ಬೀದರ್: ಅ.15:ನಾಲ್ಕಾರು ಮನೆಗೆಗಳಿಗೆ ಹೋಗಿ ಕೆಲಸ ಮಾಡಿಕೊಂಡು ಬದುಕುತ್ತಿರುವ ಅಸಂಃಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಹೊಸ ಬಿಲ್ ತರಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ರಾಜ್ಯದ ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, 101 ವಿವಿಧ ಅಸಂಘಟಿತ ಕಾರ್ಮಿಕ ವರ್ಗಗಳಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲು ಬೀದರ್‍ಗೆ ಆಗಮಿಸಿರುವುದಾಗಿ ತಿಳಿಸಿದರು.
ಮಂತ್ರಿ ಮಂಡಲ ವಿಸ್ತರಣೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಂತ್ರಿಗಿರಿ ಕೇಳುವ ಹಕ್ಕು ಪ್ರತಿಯೊಬ್ಬರಿಗೆ ಇದ್ದು, ಅದನ್ನು ಪಕ್ಷದ ಹೈಕಮಾಂಡ್ ಬಳಿ ಕೇಳಬೇಕೆ ಹೊರತು ಮಾಧ್ಯಮದವರ ಮುಂದೆ ಚರ್ಚಿಸುವುದು ಅಸಮಂಜಸವಲ್ಲ. ಸಂಪುಟ ವಿಸ್ತರಣೆ ವಿಚಾರ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಿಗೆ ಬಿಟ್ಟಿದ್ದು. ಆದರೂ ಸಚಿವ ಸಂಪುಟದ ಅಗತ್ಯವಿದೆ ಎಂದು ಒಪ್ಪಿಕೊಳ್ಳುವುದಾಗಿ ತಿಳಿಸಿದರು.
ವ್ಯಾಪಮ್ ಕೇಸ್‍ನಲ್ಲಿ 44 ಜನ ಸಾಕ್ಷಿಗಳ ಹತ್ಯೆಯಾದರೂ ಪ್ರಧಾನಿ ಮೋದಿಯಾಗಲಿ ಅಥವಾ ಬಿಜೆಪಿಯವರು ದಿವ್ಯ ಮೌನ ವಹಿಸಿದ್ದಾರೆ. ತಾಲಿಬಾನಿಗಳನ್ನು ವಿರೋಧಿಸುತ್ತಿದ್ದ ಬಿಜೆಪಿಯವರು ಉತ್ತರ ಪ್ರದೇಶದಲ್ಲಿ ತಾಲಿಬಾನಿಗಳನ್ನು ಬರಮಾಡಿಕೊಂಡು ಅವರಿಗೆ ಗೌರವ ಸಲ್ಲಿಸಿ ಪತ್ರಿಕಾಗೋಷ್ಟಿ ಮಾಡಲಿಕ್ಕೆ ಅವಕಾಶ ನೀಡಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ನಮ್ಮ ಯು.ಪಿ.ಎ ಸರ್ಕಾರ 1 ಹಾಗೂ 2ನೇ ಅವಧಿಯಲ್ಲಿ ಒಟ್ಟು ಬಾಂಗ್ಲಾ ದೇಶದ 80 ಸಾವಿರ ನುಸುಳುಕೋರರನ್ನು ಹೊರ ಹಾಕಲಾಗಿದೆ. ಆದರೆ ಇವರ 11 ವರ್ಷದ ಅವಧಿಯಲ್ಲಿ ಬರೀ 6 ಸಾವಿರ ನುಸುಳುಕೋರರಿಗೆ ಹೊದೂಡಿ ದೊಡ್ಡ ಸಾಧನೆ ಮಾಡಿದ್ದಾಗಿ ಹೇಳಿಕೊಳ್ಳುತ್ತಿದ್ದಾರೆ. ಅಂದು ಸಾವಿತ್ರಿಬಾಯಿ ಫುಲೆ ಅವರ ಮೇಲೆ ಕೆಸರು ಎರಚಲಾಗಿತ್ತು. ಇಂದು ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೊ ಎಸೆದ ಪ್ರಸಂಗ ನಡೆದಿದೆ. ಇದು ಹಾಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆ ಎಂದು ಕುಟುಕಿದರು.
ಆರ್.ಎಸ್.ಎಸ್ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಈಗಾಗಲೇ ಮುಖ್ಯಮಂತ್ರಿಗಳು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪರಿಶಿಲಿಸುವಂತೆ ತಿಳ:ಸಿದ್ದಾರೆ ಎಂದು ಲಾಡ್ ಹೇಳಿದರು.
ಪೌರಾಡಳಿತ ಸಚಿವ ರಹಿಮ್ ಖಾನ್, ಮಹಾನಗರ ಪಾಲಿಕೆ ಅಧ್ಯಕ್ಷ ಮಹಮ್ಮದ್ ಗೌಸ್, ಕಾಡಾ ಅಧ್ಯಕ್ಷರಾದ ಬಾಬು ಹೊನ್ನಾ ನಾಯಕ, ಮಾಜಿ ಎಮ್.ಎಲ್.ಸಿ ಅರವಿಂದಕುಮಾರ ಅರಳಿ, ಅರವಿಂದಕುಮಾರ ಅರಳಿ, ಕಾಂಗ್ರೆಸ್ ಮುಖಂಡರಾದ ಭೀಮಸೇನರಾವ ಶಿಂಧೆ, ಜಾರ್ಜ್ ಫರ್ನಾಂಡಿಸ್, ಅನಿಲ ಕಾಳೆ, ಅಮರ ಜಾಧವ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.























