
ಬೀದರ: ಜೂ.28:ನಗರದ ಸರಕಾರಿ ಪದವಿ ಪೂರ್ವ ಬಾಲಕರ ಕಾಲೇಜದಲ್ಲಿ ಮಾದಕ ದ್ರವ್ಯ ವ್ಯಸನ್ ಮುಕ್ತ ಸಮಾಜ ಬಗ್ಗೆ ವಿಚಾರ ಸಂಕಿರಣವನ್ನು ಉದ್ಗಾಟಿಸಿ ಮಾತನಾಡಿದ ಅವರು ಮಾದಕ ವ್ಯಸನ ತಡೆಗಟ್ಟಲು ಸಮಾಜದ ವಿವಿಧ ಸ್ತರಗಳ ಜನರು ಇದೊಂದು ಸಾಮಾಜಿಕ ಹೊಣೆಗಾರಿಕೆಯೆಂದು ಭಾವಿಸಿ ಒಂದಾಗಿ ಕೈ ಜೋಡಿಸಿದಾಗ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಿಸುವತ್ತ ಯಶಸ್ಸುಗಳಿಸಲು ಸಾಧ್ಯವಿದೆ ಎಂದು ನಗರದ ಚೌಬಾರಾ ಪಿ. ಎಸ್. ಐ ಸೈಯಿದಾ ತಸ್ಲೀಮಾ ರವರು ಪಿ.ಯು.ಸಿ ವಿದ್ಯಾರ್ಥಿಗಳಿಗೆ ಉದ್ದೇಶಿಸಿ ಮಾತನಾಡಿದ್ದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ಬೋಧನೆಯನ್ನು ಭೊದಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಮಲ್ಲಿಕಾರ್ಜುನ ಲದ್ದೆ, ಉಪನ್ಯಾಸಕಾರದ ಕೆ. ಹಣಮಂತರಾವ, ಶ್ರೀಮತಿ ಸುಮನ್ ಹೆಚ್, ಶ್ರೀಮತಿ ಪ್ರತಿಭಾ ಹಾಗೂ ಕಾವೇರಿ ಸೇರಿದಂತೆ ಕಾಲೇಜಿನ್ ಸಿಬ್ಬಂಧಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.