ನವಲಗುಂದ,ಆ.೩: ನಮ್ಮ ನಾಡಿನ ಮಾಧ್ಯಮಗಳಿಲ್ಲದೆ ಯಾವುದೇ ಸಂಘ ಸಂಸ್ಥೆಗಳು ಬೆಳೆಯಲು ಸಾಧ್ಯವಿಲ್ಲಾ ಇವತ್ತಿನ ದಿನಮಾನದಲ್ಲಿ ನಿವೃತ್ತ ನೌಕರರು ನಿವೃತ್ತಿ ವೇತನ ಸಲುವಾಗಿ ಸಾಯುವವರೆಗೂ ಹೋರಾಟ ಮಾಡುವ ಪರಿಸ್ಥಿತಿ ಬಂದೋದಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಹಾಗೂ ಹಿರಿಯ ನಾಗರೀಕರ ಕ್ಷೇಮಾಭಿವೃದ್ಧಿ ಸಂಘ ತಾಲ್ಲೂಕು ಅಧ್ಯಕ್ಷ ಕೆ ಎಸ್ ಹೊಸಮನಿ ಸರಕಾರದ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
ಅವರು ಪಟ್ಟಣದಲ್ಲಿರುವ ರಾಜ್ಯ ಸರಕಾರಿ ನೌಕರರ ಸಂಘದ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಹಾಗೂ ಹಿರಿಯ ನಾಗರೀಕರ ಕ್ಷೇಮಾಭಿವೃದ್ಧಿ ಸಂಘ ತಾಲ್ಲೂಕು ಘಟಕದ ಸರ್ವ ಸದಸ್ಯರ ಸಭೆ ಉದ್ದೇಶಿಸಿ ಮಾತನಾಡಿದರು.
ಎ ಎಂ ನದಾಫ್ ಮಾತನಾಡಿ ಸಂಘದ ಕಟ್ಟಡ ನಿರ್ಮಾಣಕ್ಕಾಗಿ ಪುರಸಭೆ ಜಾಗ ಪಡೆಯಲು ಪ್ರಯತ್ನಿಸೋಣ ಎಂದು ತಿಳಿಸಿ ಸಂಘದದಿAದ ಸದಸ್ಯರಿಗೆ ಆಗುವ ಉಪಯೋಗದ ಕುರಿತು ತಿಳಿಸಿದರು. ಇದೆ ವೇಳೆ ಸನ್ಮಾನ ಕಾರ್ಯಕ್ರಮ ಜರುಗಿತು.
ಗೌರವಾಧ್ಯಕ್ಷರಾಗಿ ಎ ಎಂ ನದಾಫ, ಅಧ್ಯಕ್ಷ ಕೆ ಎಸ್ ಹೊಸಮನಿ, ಉಪಾಧ್ಯಕ್ಷ ಪಿ ಸಿ ಹಿರೇಮಠ, ಎಸ್ ವಾಯ್ ಪೂಜಾರ, ಪ್ರಧಾನ ಕಾರ್ಯದರ್ಶಿ ಆರ್ ಬಿ ಬಾಳನಗೌಡ್ರ, ಸಂಘಟನಾ ಕಾರ್ಯದರ್ಶಿ ಎಸ್ ಆರ್ ಬಡೇಖಾನವರ, ಎಸ್ ಬಿ ಅಳಗವಾಡಿ, ಜಂಟಿ ಕಾರ್ಯದರ್ಶಿ ಎನ್ ಬಿ ಬಡಿಗೇರ, ಬಿ ಕೆ ಬಡಿಗೇರ, ಖಜಾಂಚಿ ಎಸ್ ವಿ ಕುಲಕರ್ಣಿ, ಸಂಸ್ಕöÈತಿಕ ಕಾರ್ಯದರ್ಶಿ ಎಸ್ ಡಿ ಬಡಕಲಿ, ಕ್ರೀಡಾಕಾರ್ಯದರ್ಶಿ ಎಸ್ ಎ ಬಾರಕೇರ ಲೆಕ್ಕಪರಿಶೋದಕರಾಗಿ ವಿ ಸಿ ಹಳ್ಳದ ಅವರನ್ನು ನೂತನ ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಯಿತು.
ಇದಕ್ಕೂ ಮೊದಲು ಸಂಘದ ಮಾಜಿ ಅಧ್ಯಕ್ಷ ಮಲ್ಲಪ್ಪ ಬಸಪ್ಪ ಗಂಗಣ್ಣವರ ಅವರಿಗೆ ಶೃದ್ದಾನಂಜಲಿ ಸಲ್ಲಿಸಿ ಮೌನಾಚರಣೆ ಮಾಡಲಾಯಿತು. ಸಭೆಯಲ್ಲಿ ಎಂ ಎಲ್ ಪಾಟೀಲ್, ಎಸ್ ಬಿ ತೋಟಿ, ಜಿ ಆರ್ ಪಾಟೀಲ್, ಎಸ್ ಬಿ ಅಳಗವಾಡಿ, ಪಿ ಕೆ ಬಡಿಗೇರ ಎಸ್ ಡಿ ಬಡಕಲಿ ಸೇರಿ ನೂರಕ್ಕೂ ಹೆಚ್ಚು ನಿವೃತ್ತ ನೌಕರರು ಸಭೆಯಲ್ಲಿ ಪಾಲ್ಗೊಂಡಿದ್ದರು





















