ಕಾಸರಗೋಡು,ಸೆ.೬-ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ತಂದೆಯೇ ೧೭ ವರ್ಷದ ಮಗಳು ಮತ್ತು ಆಕೆಯ ೧೦ ವರ್ಷದ ಸೋದರ ಸಂಬಂಧಿ ಮೇಲೆ ಆ?ಯಸಿಡ್ ದಾಳಿ ನಡೆಸಿರುವ ದಾರುಣ ಘಟನೆ ಜಿಲ್ಲೆಯ ಪಣತ್ತಡಿಯ ಪರಕ್ಕಡವ್‌ನಲ್ಲಿ ನಿನ್ನೆ ಬೆಳಿಗ್ಗೆ ನಡೆದಿದೆ.
ಕರ್ನಾಟಕದ ಕರಿಕೆ ಗ್ರಾಮದ ಮೂಲದ ಕೆ.ಸಿ. ಮನೋಜ್ (೪೮) ದಾಳಿ ನಡೆಸಿ ಪರಾರಿಯಾಗಿದ್ದು,ಆ?ಯಸಿಡ್ ದಾಳಿಯಿಂದ ಸುಟ್ಟು ಗಾಯಗಳಾಗಿರುವ ಮಗಳು ಸೇರಿ
ಇಬ್ಬರಲ್ಲಿ ಹಿರಿಯ ಬಾಲಕಿಯ ಕೈಕಾಲುಗಳ ಮೇಲೆ ಸುಟ್ಟ ಗಾಯಗಳಾಗಿದ್ದರೆ, ಕಿರಿಯ ಬಾಲಕಿಯ ಮುಖಕ್ಕೆ ಗಾಯಗಳಾಗಿವೆ. ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ
ಪತ್ನಿಯಿಂದ ದೂರವಾಗಿದ್ದ ಮನೋಜ್ ತನ್ನ ಮಗಳು ವಾಸಿಸುತ್ತಿದ್ದ ಸಂಬಂಧಿಕರ ಮನೆಗೆ ಬಲವಂತವಾಗಿ ನುಗ್ಗಿ ಆಕೆಯ ಮೇಲೆ ಕೈಗಾರಿಕಾ ಆಸಿಡ್ ದಾಳಿ ನಡೆಸಿದ್ದು, ಅವರ ೧೦ ವರ್ಷದ ಸೊಸೆಯನ್ನೂ ಗುರಿಯಾಗಿಸಿಕೊಂಡಿದ್ದಾನೆ.
ದೀರ್ಘಕಾಲದ ಕೌಟುಂಬಿಕ ಕಲಹದಿಂದ ಈ ದಾಳಿ ನಡೆದಿರಬಹುದು ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಗಾಗ್ಗೆ ಜಗಳಗಳು,ಕೌಟುಂಬಿಕ ಉದ್ವಿಗ್ನತೆಗಳಿಂದ ಇಂತಹ ಕೃತ್ಯ ನಡೆದಿರಬಹುದು ಎಂದು ಶಂಕಿಸಲಾಗಿದೆ.
.



























