ಹೋರಾಟಗಾರರು ರಾಜಕೀಯ ಪಕ್ಷಗಳ ಕೈಗೊಂಬೆಯಾಗಬಾರದು: ಕಲಗುರ್ತಿ

ಕಲಬುರಗಿ:ಮೇ.೨೨: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಸಾಮಾಜಿಕ ನ್ಯಾಯಕ್ಕಾಗಿ) ವತಿಯಿಂದ ನಗರದ ಕನ್ನಡ ಭವನದಲ್ಲಿ ಶೋಷಿತ ಜನಜಾಗೃತಿ ವೇದಿಕೆಯ ನೂತನ ಜಿಲ್ಲಾಧ್ಯಕ್ಷರಾದ ಲಕ್ಕಪ್ಪ ಎಸ್. ಜವಳಿ ಅವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಯಿತು.
ದಲಿತ ಮಾದಿಗ ಸಮನ್ವಯ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಜವಳಿ ಮಾತನಾಡಿ ನಾವು ಬಸಿದಂತೆ ಬದುಕುವ ಸ್ವಾತಂತ್ರö್ಯ ಯಾವತ್ತೂ ಭಯಾನಕ ಹೋರಾಟದ ಫಲವೇ ಹೊರತು ಸುಲಭಕ್ಕೆ ಸಿಗುವುದಿಲ್ಲ. ಮತ್ತು ಅನ್ಯಾಯ ನಡೆದಾಗ ನೀವು ತಟಸ್ಥರಾಗಿ ಉಳಿದರೆ ಶೋಷಕರ ಪರವಾಗಿ ಇದ್ಧೀರಿ ಎಂದು ಅರ್ಥ ಡಾ.ಅಂಬೇಡ್ಕರ ಅವರ ಆಶೆಯಂತೆ ೭೦ರ ದಶಕದ ಹೋರಾಟ ಶಕ್ತಿ ಮರು ಸ್ಥಾಪನೆಯಾಗಬೇಕು. ಆವಾಗ ಮಾತ್ರ ದಲಿತರ ಮೇಲಿನ ದೌರ್ಜನ್ಯ ಮತ್ತು ಹೆಣ್ಣು ಮಕ್ಕಳ ಮೇಲಾಗುತ್ತಿರುವ ಅತ್ಯಾಚಾರವನ್ನು ತಡೆಯಲು ಸಾಧ್ಯ ಮತ್ತು ದಲಿತರ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೇ ಶಿಕ್ಷಣ ಎಂಬ ಅಸ್ತç ಎಂಬುವುದನ್ನು ಅರಿತು ಪ್ರತಿಯೊಬ್ಬ ಪಾಲಕರು ಮಕ್ಕಳಿಗೆ ಶಿಕ್ಷಣ ನೀಡುವುದು ಪಾಲಕರ ಕರ್ತವ್ಯವಾಗಬೇಕು ಈ ನಿಟ್ಟಿನಲ್ಲಿ ಹೋರಾಟಗಾರರು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಜನಜಾಗೃತಿ ಮೂಡಿಸಬೇಕೆಂದರು.
ದಲಿತ ಸಂಘರ್ಷ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷ ದಶರಥ ಕಲಗುರ್ತ್ತಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಹೋರಾಟಗಾರರು ರಾಜಕೀಯ ಯಾವುದೇ ಪಕ್ಷದ ಕೈಗೊಂಬೆಯಾಗಬಾರದು, ಬುದ್ಧ, ಬಸವಣ್ಣ, ಡಾ. ಅಂಬೇಡ್ಕರ ವಿಚಾರಧಾರೆಗಳ ಮೇಲೆ ಗಟ್ಟಿಯಾದ ಹೋರಾಟ ಮಾಡಿದಾಗ ಮಾತ್ರ ದಲಿತರ ಮೇಲಾಗುವಂತಹ ದೌರ್ಜನ್ಯಗಳು ತಡೆಯಲು ಸಾಧ್ಯ ಹಾಗಾಗಿ ಓದು, ಬರಹ ಕಲಿತ ಶಿಕ್ಷಣವಂತರು ಸಮುದಾಯದ ಕಡೆಗೆ ನೋಡಬೇಕು. ಅವಾಗ ಮಾತ್ರ ದಲಿತ ಸಮುದಾಯ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮೇಲೆ ಬರಲು ಸಾಧ್ಯ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಲಕ್ಕಪ್ಪ ಎಸ್. ಜವಳಿ ಸುಮಾರು ೧೦ ವರ್ಷಗಳಿಂದ ದಲಿತಪರ ಚಳುವಳಿಯಲ್ಲಿ ಸಮುದಾಯದ ಪರವಾಗಿ ಕೆಲಸ ಮಾಡಿದ ಪ್ರಯುಕ್ತ ನನ್ನನ್ನು ಶೋಷಿತ ಜನಜಾಗೃತಿ ವೇದಿಕೆಯ ನೂತನ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ರಾಜ್ಯಾಧ್ಯಕ್ಷರಾದ ಆರ್. ವೆಂಕಟೇಶ ಹುಬ್ಬಳ್ಳಿ ಅವರಿಗೆ ಮತ್ತು ದಲಿತ ಸಂಘರ್ಷ ಸಮಿತಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಸಮುದಾಯದ ನೊಂದ ಜನರಿಗೆ ಕಣ್ಣೊರೆಸುವ ಕೆಲಸ ಮಾಡಿ ಸಮುದಾಯಕ್ಕೂ ಕೆಟ್ಟ ಹೆಸರು ಬಾರದಂತೆ ಮಾದರಿಯಾಗುವಂತಹ ಹೋರಾಟ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಮಾಜ ಚಿಂತಕ ಡಾ. ಮಾಣಿಕರಾವ ಕಟ್ಟಿಮನಿ, ದಲಿತ ಮಾದಿಗ ಸಮನ್ವಯ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಜವಳಿ, ಮಾದಿಗ ದಂಡೋರ ಹೋರಾಟ ಸಮಿತಿ ರಾಜ್ಯ ಯುವ ಮುಖಂಡ ರಾಜು ಹದನೂರ, ಗುರುರಾಜ ಭಂಡಾರಿ, ಮಾದಿಗ ಸಮಾಜದ ಜಿಲ್ಲಾ ಮುಖಂಡ ಶರಣು ಸಗರಕರ, ಗಣೇಶ ಕಟ್ಟಿಮನಿ, ಸಚಿನ ಕಟ್ಟಿಮನಿ, ಜಿಲ್ಲಾ ಕಾಂಗ್ರೆಸ್ ಯುವ ಮುಖಂಡ ಪರಶುರಾಮ ನಾಟಿಕರ, ಅಲೆಮಾರಿ ಸಂಘದ ಜಿಲ್ಲಾ ಮುಖಂಡ ಶರಣಬಸಪ್ಪ ಭಜಂತ್ರಿ, ಡಾ. ಬಾಬುಜಗಜೀವನರಾಮ ಜಯಂತೋತ್ಸವ ಸಮಿತಿ ಜಿಲ್ಲಾಧ್ಯಕ್ಷ ರಂಜಿತ ಮೂಲಿಮನಿ, ಅಮೃತ ಕೊರಳ್ಳಿ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.