ಬೆಳೆ ವಿಮೆ ನೊಂದಣಿ ಮಾಡಿಕೊಳ್ಳುವಂತೆ ಸಲಹೆ

ಕಾಳಗಿ :ಜು.೨:ರಟಕಲ್ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸದಸ್ಯತ್ವ ಪಡೆದ ಸದಸ್ಯರಿಗೆ ಉಚಿತವಾಗಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅರ್ಜಿ ಆನ್ ಲೈನ್ ಮೂಲಕ ಹಾಕಲಾಗುವುದು ಎಂದು ಸಂಘದ ಅಧ್ಯಕ್ಷರಾದ ರೇವಣಸಿದ್ಧ ಬಡಾ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಇವರು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರು ೨೦೨೫ – ೨೬ನೇ ಸಾಲಿನ ಮುಂಗಾರು ಬೆಳೆ ವಿಮೆ ನೋಂದಣಿ ಮಾಡಿಕೊಳ್ಳಬೇಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಗಳಲ್ಲಿ ಸೇರುದಾರರ ಸದಸ್ಯರು ರೈತರು ಪ್ರಸಕ್ತ ಸಾಲಿನಲ್ಲಿ ಬಿತ್ತನೆ ಮಾಡುತ್ತಿರುವ ಬೆಳೆಗಳ ಪೈಕಿ ಹಾಗೂ ಸರಕಾರ ಬೆಳೆ ವಿಮೆಗೆ ಗುರುತಿಸಿರುವ ಬೆಳೆಗಳ ಕುರಿತು ತಿಳಿದುಕೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಬೆಳೆ ವಿಮೆ ನೊಂದಣಿಗೆ ಜುಲೈ ೩೧ ಕಡೆಯ ದಿನಾಂಕವಾಗಿದೆ ಎಂದರು. ಫಸಲ್ ಭೀಮಾ ಯೋಜನೆ ಮಾಡಲು ತೊಗರಿಗೆ ಪ್ರತಿ ಎಕರೆಗೆ ೩೮೮ ರೂಪಾಯಿ, ಹೆಸರಿಗೆ ೨೬೯ರೊಪಾಯಿ ಹಾಗೂ ಉದ್ದಿಗೆ ೨೬೫ ರೂಪಾಯಿ, ಹಾಗೂ ಸೋಯಬಿನ್ ಬೆಳೆಗೆ ೩೩೨ ಪ್ರತಿ ಎಕ್ಕರಿಗೆ ಪಾವತಿಸಬೇಕು. ಹಾಗೂ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಲು ರೈತರು ಕಡ್ಡಾಯವಾಗಿ ಎಫ್ ಐ ಡಿ ಸಂಖ್ಯೆಯನ್ನು ಹೊಂದಿರಬೇಕು ಹಾಗೂ ರೈತರು ಬೆಳೆಯುವ ಬೆಳೆಯ ಸರ್ವೇ ನಂಬರ್ ಅವರ ಎಫ್ ಐಡಿಯಲ್ಲಿ ನಮುದಾಗಿರಬೇಕು ಎಂದು ತಿಳಿಸಿದರು.