ಆಧುನಿಕ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಿ : ಶತ್ರುಘ್ನ.ಎಸ್

ಕಮಲನಗರ:ಜ.21: ನೀರು ಅತ್ಯಮೂಲ್ಯವಾಗಿದ್ದು. ರೈತರು ಅದನ್ನು ಪೆÇೀಲು ಮಾಡುವುದು ಹೆಚ್ಚಾಗಿ ಕಂಡು ಬರುತ್ತಿದೆ. ಮಿತವಾಗಿ ಬಳಕೆ ಮಾಡುವ ಆಧುನಿಕ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಬೀದರನ ಕೃಷಿ ಅಧಿಕಾರಿ ಶತ್ರುಘ್ನ.ಎಸ್ ಹೇಳಿದರು.
ತಾಲ್ಲೂಕಿನ ಡೋಣಗಾಂವ್(ಎಂ) ಗ್ರಾಮದಲ್ಲಿ ಮಂಗಳವಾರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಗ್ರಾಮೀಣ ಕೃಷಿ ಅಭಿವೃದ್ಧಿ ಮತ್ತು ಸಂಶೋಧನೆ ಟ್ರಸ್ಟ್ ಸಹಯೋಗದಲ್ಲಿ ನಡೆದ ಉನ್ನತ ಕೃಷಿ ಪ್ರದರ್ಶನ ಅಭಿಯಾನದಲ್ಲಿ ಅವರು ಮಾತನಾಡಿದರು.
ಈ ಭಾಗದ ಹಿರಿಯ ರೈತರು ಕಾಲಾಂತರಗಳಿಂದಲೂ ನೀರು ನೋಡುತ್ತಾ ಬಂದಿದ್ದಾರೆ. ಆದರೆ, ಡೋಣಗಾಂವ್ ವಾಡಿ ಹೆಬ್ಬಾಳ, ರಂಡ್ಯಾಳ ಕೆರೆ, ಡೋಣಗಾಂವ್ ಕೆರೆ ನೀರು ಎಷ್ಟೋಂದು ಪೆÇೀಲಾಗುತ್ತಿರುವುದು ಕಣ್ಣಾರೆ ಕಂಡಿದ್ದಾರೆ. ಡೋಣಗಾಂವ್, ರಂಡ್ಯಾಳ, ಬೆಳಕುಣಿ, ಕೊಟಗ್ಯಾಳ, ಡೋಣಗಾಂವ್ ವಾಡಿ ಸೇರಿದಂತೆ ಹಲವು ಗ್ರಾಮಗಳ ರೈತರು ನೀರಿಗಾಗಿ ಪ್ರತಿದಿನ ಪರಿತಪಿಸುತ್ತಾರೆ ಎಂದು ಕಳವಳವ್ಯಕ್ತಪಡಿಸಿದರು.
ಬೇಸಾಯದಿಂದ ಬೇಸತ್ತು ನಗರಗಳ ಕಡೆ ಮುಖ ಮಾಡುತ್ತಿರುವ ಈಗಿನ ಸಂದರ್ಭದಲ್ಲಿ ಸಮಗ್ರ ಕೃಷಿ ಜತೆಗೆ ಭಾರತದಲ್ಲಿ ಅಭಿವೃದ್ಧಿ ಪಡಿಸಿದ ಹೊಸತಳಿಯ ತೊಗರಿಕಾಯಿ(ಐಸಿಪಿಎಚ್-2740) ಹೆಚ್ಚು ಉತ್ಪಾದನೆಯ ಸಂಸ್ಕರಿಸಿದ ತೊಗರಿಕಾಯಿ ಒಂದು ಕಾಯಿಯಲ್ಲಿ ಸರಾಸರಿ 6-8 ಕಾಳುಗಳು ದೊಡ್ಡದಾಗಿದ್ದು ಮತ್ತು ಗುಣಮಟ್ಟದ ಉತ್ತಮ ಬೆಳೆಯಾಗಿದೆ. ಹಾಗೂ ವ್ಯಾಪಾರ ಮತ್ತು ಕೃಷಿಗೆ ಸೂಕ್ತವಾದ ಬೆಳೆ 170-180 ದಿನಗಳಲ್ಲಿ ರಾಶಿ ಬೆಳೆ ಕೈಸೇರುತ್ತೇ ಎಂದು ತಿಳಿಸಿದರು.
