ವಿಜಯಪುರ:ಜೂ.13:ಅಹಮದಾಬಾದ್ ವಿಮಾನ ನಿಲ್ದಾಣ ಬಳಿ ಏರ್ ಇಂಡಿಯಾ ವಿಮಾನ ಪತನ ಘಟನೆಯಲ್ಲಿ ಅಸುನೀಗಿದ ಪ್ರಯಾಣಿಕರ, ಸಿಬ್ಬಂದಿಗಳ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಹ್ಮದಾಬಾದ್ ವಿಮಾನ ನಿಲ್ದಾಣ ಬಳಿ ನಡೆದಿರುವ ಘಟನೆ ಅತ್ಯಂತ ನೋವು ತರಿಸಿದೆ. ಅಗಲಿದ ಕುಟುಂಬಕ್ಕೆ ಸಾಂತ್ವನ ಹೇಳಲು ಪದಗಳೇ ಇಲ್ಲದಷ್ಟು ದುಃಖವಾಗಿದೆ ಎಂದು ಜಿಗಜಿಣಗಿ ಕಂಬನಿ ಮಿಡಿದಿದ್ದಾರೆ.