Home ಜಿಲ್ಲೆ ಕಲಬುರಗಿ ಕ್ರೀಡಾಕೂಟದಲ್ಲಿ ಗುತ್ತೇದಾರ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಕ್ರೀಡಾಕೂಟದಲ್ಲಿ ಗುತ್ತೇದಾರ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಆಳಂದ:ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮೆರೆದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಮಾಜಿ ಶಾಸಕ ಸುಭಾಷ್ ಗುತ್ತೇದಾರ ಸನ್ಮಾನಿಸಿ ಅಭಿನಂದಿಸಿದರು. ಹಣಮಂತ ಶೇರಿ, ಅಪ್ಪಾಸಾಬ ಬಿರಾದಾರ, ಜ್ಯೋತಿ ವಿಶಾಖ್, ರಾಮರಾವ ಪಾಟೀಲ, ದಯಾನಂದ ಕಾಪಸೆ, ಮಲ್ಲಿಕಾರ್ಜುನ ಶೃಂಗೇರಿ, ರಾಜಕುಮಾರ ಅಕ್ಕಾ ಇದ್ದರು.
ಕ್ರೀಡಾಕೂಟದಲ್ಲಿ ಗುತ್ತೇದಾರ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ
ಶಾಲಾ ಶಿಕ್ಷಣ ಇಲಾಖೆ( ಪದವಿ ಪೂರ್ವ) ಹಮ್ಮಿಕೊಂಡಿದ್ದ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಜೀವನ ಜ್ಯೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಮಾತೋಶ್ರೀ ಅಂಬವ್ವಾ ರುಕ್ಮಯ್ಯ ಗುತ್ತೇದಾರ ಸ್ಮಾರಕ ಸ್ವತಂತ್ರ?? ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಕಾಲೇಜಿನ ಪವನ ಶ್ಯಾಮರಾವ 1500 ಮೀ. ಓಟದಲ್ಲಿ ಪ್ರಥಮ ಸ್ಥಾನ, ಗೇಮು ವಿಜಯಕುಮಾರ 400 ಮೀ. ಓಟದಲ್ಲಿ ಪ್ರಥಮ, ಪ್ರವೀಣ ಮಲ್ಲಿನಾಥ ಎತ್ತರ ಜಿಗಿತದಲ್ಲಿ ಪ್ರಥಮ, ಪವನ ಶ್ಯಾಮರಾವ ಎತ್ತರ ಜಿಗಿತದಲ್ಲಿ ದ್ವೀತಿಯ ಸ್ಥಾನ, ಬಸವರಾಜ ಶಿವಾನಂದ ಉದ್ದ ಜಿಗಿತದಲ್ಲಿ ದ್ವೀತಿಯ ಸ್ಥಾನ, ವಿಜಯಲಕ್ಷೀ ರಾಜು 200 ಮೀ. ಓಟದಲ್ಲಿ ದ್ವೀತಿಯ, ಲಕ್ಷೀ ಅಂಬಾರಾಯ ಚಕ್ರ ಎಸೆತದಲ್ಲಿ ದ್ವೀತಿಯ ಸ್ಥಾನ, ಬಸವರಾಜ ಹಣಮಂತ 100 ಮೀ. ಓಟದಲ್ಲಿ ತೃತೀಯ ಸ್ಥಾನ, ಪ್ರದೀಪ ಭೀಮಾಶಂಕರ 3000 ಮೀ. ಓಟದಲ್ಲಿ ದ್ವೀತಿಯ ಸ್ಥಾನ, ಲಕ್ಷೀಪುತ್ರ ಯಲ್ಲಾಲಿಂಗ ಭಲ್ಲೆ ಎಸೆತದಲ್ಲಿ ತೃತೀಯ ಸ್ಥಾನ ಪಡೆದು ಸಾಧನೆ ಮೆರೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ, ಮಾಜಿ ಶಾಸಕ ಸುಭಾಷ್ ಗುತ್ತೇದಾರ, ಕಾರ್ಯದರ್ಶಿ ಹರ್ಷಾ ಗುತ್ತೇದಾರ, ಆಡಳಿತಾಧಿಕಾರಿ ಹಣಮಂತ ಶೇರಿ, ಪ್ರಾಚಾರ್ಯ ಡಾ. ಅಪ್ಪಾಸಾಬ ಬಿರಾದಾರ, ವಿಜ್ಞಾನ ವಿಭಾಗದ ಮುಖ್ಯಸ್ಥೆ ಜ್ಯೋತಿ ವಿಶಾಖ್ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.