್ಯಾರ್ಥಿಗಳಲ್ಲಿ ವೃತ್ತಿಪರ ಶಿಕ್ಷಣವನ್ನು ಪ್ರಾರಂಭಿಸಿ ‘ಕಲಿಕೆ ಜೊತೆಗೆ ಗಳಿಕೆ’ ಪರಿಕಲ್ಪನೆಗೂ ಪೆÇ್ರೀತ್ಸಾಹ ನೀಡಿದರು. ಚಿತ್ರಕಲೆ, ಸಂಗೀತ, ಪತ್ರಿಕೋದ್ಯಮ ಎಂಬ ಹೊಸ ಹೊಸ ಕೋರ್ಸುಗಳನ್ನು ತೆರೆದು ವಿದ್ಯಾರ್ಥಿಗಳಲ್ಲಿ ಹೊಸತನ ಕಲಿಸಿದರು. ಅಪ್ಪಾಜಿಯವರು ವಿದ್ಯಾರ್ಥಿಗಳಿಗೆ ತಂತ್ರಜ್ಞಾನ, ಆಧುನಿಕ ಜ್ಞಾನ, ಆಯುರ್ವೇದ ಶಿಕ್ಷಣಕ್ಕೆ ಒತ್ತು ನೀಡಿದರು. ಮಹಿಳಾ ಶಿಕ್ಷಣ ಮತ್ತು ಸಬಲೀಕರಣಕ್ಕೆ ಮಹತ್ವ ನೀಡಿದರು.
ಕಲ್ಯಾಣ ಕರ್ನಾಟಕದ ಹಿಂದುಳಿದ ಪ್ರದೇಶದ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬುದು ಅಪ್ಪಾಜಿಯವರ ಪ್ರಮುಖ ಆಶಯವಾಗಿತ್ತು. ಅವರ ಶಿಕ್ಷಣ ಸಂಸ್ಥೆಗಳಲ್ಲಿ ಅನೇಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿ ದೇಶ-ವಿದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ವಿದ್ಯಾರ್ಥಿಗಳ ದೈಹಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಯೂ ಮುಖ್ಯವೆಂದು ಪರಿಗಣಿಸಿದರು. ‘ನಾನು ಮಾತ್ರ ಬೆಳೆಯಬೇಕು’ ಎಂಬ ಮನೋಭಾವದ ಬದಲು ‘ನನ್ನ ಬೆಳವಣಿಗೆಯ ಮೂಲಕ ಸಮಾಜವೂ ಬೆಳೆಯಬೇಕು’ ಎಂಬ ಚಿಂತನೆ ಅವರದಾಗಿತ್ತು. ಒಟ್ಟಿನಲ್ಲಿ, ‘ವಿದ್ಯಾರ್ಥಿಯ ಬದುಕು ಬೆಳಗಬೇಕು, ಆ ಬೆಳಕು ಸಮಾಜದ ಬದುಕನ್ನೂ ಬೆಳಗಿಸಬೇಕು’ ಎಂಬುವುದೇ ಪೂಜ್ಯರ ವಿದ್ಯಾರ್ಥಿಗಳ ಕಲ್ಯಾಣ ವಿಕಸನವಾಗಿದೆ ಎಂದು ಹೇಳಿದರು.























