
ಬೆಂಗಳೂರು:ಡಿ.೬: ಅಖಿಲ ಕರ್ನಾಟಕ ಸರಕಾರಿ ಮಹಿಳಾ ನೌಕರರ ಸಮ್ಮೇಳನವು ಈ ಡಿಸೆಂಬರ್ ೪ರಂದು ವಿಧಾನ ಸೌದದ ಬ್ಯಾಂಕ್ವೇಟ್ ಹಾಲ್‌ನಲ್ಲಿ ಆಯೋಜಿಸಲಾಯಿತು. ಈ ಸಮ್ಮೇಳನದಲ್ಲಿ ಕರ್ನಾಟಕ ಸರ್ಕಾರವು ಮಹಿಳಾ ನೌಕರರ ಹಿತಚಿಂತನೆಯನ್ನು ಮೆಚ್ಚಿಕೊಂಡು ಋತು ಚಕ್ರ ರಜೆ ಘೋಷಣೆ ಮಾಡಿದ ಬಗ್ಗೆ ಮಹಿಳಾ ನೌಕರರು ಹರ್ಷ ವ್ಯಕ್ತಪಡಿಸಿದರು.
ಸಭೆಯಲ್ಲಿ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವ ಶ್ರೀಮತಿ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಬೆಳ್ಳಿ ಕಿರೀಟ ತೊಡಿಸುವ ಮೂಲಕ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘ ತಮ್ಮ ಬೇಡಿಕೆಗಳನ್ನು ಮತ್ತು ಸೆಪ್ಟೆಂಬರ್ ೧೩ ರಂದು “ಮಹಿಳಾ ನೌಕರರ ದಿನಾಚರಣೆ” ಘೋಷಣೆಯನ್ನು ಸಮರ್ಥವಾಗಿ ಮುಂದಿಟ್ಟು, ಈ ಐತಿಹಾಸಿಕ ನಿರ್ಧಾರಕ್ಕೆ ತಮ್ಮ ಅಭಿನಂದನೆಗಳನ್ನು ಸಲ್ಲಿಸಿದರು.
ಬೀದರ ಜಿಲ್ಲೆಯ ಸಮಸ್ತ ಸರಕಾರಿ ಮಹಿಳಾ ನೌಕರರ ಪರವಾಗಿ ಧನ್ಯವಾದಗಳನ್ನು ಅರ್ಪಿಸುವುದರೊಂದಿಗೆ ಸನ್ಮಾನ್ಯ ಶ್ರೀ ಮುಖ್ಯ ಮಂತ್ರಿಯವರ ಈ ಐತಿಹಾಸಿಕ ನಿರ್ಧಾರದ ಘೋಷಣೆಯಿಂದಾಗಿ ಅತ್ಯಂತ ಸಂತಸವಾಗಿದೆ ಎಂದು ಬೀದರ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಶ್ರೀಮತಿ ಪಾರ್ವತಿ ಸೋನಾರೆ, ಉಪಾಧ್ಯಕ್ಷರಾದ ಶ್ರೀಮತಿ ವಿಜಯಶೀಲ ಪಿಡಿಓ, ಶ್ರೀಮತಿ ಶಕುಂತಲಾ ದಂಡಿ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಗೀತಾ ಗಡ್ಡೆ, ಕಾರ್ಯದರ್ಶಿಗಳಾದ ಶ್ರೀಮತಿ ಪದ್ಮಾವತಿ ಮಡಿವಾಳ, ಶ್ರೀಮತಿ ಕಾವೇರಿ ಆರ್ ಫುಲೇಕಾರ, ಶ್ರೀಮತಿ ಶಾರದಾ ಎನ್ ಕಲ್ಮಕರ ಸಿಡಿಪಿಒ, ಶ್ರೀಮತಿ ಭಾನು ಪ್ರೀಯಾ ಅರಳಿ, ಶ್ರೀಮತಿ ಸುವರ್ಣ ಹೂಗಾರ, ಶ್ರೀಮತಿ ನರಸಮ್ಮಾ ಪಾಟೀಲ, ಶ್ರೀಮತಿ ಉಮಾದೇವಿ, ಶ್ರೀಮತಿ ಯಮುನಾ ಕಾಂಬಳೆ , ಶ್ರೀಮತಿ ಅಂಬುಜಾ ರೇಣುಕಾ , ವಿದ್ಯಾವತಿ ಹಿರೇಮಠ, ಶ್ರೀಮತಿ ಸುಜಾತಾ ಪೂಜಾರಿ, ಶ್ರೀಮತಿ ಶಿವಕಾಂತಾ ಕಡಕೆ, ಜರಿನಾ ಬೇಗಂ, ವಿಜಯಕುಮಾರಿ ಬಿರಾದರ, ಡಾ ಸುಧಾರಾಣಿ, ಶ್ರೀಮತಿ ಆಪ್ರೀನ್ , ಮುಂತಾದವರು ಹರ್ಷವನ್ನು ವ್ಯಕ್ತ ಪಡಿಸಿದ್ದಾರೆ.ಸಮ್ಮೇಳನವು ಮಹಿಳಾ ನೌಕರರ ಹಿತಚಿಂತನೆಯನ್ನು ಮುಂದುವರಿಸಲು, ಮತ್ತು ಸರ್ಕಾರ-ಸಂಘದ ಸ್ನೇಹಪೂರ್ಣ ಸಹಕಾರವನ್ನು ದೃಢಪಡಿಸುವ ವೇದಿಕೆಯಾಗಿ ನಿರ್ವಹಿಸಲಾಯಿತು.































