ಆಳಂದ್: ವಿದ್ಯುತ್ ತಗಲಿ ಆಕಳು ಸಾವು

ಆಳಂದ್,ಮೇ.27-ಪಟ್ಟಣದ ಹನುಮಾನ್ ದೇವಸ್ಥಾನ ಬಳಿಯ ಡಿಗ್ರಿ ಕಾಲೇಜ್ ಮಾರ್ಗದಲ್ಲಿ ವಿದ್ಯುತ್ ಟ್ರಾನ್ಸ್‍ಫಾರ್ಮರ್‍ನ ತಗಡಿಗೆ ಸಿಲುಕಿ ಆಕಳೊಂದು ಮೃತಪಟ್ಟ ಘಟನೆ ನಡೆದಿದೆ.
ಪಟ್ಟಣದ ಹತ್ಯಾನ ಗಲ್ಲಿಯ ನಿವಾಸಿ ರೇವಣಸಿದ್ದಪ್ಪ ನಾಗದೇ ಎಂಬುವರಿಗೆ ಸೇರಿದ ಆಕಳು ಹೊಲಕ್ಕೆ ಹೋಗುವ ವೇಳೆ ಈ ದುರ್ಘಟನೆ ಸಂಭವಿಸಿದೆ.
ಸ್ಥಳಕ್ಕೆ ಪಶು ವೈದ್ಯರು, ಜೆಸ್ಕಾಂ ಸಿಬ್ಬಂದಿ, ಪುರಸಭೆ ಸದಸ್ಯ ಶ್ರೀಶೈಲ್ ಪಾಟೀಲ್, ಸಂದೇಶ್ ಜವಳಿ ಹಾಗೂ ರೈತರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಟ್ರಾನ್ಸ್‍ಫಾರ್ಮರ್‍ನಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಅಳವಡಿಸದಿರುವುದು ಈ ಸಾವಿಗೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮುಂದೆ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಜೆಸ್ಕಾಂ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಜೀವಹಾನಿ ತಡೆಯಬೇಕೆಂದು ಸ್ಥಳೀಯ ರೈತರು ಮತ್ತು ನಾಗರಿಕರು ಒತ್ತಾಯಿಸಿದ್ದಾರೆ.