ಅಹಮದಾಬಾದ್,ಜೂ.೧೩:ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಏರ್‌ಇಂಡಿಯಾ ವಿಮಾನ ದುರಂತಕ್ಕೆ ಏರ್‌ಇಂಡಿಯಾ ಸಿಇಓ ಕ್ಯಾಂಪ್‌ಬೆಲ್ ವಿನ್ಸನ್ ವಿಷಾದ ವ್ಯಕ್ತಪಡಿಸಿದ್ದಾರೆ.
ವಿಮಾನ ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡುವ ಮುನ್ನ ಮಾತನಾಡಿರುವ ಅವರು, ವಿಮಾನ ಅಪಘಾತದ ತನಿಖೆಗಳು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಅಲ್ಲಿಯವರೆಗೂ ಈ ಬಗ್ಗೆ ನಾವು ಹೆಚ್ಚನದದ್ದೇನೂ ಹೇಳಲು ಸಾಧ್ಯವಿಲ್ಲ. ವಿಮಾನ ದುರಂತ ನಡೆದ ದಿನ ನಮಗೆಲ್ಲರಿಗೂ ಕಷ್ಟಕರ ದಿನವಾಗಿದೆ. ಈ ಬಗ್ಗೆ ನಾನು ತೀವ್ರ ದುಃಖ ವ್ಯಕ್ತಪಡಿಸುತ್ತೇನೆ.
ವಿಮಾನ ದುರಂತದ ಬಗ್ಗೆ ನಿಮ್ಮಲ್ಲಿ ಹಲವು ಪ್ರಶ್ನೆಗಳಿವೆ ಎಂದು ನನಗೆ ತಿಳಿದಿದೆ. ಈ ಸಂದರ್ಭದಲ್ಲಿ ನಾನು ಅವೆಲ್ಲದ್ದಕ್ಕೂ ಉತ್ತರಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
ನಮ್ಮ ಗಮನ ಈಗ ನಮ್ಮ ಪ್ರಯಾಣಿಕರು, ಸಿಬ್ಬಂದಿ ಸದಸ್ಯರು, ಅವರ ಕುಟುಂಬಗಳು ಮತ್ತು ಪ್ರೀತಿಪಾತ್ರರ ಅಗತ್ಯಗಳ ಮೇಲೆ ಕ್ರೇಂದ್ರೀಕೃತವಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಪಘಾತಕ್ಕೀಡಾದ ಏರ್‌ಇಂಡಿಯಾ ವಿಮಾನವು ೨೩೦ ಪ್ರಯಾಣಿಕರು ಮತ್ತು ೧೨ ಸಿಬ್ಬಂದಿಯನ್ನು ಕರೆದೊಯ್ಯುತ್ತಿತ್ತು. ಪ್ರಯಾಣಿಕರಲ್ಲಿ ೧೬೯ ಭಾರತೀಯ ಪ್ರಜೆಗಳು, ೫೩ ಬ್ರಿಟಿಷ್ ಪ್ರಜೆಗಳು, ೭ ಪೋರ್ಚುಗೀಸ್ ಪ್ರಜೆಗಳು ಹಾಗೂ ಓರ್ವ ಕೆನಡಾದ ಪ್ರಜೆ ಇದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.
ವಿಮಾನ ದುರಂತದ ನಂತರ ತುರ್ತು ಕ್ರಮಗಳಿಗೆ ಏರ್‌ಇಂಡಿಯಾ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತದೆ. ವಿಮಾನ ಅಪಘಾತದ ತನಿಖೆಗಳು ಸಮಯ ತೆಗೆದುಕೊಳ್ಳುತ್ತದೆ. ಅಲ್ಲಿಯವರೆಗೂ ಏನೇ ವಿಚಾರವಾದರೂ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.