
ಜೇವರ್ಗಿ : ಫೆ.೪:ಪಟ್ಟಣದ ಬಸವೇಶ್ವರ ಸರ್ಕಲ್ ಬಳಿ ಕದಂಬ ಕಾಲೇಜು ಬಳಿಯ ಆವರಣದಲ್ಲಿ ಆರ್.ಕೆ.ಪಿ ಗ್ರೂಪ್ ವತಿಯಿಂದ ದಿ.೫ ರಂದು ಗುರುವಾರ ಸಂಜೆ ೬:೩೦ ಗಂಟೆಗೆ ಸಾಧಕರ ಸನ್ಮಾನ ಹಾಗೂ ಹಾಸ್ಯ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಗ್ರೂಪ್ ನ ಸದಸ್ಯ ರವಿಚಂದ್ರ ಗುತ್ತೇದಾರ ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ೨೫ ವರ್ಷಗಳಿಂದ ಜೇವರ್ಗಿ ಪಟ್ಟಣದಲ್ಲಿ ಆರ್.ಕೆ.ಪಿ ಗ್ರೂಪ್ ವತಿಯಿಂದ ನಿರಂತರವಾಗಿ ಹಾಸ್ಯ ಕಾರ್ಯಕ್ರಮ, ನಗೆ ಹಬ್ಬ, ಜಾದು, ರಸಮಂಜರಿ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ಬರಲಾಗುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಬಸವ ಚೇತನ ಹಾಗೂ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಲಾಗುತ್ತಿದೆ. ಸನ್ಮಾನದ ನಂತರ “ಅದು ಬ್ಯಾರೇನೆ ಐತಿ” ಖ್ಯಾತಿಯ ಸುರೇಶ ಇಂಚಗೇರಿ ತಂಡದವರಿAದ ಹಾಸ್ಯ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮವನ್ನು ಕೆಕೆಆರ್ ಡಿಬಿ ಅಧ್ಯಕ್ಷ, ಶಾಸಕ ಡಾ.ಅಜಯಸಿಂಗ್ ಉದ್ಘಾಟಿಸಲಿದ್ದು, ಸೊನ್ನ ದಾಸೋಹ ಮಠದ ಡಾ.ಶಿವಾನಂದ ಸ್ವಾಮೀಜಿ ಸಾನಿದ್ಯ ವಹಿಸುವರು. ಮಾಜಿ ಶಾಸಕ, ಜೆಡಿಎಸ್ ಕಾರ್ಯಾದ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡುವರು. ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಅಧ್ಯಕ್ಷತೆ ವಹಿಸಲಿದ್ದು, ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಆರ್.ಕೆ.ಪಿ ಗ್ರೂಪ್ ಮುಖ್ಯಸ್ಥ ಅನೀಲ ರಾಂಪೂರ ನೇತೃತ್ವ ವಹಿಸುವರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ ಪಾಟೀಲ ನರಿಬೋಳ, ವೀರಶೈವ ಮಹಾಸಭಾ ರಾಜ್ಯ ಕಾರ್ಯದರ್ಶಿ ರಾಜಶೇಖರ ಸಾಹು ಸೀರಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶೌಕತ್ ಅಲಿ ಆಲೂರ, ಪೀಕಾರ್ಡ್ ಬ್ಯಾಂಕ್ ಅಧ್ಯಕ್ಷ ಪ್ರತಾಪ ಕಟ್ಟಿ, ಟಿಎಪಿಸಿಎಂಎಸ್ ಅಧ್ಯಕ್ಷ ಭಗವಂತ್ರಾಯಗೌಡ ಅಂಕಲಗಾ ಸೇರಿದಂತೆ ವಿವಿಧ ಸಾಧಕರಿಗೆ ಬಸವ ಚೇತನ ಪ್ರಶಸ್ತಿ ನೀಡಲಾಗುತ್ತದೆ.
ತಹಶೀಲ್ದಾರ್ ಮಲ್ಲಣ್ಣ ಯಲಗೋಡ, ತಾಪಂ ಇಒ ರವಿಚಂದ್ರರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ಶಂಭುಲಿAಗ ದೇಸಾಯಿ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಆದ್ದರಿಂದ ಪಟ್ಟಣದ ವಿವಿದ ಕನ್ನಡಪರ, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳು ಮುಖಂಡರು, ಸರ್ಕಾರಿ ಅಧಿಕಾರಿಗಳು, ಮಹಿಳೆಯರು ಹಾಗೂ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸುವಂತೆ ರವಿಚಂದ್ರ ಗುತ್ತೇದಾರ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಆರ್.ಕೆ.ಪಿ ಗ್ರೂಪ್ ಸದಸ್ಯರಾದ ನಿಂಗಣ್ಣ ರದ್ದೇವಾಡಗಿ, ಅಂಬರೀಶ್ ಪತಂಗೆ, ಸಿದ್ದು ಗಜ, ಚಂದ್ರು ಸೀರಿ, ವಿಶಾಲ ಪವಾರ, ಪ್ರವೀಣ ಪಾಟೀಲ, ರಾಜು ಪಾಟೀಲ, ಶ್ರೀಶೈಲಗೌಡ ಪೊಲೀಸ್ ಪಾಟೀಲ, ವಿಜಯಕುಮಾರ ಕಲ್ಲಾ ಇದ್ದರು.























