
ಗುಳೇದಗುಡ್ಡ, ಜ4: ಪಟ್ಟಣದ ಪುರಸಭೆಯಲ್ಲಿ ಸಿಬ್ಬಂದಿಗಳ ಕೊರತೆ ಹೆಚ್ಚಾಗಿದ್ದು, ಒಬ್ಬ ಸಿಬ್ಬಂದಿ 4 ರಿಂದ 5 ಶಾಖೆಗಳ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಆದರೂ ಸಾರ್ವಜನಿಕರು ದೂರವಾಣಿ ಕರೆ ಮಾಡಿ ತಿಳಿಸಿದರೆ ತಕ್ಷಣ ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸುವುದಾಗಿ ಮುಖ್ಯಾಧಿಕಾರಿ ಎ.ಎಚ್. ಮುಜಾವರ ತಿಳಿಸಿದ್ದಾರೆ.
ಅವರು ಪಟ್ಟಣದ ಪುರಸಭೆಯಲ್ಲಿ 2026-27 ನೇ ಸಾಲಿನ ಬಜೆಟ್ ತಯಾರಿಸುವ ಸಲುವಾಗಿ ಕರೆದ ಎರಡನೇ ಹಂತದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಅನೇಕ ಸಮಸ್ಯೆಗಳ ಪರಿಹಾರಕ್ಕೆ ಸಾರ್ವಜನಿಕರು ಮನವಿ ಮಾಡಿದ್ದು, ಈ ಸಮಸ್ಯೆಗಳ ಪರಿಹಾರಕ್ಕೆ ಬಜೆಟ್‍ದಲ್ಲಿ ಅನುದಾನ ಕಾಯ್ದಿರಿಸುವಂತೆ ಆಡಳಿತಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಸಾರ್ವಜನಿಕರು ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡುವಂತೆ ಮನವಿ ಮಾಡಿದರು. ಬಡ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗಲು ಡಿಜಿಟಲ್ ಗ್ರಂಥಾಲಯ ಸ್ಫಾಪಿಸುವಂತೆ ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನಾಗರಾಜ ಕಟ್ಟಿಮನಿ, ಪುರಸಭೆ ವ್ಯವಸ್ಥಾಪಕ ಎ.ಎಚ್. ಮುದ್ದೇಬಿಹಾಳ, ಕಿರಿಯ ಅಭಿಯಂತರ ಎಂ.ಜಿ. ಕಿತ್ತಲಿ, ಆರ್.ವಿ. ಚಂದರಗಿ, ನೀಲಮ್ಮ ಗೊಂಬಿ, ಐ.ಬಿ. ಮೇಲ್ದಾಪುರ, ಹೆಚ್. ಆರ್.ಚಲವಾದಿ, ವೀರೇಶ ಹಿರೇಮಠ, ವಿ.ಎಸ್. ರಾಮಪುರ, ಮುಸ್ತಾಕ ಕೊತ್ತಲ್ ಸೇರಿದಂತೆ ವಿವಿಧ ಶಾಖೆಗಳ ಸಿಬ್ಬಂದಿಗಳು ಇದ್ದರು.
























