Home ಜಿಲ್ಲೆ ಕಲಬುರಗಿ ಸಮಾಜಕ್ಕೆ ಅಹಿಲ್ಯಾಬಾಯಿ ಹೋಳ್ಕರ ಕೊಡುಗೆ ಅಪಾರ

ಸಮಾಜಕ್ಕೆ ಅಹಿಲ್ಯಾಬಾಯಿ ಹೋಳ್ಕರ ಕೊಡುಗೆ ಅಪಾರ

ಕಲಬುರಗಿ:ಮೇ.೩೧: ಮಹಿಳಾ ಸ್ವಾತಂತ್ರ ಹೋರಾಟಗಾರ್ತಿ, ಹಿಂದುಳಿದವರು, ಮಹಿಳೆಯರು, ಬಡವರ ಪರ ಹೋರಾಟ ಮಾಡಿ, ಪ್ರತಿಯೊಬ್ಬರಿಗೂ ಶಿಕ್ಷಣ ದೊರೆಯಲು ಶ್ರಮಿಸಿದ, ಅನೇಕ ಕೆರೆ-ಕಟ್ಟೆಗಳನ್ನು ನಿರ್ಮಿಸಿ ಸಮಾಜಪರ ಕೆಲಸಗಳನ್ನು ಮಾಡಿದ ಅಹಿಲ್ಯಾಬಾಯಿ ಹೋಳ್ಕರ ಅವರು ಬಹುಮುಖಿ ವ್ಯಕ್ತಿತ್ವದ ಮಹಾನ ಸಾಧಕಿಯಾಗಿ ಭಾರತೀಯ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಗಂಗಾ ನಗರದಲ್ಲಿರುವ ‘ಸಾಮಿ ವಿವೇಕಾನಂದ ಪ್ರೌಢಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಜರುಗಿದ ‘ಅಹಿಲ್ಯಾಬಾಯಿ ಹೋಳ್ಕರ್‌ರ ೩೦೧ನೇ ಜಯಂತಿ’ಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಸಂಸ್ಥೆಯ ಅಧ್ಯಕ್ಷ ಬಸವರಾಜ ಮಳ್ಳಿ ಮಾತನಾಡಿ, ಆಧುನಿಕ ಭಾರತದ ಇತಿಹಾಸದಲ್ಲಿ ಹೋಳ್ಕರ ಅವರ ಹೆಸರು ಪ್ರಮುಖವಾಗಿದೆ. ಭಾರತದ ಸ್ವಾತಂತ್ರಕ್ಕಾಗಿ ಕೆಚ್ಚೆದೆಯಿಂದ ಹೋರಾಟ ಮಾಡುವ ಮೂಲಕ ಮಹಿಳಾ ಲೋಕಕ್ಕೆ ಮಾದರಿಯಾಗಿದ್ದಾರೆ. ಸದಾ ಸಮಾಜಪರ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇಂತಹ ಮಹಾನ ಸಾಧಕಿಯ ಪರಿಚಯಿಸುವ ಕಾರ್ಯ ಜರುಗಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಾಲೆಯ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಎಸ್.ಗುಡಬಾ, ಕಾವೇರಿ ವಿ.ಹೂನಳ್ಳಿ, ಶಿಕ್ಷಕರಾದ ಲಕ್ಷ್ಮೀಪುತ್ರ ಪೂಜಾರಿ, ಶಶಿಕಲಾ ಬಿ.ಕುಂಬಾರ, ಸೋನಿಯಾ ಎಸ್., ಅರ್ಚನಾ ಕುಲಕರ್ಣಿ, ಪ್ರತಿಭಾ ಎಸ್.ಸಿಡಘಂಟಿ, ವಿಶಾಲಾಕ್ಷಿ ಡಿ.ಕುಲಕರ್ಣಿ, ಸಿದ್ದಮ್ಮ ಎಂ.ಕುAಬಾರ, ಮೀನಾಕ್ಷಿ ಸೇರಿದಂತೆ ಇನ್ನಿತರರಿದ್ದರು.