
ಕೆ.ಆರ್.ಪುರ, ಜೂ.೨೧-ದೇಶದ ಸಮಗ್ರ ಅಭಿವೃದ್ಧಿಗೆ ಶಿಕ್ಷಕರ ಪಾತ್ರ ಅನನ್ಯ ವಾಗಿದೆ,ಶಿಕ್ಷಕರಿಗೆ ಹೆಚ್ಚು ಬಲ ತುಂಬುವ ಕಾರ್ಯವನ್ನು ಶಿಕ್ಷಣ ಇಲಾಖೆ ಮಾಡಬೇಕು ಎಂದು ಶಾಂತ ಕೃಷ್ಣಮೂರ್ತಿ ಫೌಂಡೇಷನ್ ಸಂಸ್ಥಾಪಕ ಕೃಷ್ಣಮೂರ್ತಿ ಅವರು ತಿಳಿಸಿದರು.
ಕೆ.ಆರ್.ಪುರ ಕ್ಷೇತ್ರದ ಕಲ್ಕೆರೆಯ ಸರ್ಕಾರಿ ಫ್ರೌಡಶಾಲೆಯಲ್ಲಿ ಮುಖ್ಯಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದಿರುವ ಜೆ. ಶೋಭಾ ಅವರನ್ನು ಸನ್ಮಾನಿಸಿ ಮಾತನಾಡಿದರು.
ದೇಶದ ಆರ್ಥಿಕತೆ ಸೇರಿದಂತೆ,ದೇಶದ ಸಮಗ್ರ ಅಭಿವೃದ್ಧಿಗೆ ಶಿಕ್ಷಕರು ಅತಿಹೆಚ್ಚು ಕೊಡುಗೆ ನೀಡುತ್ತಾರೆ,ಶಿಕ್ಷಕರಿಂದ ಮಾತ್ರ ದೇಶವನ್ನು ಬಲಿಷ್ಠವಾಗಿ ನಿರ್ಮಾಣ ಮಾಡಲು ಸಾದ್ಯ ಎಂದು ನುಡಿದರು.
ಕಲ್ಕೆರೆ ಶಾಲೆಯ ಎಸ್ ಡಿ ಎಂಸಿ ಅಧ್ಯಕ್ಷರಾದ ಕೆ.ಆರ್. ರಾಮಪ್ರಸಾದ್ ಅವರು ಮಾತನಾಡಿ ಕಲ್ಕೆರೆ ಶಾಲೆಗೆ ಸರ್ಕಾರಿ ಫ್ರೌಡಶಾಲೆಯಲ್ಲಿ ಮುಖ್ಯಶಿಕ್ಷಕಿಯಾದ ಜೆ. ಶೋಭಾ ಅವರ ಕೊಡುಗೆ ಅಪಾರ ವಾಗಿದ್ದು,ಅವರಿಗೆ ಅಭಿನಂದನೆ ಸಲ್ಲಿಸುವುದು ಸಂತಸ ತಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್ ಡಿ ಎಂಸಿ ಅಧ್ಯಕ್ಷರಾದ ರಾಮಪ್ರಸಾದ್ , ಮುಖ್ಯ ಶಿಕ್ಷಕರಾದ ನಸೀಮಾಭಾನು,ಕುಮಾರಿ,ಸದಸ್ಯರಾದ ಎನ್.ಆರ್. ಚಂದ್ರ ಬಾಬು ಹಾಗೂ ಶಿಕ್ಷಕರು ಸಿಬ್ಬಂದಿ ಇದ್ದರು.