ಪ್ರಿಯಾಂಕ್‍ಗೆ ನಿಂದನೆ: ಅಜಯಸಿಂಗ್ ಖಂಡನೆ

ಕಲಬುರಗಿ.ಮೇ.28:ರಾಜ್ಯದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆಗೆ ಮೇಲ್ಮನೆ ಬಿಜೆಪಿ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಅವರು ಅಸಂಸದೀಯ ಪದ ಬಳಸಿ ಮಾಡಿದರು ಎನ್ನಲಾದ ನಿಂದನೆಗೆ ಕೆಕೆಆರ್‍ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಕಟುವಾದ ಶಬ್ದಗಳಲ್ಲಿ ಖಂಡಿಸಿದ್ದಾರೆ.
ಬಿಜೆಪಿ ನಾಯಕರು ಆಡು ಭಾಷೆಯಲ್ಲಿ ಗಾದೆ ಮಾತು ಹೇಳಿದ್ದೇವೆ ಎಂದು ಸಚಿವರನ್ನು ಶ್ವಾನಕ್ಕೆ ಹೋಲಿಕೆ ಮಾಡಿ ಜರಿದಿದ್ದಾರೆ, ಇದು ಅಕ್ಷಮ್ಯ ಅಪರಾಧ, ನಂತರ ಕಲಬುರಗಿ ಹೋರಾಟದಲ್ಲಿಯೂ ರಿಪಬ್ಲಿಕ್ ಆಫ್ ಕಲಬುರಗಿ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಇದು ಶುದ್ಧ ಸುಳ್ಳು, ಕಲಬುರಗಿ ಜನರಿಗೆ ಕಾಂಗ್ರೆಸ್ ಇತಿಹಾಸ ಗೊತ್ತಿದೆ. ನಮ್ಮ ಪಕ್ಷ ಅಧಿಕಾರದಲ್ಲಿ ಇದ್ದಾಗ ಅಭಿವೃದ್ಧಿ ನಡೆದಿದೆಯೇ ವಿನಹಃ ಬೇರಾವ ಕೆಲಸಗಳು ನಡೆದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಯಾರೇ ಆಗಲಿ ವೈಯಕ್ತಿಕ ಟೀಕೆಗಳಿಗೆ ಮುಂದಾಗಲೇಬೇರಾದು. ಚಿತ್ತಾಪುರ ಘಟನೆ ಸರಿ ತಪೆÇ್ಪೀ ಎಂದು ನಿರ್ಧರಿಸೋದಕ್ಕಿಂತ ಅದು ಜನರ ಆ ಕ್ಷಣದ ಸ್ವಾಭಾವಿಕ ಆಕ್ರೋಶ ಆಗಿತ್ತು. ಹಾಗಂತ ಆ ಘಟನೆಗೆ ಪ್ರಿಯಾಂಕ್ ಅವರೇ ಪ್ರೇರಣೆ ಎಂದು ಆರೋಪಿಸುವು ಎಷ್ಟು ಸರಿ? ಪೆÇಲೀಸರು ಭದ್ರತೆ ದೃಷ್ಟಿಯಿಂದ ತಮ್ಮ ಕೆಲಸ ಮಾಡಿದ್ದಾರೆ. ಇಡೀ ವ್ಯವಸ್ಥೆಯನ್ನೇ ಮನ ಬಂದಂತೆ ಟೀಕಿಸುವ ಬಿಜೆಪಿಗರದ್ದು ಮಿಥ್ಯಾರೋಪ. ಸಾರ್ವಜನಿಕ ಬದುಕಲ್ಲಿ ನಮ್ಮ ನಡೆ ನುಡಿ ಯಾರಿಗೂ ನೋವು ತರದಂತೆ ಸ್ಪಷ್ಟ ಆಗಿರಬೇಕು ಎಂದು ಡಾ ಅಜಯ್ ಸಿಂಗ್ ಹೇಳಿದ್ದಾರೆ.