
ಚಡಚಣ,ನ.25: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಹೆಚ್ಚಾಗಿದೆ.ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಮತ್ತು ಚಡಚಣ ಪಟ್ಟಣದ ಎಲ್ಲಾ ವಾರ್ಡ್‍ಗಳಲ್ಲಿ ಬೀದಿ ನಾಯಿಗಳ ಹಾವಳಿ ತಪ್ಪಿಸುವುದಕೋಸ್ಕರ ಅವುಗಳನ್ನು ಹಿಡಿದು ಹುಚ್ಚು ನಾಯಿ ರೋಗ ಪ್ರತಿಬಂದಕ ಲಸಿಕೆ ಮತ್ತು ಹೆಣ್ಣು ನಾಯಿಗಳಿಗೆ ಸಂತಾನ ಹರಣ ಔಷಧಿಯನ್ನು ಚುಚ್ಚುಮದ್ದನ್ನು ಹಾಕುವುದರ ಮೂಲಕ ಸರ್ಕಾರದ ನಿಯಮವನ್ನು ಪಾಲಿಸಲಾಗುತ್ತದೆ.ಅದಲ್ಲದೆ ಸಾಕು ನಾಯಿಗಳಿಗೂ ಕೂಡ ಲಸಿಕೆಗಳನ್ನ ಹಾಕುತ್ತಲಿದ್ದು ಸಾಕುನಾಯಿ ಹೊಂದಿದ ಮಾಲೀಕರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದರೆ ಅಲ್ಲಿ ಕೂಡ ಲಸಿಕೆಯನ್ನು ಹಾಕಲಾಗುವುದು. ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿಯ ಸಿಬ್ಬಂದಿಯವರು ಪಾಲ್ಗೊಂಡಿದ್ದರು ಡಾ.ಪ್ರಮೋದ್ ಹೋರ್ತಿ ಮತ್ತು ಸಿಬ್ಬಂದಿ, ಪಶುಪಾಲನೆ ಇಲಾಖೆ ಸಹಾಯಕ ನಿರ್ದೇಶಕ ಡಾ.. ಮಲ್ಲಿಕಾರ್ಜುನ ಗಂಗನಹಳ್ಳಿ ಚಡಚಣ ಇವರ ಕಾರ್ಯಕ್ರಮ ಉಪಸ್ಥಿತಿಯಲ್ಲಿ ನಡೆಯಿತು

