ರೈತ ಸಮೂಹ ಸಂಪನ್ಮೂಲ ವ್ಯಕ್ತಿ ರಾಜೇಂದ್ರ ಮಾಳಿ ಮಾತನಾಡಿ, ಸರ್ಕಾರದಿಂದ ಬರುವ ಎಲ್ಲಾ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೃಷಿ ಹೊಂಡದಿಂದ ಹಿಡಿದು ಉಳಿದ ಎಲ್ಲ ಯೋಜನೆಯ ಸೌಲಭ್ಯಗಳನ್ನು ಬಳಸಿಕೊಂಡು ಕೃಷಿಯಲ್ಲಿ ಖುಷಿ ಕಂಡುಕೊಂಡ ಬಾಬುರಾವ ಸೋಮೂರೆ ಅವರು ಇತರ ರೈತರಿಗೆ ಮಾದರಿಯಾಗಿದ್ದಾರೆ ಎಂದು ಬಣ್ಣಿಸಿದರು.
ರಾಜ್ಯ ಕೃಷಿರತ್ನ ರೈತ ಪುರಸ್ಕøತ ಮುಧೋಳದ ಹಾವಗಿರಾವ ವಟಗೆ ಮಾತನಾಡಿ, ಸೇಂದ್ರಿಯ ಕೃಷಿ, ಹೊಂಡ ಕೆರೆ ನೀರಾವರಿ ಮತ್ತು ಮೀನುಗಾರಿಕೆ ಪೂರಕ, ಕೋಳಿ ಸಾಗಾಣಿಕೆ, ರೈತರಿಗೆ ವರಮಾನ, ಎರೆಹುಳು ಗೋಬ್ಬರ ತಯಾರಿಕೆ, ಹೊಸತಳಿ ತೊಗರಿಕಾಯಿ, ಕೃಷಿಯನ್ನು ಉಳಿಸಿಬೇಕಾದರೆ ನೀರಿನ ಸಂರಕ್ಷಣೆವೇ ಏಕೈಕ ಮಾರ್ಗ, ಭಾರತೀಯ ಗೀರ್ ಹಸು ಸಾಕಾಣಿಕೆ ಒಟ್ಟಾರೆಯಲ್ಲಿ ಕೃಷಿಯ ಜೊತೆಗೆ ಇತರೆ ಪದ್ಧತಿಗಳು ಬೆಳೆಯುವ ಬೆಳೆಗಳಿಗೆ ರೋಗಗಳು ತಗುಲದಂತೆ ಅಧಿಕ ಲಾಭ ಗಳಿಸಬಹುದಾಗಿದೆ ಎಂದರು.
ತಹಶೀಲ್ದಾರ್ ಅಮಿತಕುಮಾರ ಕುಲಕರ್ಣಿ, ಜಿಲ್ಲಾ ರೈತ ಸಂಘ ಅಧ್ಯಕ್ಷ ಶಿವಕಾಂತ ಖಂಡೆ, ತಾಲ್ಲೂಕು ರೈತ ಸಂಘ ಅಧ್ಯಕ್ಷ ಪ್ರವೀಣಕುಮಾರ ಕುಲಕರ್ಣಿ, ರೈತ ಸಂಘಟನೆ ಅಧ್ಯಕ್ಷ ಅಂಕುಶ ವಾಡಿಕರ್, ನಾಗನಾಥ ಚಿಟಮೆ, ವಿಠ್ಠಲ ಪಾಟೀಲ, ಉತ್ತಮರಾವ ಮಾನೆ, ಉಮಾಕಾಂತ ಪಾಟೀಲ, ಉಮಾಕಾಂತ ಮಾಳಿಕೇರಿ, ಬಾಲಾಜಿ ದೇಶಮುಖ, ವಿಜಯಕುಮಾರ ದೇಶಮುಖ, ಅನೀಲಕುಮಾರ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಪ್ರಗತಿಪರ ರೈತರು ಪಾಲ್ಗೊಂಡಿದ್ದರು.
ಭಾರತೀಯ ಗೀರ್ ಹಸು ಒಂದು ಪ್ರಾಚೀನ ಶ್ರೇಷ್ಠ ದೇಶಿ ಗೋವಂಶಿಯ ತಳಿಯಾಗಿದೆ. ಇದರ ಉತ್ಪತ್ತಿ ಗುಜರಾತ್ ಗೀರ ಅರಣ್ಯ ಪ್ರದೇಶದಲ್ಲಿದ್ದ ಹಸು ಬೀರಿ(ಬಿ) ಗ್ರಾಮದ ಪ್ರಗತಿಪರ ರೈತ ಅನೀಲಕುಮಾರ ದಂಪತಿಗಳು ಸಾಕಾಣಿಕೆ ಮಾಡುತ್ತಿರುವುದಕ್ಕೆ ಅವರನ್ನು ಸನ್ಮಾನಿಸಿ ಪೆÇ್ರೀತ್ಸಾಹಿಸಲಾಯಿತು.