Home ಜಿಲ್ಲೆ ಕಲಬುರಗಿ ಜೀತ ಪದ್ಧತಿ ನಿರ್ಮೂಲನೆಗಾಗಿ ಎಲ್ಲಾ ಇಲಾಖೆಗಳುಒಂದಾಗಿ ಶ್ರಮಿಸಲಿ: ಶ್ರೀನಿವಾಸ್ ನವಲೆ

ಜೀತ ಪದ್ಧತಿ ನಿರ್ಮೂಲನೆಗಾಗಿ ಎಲ್ಲಾ ಇಲಾಖೆಗಳುಒಂದಾಗಿ ಶ್ರಮಿಸಲಿ: ಶ್ರೀನಿವಾಸ್ ನವಲೆ

ಕಲಬುರಗಿ. ಫೆ 12:ಸಮಾಜದಲ್ಲಿ ನೂರಾರು ವರ್ಷಗಳಿಂದ ಬೇರು ಬಿಟ್ಟಿರುವ ಜೀತಪದ್ಧತಿಯನ್ನು ಪ್ರಸ್ತುತ ಕಾನೂನಿನಡಿ ನಿರ್ಮೂಲನೆ ಮಾಡಬೇಕಾದದ್ದು ನಮ್ಮ ಕರ್ತವ್ಯವಾಗಿದ್ದು, ನಮ್ಮ ಜಿಲ್ಲೆಯನ್ನು ಜೀತಮುಕ್ತ ಜಿಲ್ಲೆಯಾಗಿಸುವಲ್ಲಿ ಹಾಗೂ ಸಂವಿಧಾನದ ಆಶಯವನ್ನು ಈಡೇರಿಸಲು ಎಲ್ಲ ಇಲಾಖೆಯವರು ಕೈಜೋಡಿಸಬೇಕೆಂದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀನಿವಾಸ್ ನವಲೆ ಅವರು ಕರೆ ಕೊಟ್ಟರು.
ಬುಧುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಿ ಕಾರ್ಯಾಲಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿವಿಧ ಇಲಾಖೆ ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ “ಜೀತ ಪದ್ಧತಿ ರದ್ಧತಿ ದಿನಾಚರಣೆ” ಉದ್ಫಾಟಿಸಿ ಮಾತನಾಡಿದರು.
ಜಮೀನ್ದಾರರು, ಶ್ರೀಮಂತರು ಬಡವರಿಗೆ ಸಾಲದ ರೂಪದಲ್ಲಿ ಹಣವನ್ನು ಕೊಟ್ಟು ಅದನ್ನು ತೀರಿಸಲು ಆಗದೆ ಇದ್ದಾಗ ಅದಕ್ಕೆ ಪ್ರತಿಯಾಗಿ ಬೆದರಿಕೆ ಹಾಕಿ, ಭಯಪಡಿಸಿ, ಜೀತದಾಳಾಗಿ ದುಡಿಸಿಕೊಳ್ಳುವುದು ಮತ್ತು ಆ ಹಣಕ್ಕೆ ಬಡ್ಡಿ, ಚಕ್ರಬಡ್ಡಿ ಮಾಡಿ ಅವರನ್ನು ಒತ್ತಾಯ ಪೂರ್ವಕವಾಗಿ ದುಡಿಸಿಕೊಳ್ಳುವುದು ಕ್ರೂರತೆ ಎಂದು ಹೇಳಿದರು.
ಜಿಲ್ಲಾ ಕಾರ್ಮಿಕ ಉಪವಿಭಾಗದ ಅಧಿಕಾರಿಗಳಾದ ಶರಣಪ್ಪಾ ಆರ್ ಹಳಿಮನಿ ಅವರು ಮಾತನಾಡಿ, ಬಡತನವನ್ನು ಬಳಸಿಕೊಂಡು ಬಾಲಕರನ್ನು ಕಾರ್ಮಿಕರನ್ನಾಗಿ ಇಟ್ಟಂಗಿ ಬಟ್ಟಿ, ಕೃಷಿ, ಹೋಟೆಲ್ ಮುಂತಾದ ಚಟುವಟಿಕೆಗಳಲ್ಲಿ ಜೀತದಾಳಾಗಿ ಕಡಿಮೆ ದುಡ್ಡಿಗೆ ಕೆಲಸ ಮಾಡಿಸಿಕೊಳ್ಳುವುದು ಪಾಪದ ಕೆಲಸವಾಗಿದೆ ಎಂದು ಹೇಳಿದರು
ಸಂವಿಧಾನದಡಿಯ ಎಲ್ಲ ಹಕ್ಕುಗಳು, ಸೌಲಭ್ಯಗಳು, ಸೌಕರ್ಯಗಳು ಎಲ್ಲ ವರ್ಗದವರಿಗೂ ದೊರೆಯಬೇಕು ಜೀತದಾಳಗಿಸುವರನ್ನು ಗುರ್ತಿಸಿ ಶಿಕ್ಷಿಸುವ ಕಾರ್ಯ ಸರ್ಕಾರದ ಅಧಿಕಾರಿಗಳು ಹಾಗೂ ಸರ್ಕಾರೇತರ ಅಧಿಕಾರಿಗಳು ಇದಕ್ಕೆ ಶ್ರಮಿಸಬೇಕೆಂದರು.
