ಕಬ್ಬು ಬೆಲೆಯಲ್ಲಿ ನ್ಯಾಯಯುತ ಲಾಭದಾಯಕ ದರ ನಿಗದಿಪಡಿಸಲು ಅಖಿಲ ಭಾರತ ಕಿಸಾನ್ ಸಭಾ ಆಗ್ರಹ

ಬೀದರ :ನ.7:ಜಿಲ್ಲೆಯ ಕಬ್ಬು ಬೆಳೆಗಾರರ ಸಮಸ್ಯೆಗಳ ಪರಿಹಾರ ಹಾಗೂ ಕಬ್ಬಿಗೆ ನ್ಯಾಯಯುತವಾದ ಮತ್ತು ಲಾಭದಾಯಕ ದರ ನಿಗದಿಪಡಿಸುವಂತೆ ಅಖಿಲ ಭಾರತ ಕಿಸಾನ್ ಸಭಾ (ಂIಏS) ಜಿಲ್ಲಾ ಮಂಡಳಿ ಕರ್ನಾಟಕ ಸರಕಾರಕ್ಕೆ ಮನವಿ ಸಲ್ಲಿಸಿದೆ. ಈ ಮನವಿಯನ್ನು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ರವರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಕಳುಹಿಸಲಾಗಿದೆ.

ಪ್ರತಿವರ್ಷ ಸಕ್ಕರೆ ಕಾರ್ಖಾನೆ ಮಾಲಿಕರು ಕಬ್ಬಿನ ದರವನ್ನು ಸರಿಯಾಗಿ ನಿಗದಿಪಡಿಸದೇ, ರೈತರಿಗೆ ಹಣವನ್ನು ಸಮಯಕ್ಕೆ ನೀಡದೇ ಇರುವುದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದು ಇದ್ರಲ್ಲದೇ, ಕೆಲವು ಕಾರ್ಖಾನೆ ಮಾಲಕರು ರೈತರ ಪಹಾಣಿ ಪತ್ರದ ಮೂಲಕ ಬ್ಯಾಂಕ್‍ಗಳಿಂದ ಸಾಲ ಪಡೆದುಕೊಳ್ಳುತ್ತಿರುವುದು ಹಾಗೂ ಬ್ಯಾಂಕ್‍ಗಳು ರೈತರ ಮೇಲೆ ಸಾಲ ಮರುಪಾವತಿಗೆ ಒತ್ತಡ ಹೇರುತ್ತಿರುವುದನ್ನು ಸಂಘಟನೆ ಟೀಕಿಸಿದೆ.

ಕೇಂದ್ರೀಯ ಸರ್ಕಾರ ಕಬ್ಬಿಗೆ ಕನಿಷ್ಟ ಬೆಂಬಲ ಬೆಲೆ (ಒSP) ವನ್ನು ಡಾಕ್ಟರ್ ಸ್ವಾಮಿನಾಥನ್ ಆಯೋಗದ ಶಿಫಾರಸುಗಳಂತೆ ನಿಗದಿಪಡಿಸದಿರುವುದನ್ನು ವಿರೋಧಿಸುವ ಮೂಲಕ, ಕಬ್ಬಿಗೆ ರೂ. 355 ಪ್ರತಿ ಕ್ವಿಂಟಲ ದರ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಒಟ್ಟು ರೂ. 5325 ಪ್ರತಿ ಟನ್ ದರ ನಿಗದಿ ಮಾಡಬೇಕೆಂದು ಅಖಿಲ ಭಾರತ ಕಿಸಾನ್ ಸಭಾÀ ಒತ್ತಾಯಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಅಖಿಲ ಭಾರತ ಕಿಸಾನ್ ಸಭಾ ರಾಜ್ಯ ಉಪಾಧ್ಯಕ್ಷ ಬಾಬುರಾವ ಹೊನ್ನ ಅವರು, “ರೈತರು ಮಣ್ಣಿನಿಂದ ಸಕ್ಕರೆ ಪೆÇೀಷಿಸುತ್ತಿದ್ದಾರೆ. ಆದರೆ ಸಕ್ಕರೆ ಕಾರ್ಖಾನೆ ಗುತ್ತಿಗೆದಾರರು ಮತ್ತು ಸರ್ಕಾರದ ನೀತಿಗಳಿಂದ ರೈತರು ದುರಸ್ತಿತಿಯಲ್ಲಿ ಸಿಲುಕಿದ್ದಾರೆ. ಕಬ್ಬಿಗೆ ನ್ಯಾಯಯುತ ದರ ನೀಡದಿದ್ದರೆ ಹೋರಾಟ ತೀವ್ರಗೊಳ್ಳಲಿದೆ” ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ನಜೀರ್ ಅಹ್ಮದ್ ಚೊಂಡಿ (ಜಿಲ್ಲಾ ಅಧ್ಯಕ್ಷರು), ಎಂ.ಡಿ. ಖಮರ ಪಟೇಲ್ (ತಾಲ್ಲೂಕಾ ಅಧ್ಯಕ್ಷರು), ಬಸವರಾಜ ಪಟೇಲ್ (ಸದಸ್ಯರು) ಉಪಸ್ಥಿತರಿದ್ದರು.