
ನವಲಗುಂದ,ನ18 : ಸಹಕಾರಿ ಸಂಘಗಳು ಬಲೀಷ್ಠವಾದಲ್ಲಿ ರೈತರಿಗೆ ಹೆಚ್ಚು ಸಹಕಾರಿಯಾಗಲಿದ್ದು, ಸಹಕಾರಿ ಸಂಘಗಳಿಂದ ಪಕ್ಷಾತೀತ ಹಾಗೂ ರಾಜಕೀಯವನ್ನು ಬದಿಗಿಟ್ಟು ಶ್ರಮಿಸಿದಲ್ಲಿ ಗ್ರಾಮೀಣ ಪ್ರದೇಶದಲ್ಲಿನ ಜನತೆಗೆ ಅನುಕೂಲವಾಗುತ್ತದೆ ಎಂದು ಶಾಸಕ ಎನ್,ಎಚ್,ಕೋನರಡ್ಡಿ ಹೇಳಿದರು.
ಅವರು ಪಟ್ಟಣದ ಶಿಕ್ಷಕರ ಸಹಕಾರ ಕಲ್ಯಾಣ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್ ಹಾಗೂ ನಾನಾ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 72 ನೇ ಅಖಿಲ ಭಾರತ ಸಹಕಾರ ಸಪ್ತಾಹದ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಮಾತನಾಡಿ ಪ್ರತಿ ಹಳ್ಳಿಯಲ್ಲಿಯೂ ಅನ್ನನೀಡುವ ರೈತನಿಗೆ ಸಹಕಾರ ಸಂಘದ ಮೇಲೆ ನಂಬಿಕೆಹೆಚ್ಚು ಸಹಕಾರ ಸಂಘಗಳು ಉನ್ನತಮಟ್ಟದಲ್ಲಿ ಬೆಳೆಯಬೇಕಾಗಿದೆ ಎಂದರು.
ಮಾಜಿ ಶಾಸಕ ಮೋಹನ ಲಿಂಬಿಕಾಯಿ ಸಹಕಾರ ಧ್ವಜಾರೋಹಣ ನೆರವೇರಿಸಿದರು, ಗಣೇಶ ಹೋಳಿಯನ್ನವರ ಅಧ್ಯಕ್ಷತೆ ವಹಿಸಿದ್ದರು. ಸಹಕಾರಿ ಧುರಿಣರಾದ ಸದುಗೌಡ ಪಾಟೀಲ, ಬಾಪೂಗೌಡ ಪಾಟೀಲ, ಎ.ಬಿ. ಹಿರೇಮಠ ಮಾತನಾಡಿದರು.ಇದೇ ಸಂದರ್ಭದಲ್ಲಿ ಸಹಕಾರಿ ರತ್ನ ಪುರಸ್ಕೃತರನ್ನು ಹಾಗೂ ಗಣ್ಯರನ್ನು ಸತ್ಕರಿಸಲಾಯಿತು.
ನಾಗಪ್ಪ ಸಂಕದ, ಲಿಂಗರಾಜ ಕಮತ ,ಹಸನಸಾಬ ನಾಸಿಪುಡಿ, ಚಂಬಣ್ಣ ಹಾಳದೋಟರ, ಗುರುಪ್ರಸಾದ ಪಾಟೀಲ, ಸುರೇಶ ಬಣವಿ, ಎ ,ಬಿ ಬಾಗಿ, ಉಮೇಶ ಹೇಬಸೂರ, ಪಕ್ಕೀರಗೌಡ ಕಲ್ಲನಗೌಡ್ರ, ಜಿ ಎನ್ ತೋಟದ, ಶ್ರೀನಿವಾಸ ಬೂದಿಹಾಳ, ಸಿದ್ದಲಿಂಗಪ್ಪ ಮದ್ನೂರ, ನಾಗನಗೌಡ ಪಾಟೀಲ ಎಸ್ ವೈ ಉಳ್ಳಿಕಾಶಿ, ಸುರೇಶ ಹಡಪದ ಎಂ.ಬಿ.ದಾನಪ್ಪಗೌಡರ ಉಪಸ್ಥಿತರಿದ್ದರು.






