ಕಲಬುರಗಿ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಮಂಜುಳಾ ಪಾಟೀಲ ಮಾತನಾಡಿ, ಜೀತ ಪದ್ಧತಿಯು ವಾಸ್ತವವಾಗಿ 50 ವರ್ಷಗಳ ಹಿಂದೆ ಈ ರದ್ದಾಗಿದ್ದರೂ ಸಹ ಇಂದಿಗೂ ಸಮಾಜದ ಕೆಲವು ಭಾಗಗಳಲ್ಲಿ ಇದು ಅಸ್ತಿತ್ವದಲ್ಲಿದೆ.
ಈ ಕುರಿತಂತೆ ಇತ್ತೀಚಿನ ಘಟನೆಯನ್ನು ಸ್ಮರಿಸಿದ ಅವರು ಚಿಂಚೋಳಿಯ ಒಂದು ಪ್ರಕರಣದಲ್ಲಿ, 8ನೇ ಮತ್ತು 9ನೇ ತರಗತಿಯ ಮಕ್ಕಳನ್ನು ವಾರ್ಷಿಕ ಕೇವಲ 40,000 ರೂಪಾಯಿಗೆ ಜೀತ ಪದ್ಧತಿಯಲ್ಲಿ ಇರಿಸಲಾಗಿತ್ತು. ಈ ಮಕ್ಕಳು ಕಳೆದ ಮೂರು ವರ್ಷಗಳಿಂದ ಶಾಲೆಗೆ ಹೋಗದೆ ದನ ಕಾಯುವುದು, ಮನೆ ಕೆಲಸ ಮತ್ತು ಶೌಚಾಲಯ ಸ್ವಚ್ಛಗೊಳಿಸುವಂತಹ ಕೆಲಸಗಳನ್ನು ಮಾಡುತ್ತಿದ್ದರು, ಈ ಪ್ರಕರಣದಲ್ಲಿ ಶೋಷಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದರು.
ಕಲಬುರಗಿ ಸಹಾಯಕ ಕಾರ್ಮಿಕ ಆಯುಕ್ತರಾದ ಮೊಹಮ್ಮದ್ ಬಷೀರ್ ಅನ್ಸಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪುನರ್ವಸತಿ ಬಿಡುಗಡೆಗೊಳಿಸಲಾದ ಜೀತದಾಳುಗಳಿಗೆ ಸಮಗ್ರ ಪುನರ್ವಸತಿ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಜೀತ ಬಿಡುಗಡೆ ಪ್ರಮಾಣಪತ್ರದೊಂದಿಗೆ ರೂ.30,000 ತುರ್ತು ಪರಿಹಾರಧನ, ತಿಂಗಳಿಗೆ ರೂ.1000 ರಂತೆ 24 ತಿಂಗಳಿಗೆ ತಲಾ ರೂ 24000 ಅನುದಾನ ಕಾಲಮಿತಿಯೊಳಗೆ ಒದಗಿಸಲಾಗುತ್ತಿದೆ ಎಂದರು.
ನಿವೇಶನ ಹಂಚಿಕೆ, ವಸತಿ ಸೌಕರ್ಯ, ಶೌಚಾಲಯ ನಿರ್ಮಾಣ, ಕುಡಿಯುವ ನೀರು , ವಿದ್ಯುತ್ ಸೌಲಭ್ಯಗಳನ್ನು ಆದ್ಯತೆಯ ಮೇರೆಗೆ ನಿಡುವುದು. ಶಿಕ್ಷಣ ಪಡೆದುಕೊಳ್ಳುವ ವಯಸ್ಸಿನ ಮಕ್ಕಳಿದ್ದಲ್ಲಿ ಶಾಲಾ ದಾಖಲಾತಿಯನ್ನು ಮಾಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಇಲಾಖೆಯ ಸೌಲಭ್ಯಗಳ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಕಲಬುರಗಿ ಹೆಚ್ಚುವರಿ ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿಗಳಾದ ಮಹೇಶ್ ಮೇಘಣ್ಣನವರ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ವಿಶ್ವರಾಧ್ಯ ಇಜೇರಿ, ಜೀತ ಪದ್ಧತಿ ಜಾಗೃತಿ ಉಪ ಸಮಿತಿಯ ಸದಸ್ಯರಾದ ಶಿವಕುಮಾರ್ ರೇಷ್ಮಿ, ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದರು. ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ನಿರ್ದೇಶಕರಾದ ಸಂತೋμï ಕುಲಕರ್ಣಿ ನಿರೂಪಣೆ ಮಾಡಿದರು. ಕಾನೂನು ಪರಿವೀಕ್ಷಣಾಧಿಕಾರಿಯಾದ ಭರತೇಶ್ ಶೀಲವಂತ ಅವರು ವಂದನಾರ್ಪಣೆ ಮಾಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀನಿವಾಸ್ ನವಲೆ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ಜೀತ ಮುಕ್ತ ಪ್ರತಿಜ್ಞೆಯನ್ನು ಭೋದಿಸಿದರು.