Home ಜಿಲ್ಲೆ ಶೈಕ್ಷಣಿಕ ಬದುಕಿನಲ್ಲಿ ಸಾಧನೆಯೇ ಮೈಲುಗಲ್ಲು:ನಡುವಿನಮನಿ

ಶೈಕ್ಷಣಿಕ ಬದುಕಿನಲ್ಲಿ ಸಾಧನೆಯೇ ಮೈಲುಗಲ್ಲು:ನಡುವಿನಮನಿ

ತಾಳಿಕೋಟೆ:ಮೇ.18: ಪಾಲಕರ ಪೆÇ್ರೀತ್ಸಾಹ ಶಿಕ್ಷಕರ ಶಿಕ್ಷಣ ನಿಮ್ಮ ಪ್ರಯತ್ನ ಸದೃಡವಾಗಿದ್ದರೆ ಸಾಧನೆಯ ಸಾಧಕರಾಗಿ ಹೊರಹೊಮ್ಮಲು ಸಾದ್ಯವಾಗಲಿದೆ ಅಂತಹ ಸಾಧನೆಗೈದ ಬ್ರಿಲಿಯಂಟ್ ಶಾಲೆಯ ವಿದ್ಯಾರ್ಥಿನಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳುವ ಕೆಲಸ ಮಾಡಿರುವದು ಸಂತಸ ತಂದಿದೆ ಎಂದು ಶ್ರೀ ಮಾರುತಿ ಶಿಕ್ಷಣ ಸಂಸ್ಥೆಯ(ಬ್ರಿಲಿಯಂಟ್) ಅಧ್ಯಕ್ಷ ನಾನಾಗೌಡ ನಡುವಿನಮನಿ ಅವರು ಹೇಳಿದರು.
ಎಸ್‍ಎಸ್‍ಎಲ್‍ಸಿ ಪರಿಕ್ಷೆಯಲ್ಲಿ ಸಾಧನೆಯ ತವಕಿನಲ್ಲಿದ್ದ ತಾಳಿಕೋಟೆ ಮೈಲೇಶ್ವರ ಕ್ರಾಸ್‍ನ ಬ್ರಿಲಿಯಂಟ್ ಶಾಲೆಯ ಆಂಗ್ಲ ಮಾಧ್ಯಮ ವಿದ್ಯಾರ್ಥಿನಿ ಕುಮಾರಿ ಗಂಗಾ ಅಶೋಕ ಕೊಳೂರ ಮರು ಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರ ಕುರಿತು ಬ್ರಿಲಿಯಂಟ್ ಶಾಲಾ ಆವರಣದಲ್ಲಿ ಆಯೋಜಿಸಲಾದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು ಉತ್ತಮ ಶಿಕ್ಷಣಕ್ಕೆ ಹೆಸರುವಾಸಿಯಾಗಿರುವ ಬ್ರಿಲಿಯಂಟ್ ಶಿಕ್ಷಣ ಸಂಸ್ಥೆ ಯಾವಾಗಲು ತನ್ನ ಘನತೆಯನ್ನು ಕಾಪಾಡಿಕೊಂಡು ಬಂದಿದೆ ವಿದ್ಯಾರ್ಥಿಗಳ ಶೈಕ್ಷಣಿಕ ಬಧುಕಿನಲ್ಲಿ ಈ ಸಾಧನೆ ಇನ್ನಷ್ಟು ಹೆಚ್ಚಿನ ಭಲ ಕೊಡಲಿದೆ ರಾಜ್ಯಮಟ್ಟದಲ್ಲಿ ಪ್ರಥಮ ರ್ಯಾಂಕ್ ಪಡೆದು ಸಾಧನೆಗೈದ ವಿದ್ಯಾರ್ಥಿನಿ ಗಂಗಾ ಕೊಳೂರ ಹಾದಿಯಲ್ಲಿ ಎಲ್ಲ ವಿದ್ಯಾರ್ಥಿಗಳು ಸಾಗಿ ಉಜ್ವಲ ಭವಿಷ್ಯ ಕಂಡುಕೊಳ್ಳಬೇಕೆಂದರು.
ಬ್ರಿಲಿಯಂಟ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ ಬಿ ಮಡಿವಾಳರ ಅವರು ಮಾತನಾಡಿ ಭಾರತ ವಿಶ್ವಕ್ಕೆ ಯಾವುದೇ ವಿಷಯವನ್ನು ಪರಿಚಯ ಮಾಡಿಕೊಡುವಂತಹ ಯಾವಾಗಲು ಮಾಡುತ್ತಾ ಬಂದಿದೆ ಸಾಧನೆ ಎಂಬುದು ನಮ್ಮ ದೇಶಕ್ಕೆ ಹೊಸದಲ್ಲಾ ಅಂತಹ ಭಾರತ ದೇಶದ ಪುಣ್ಯಭೂಮಿಯಲ್ಲಿ ಜನಿಸಿದ ನಾವು ನಿವುಗಳು ಸಾಧನೆ ಇಲ್ಲದೇ ಬಧುಕಿದರೆ ಇಡೀ ಜೀವನವೇ ವ್ಯರ್ಥವಾಗಲಿದೆ ಶೈಕ್ಷಣಿಕ ಹಂತದಲ್ಲಿ ಬ್ರಿಲಿಯಂಟ್ ಶಾಲೆಯ ಆಂಗ್ಲ ಮಾಧ್ಯಮ ವಿದ್ಯಾರ್ಥಿನಿ ಗಂಗಾ ಕೊಳೂರ ತಾನು ಬರೆದ ಪರಿಕ್ಷೆಯ ಮೇಲೆ ವಿಸ್ವಾಸವಿಟ್ಟು ಮರು ಮೌಲ್ಯಮಾಪನದಲ್ಲಿ ಬಿಟ್ಟು ಹೋಗಿದ್ದ 2 ಅಂಕಗಳನ್ನು ಪಡೆದುಕೊಳ್ಳುವದರೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಬ್ರಿಲಿಯಂಟ್ ಶಿಕ್ಷಣ ಸಂಸ್ಥೆಯ ಹೆಸರನ್ನು ರಾಜ್ಯಮಟ್ಟಕ್ಕೆ ಪಸರಿಸುವಂತೆ ಮಾಡಿದ್ದಾಳೆ ಈ ಸಂಸ್ಥೆಯಲ್ಲಿ ಸಿಗುವ ಉತ್ತಮ ಶಿಕ್ಷಣಕ್ಕೆ ಸಾಕ್ಷೀ ಕರಿಸಿದ್ದಾಳೆಂದರು.
ಇನ್ನೋರ್ವ ಪಾಲಕರಾದ ಬಾಪುಗೌಡ ವಂದಲಿ ಅವರು ಮಾತನಾಡಿ ಸಾಧನೆ ಮಾಡಬೇಕೆಂಬ ಛಲಕಟ್ಟಿಕೊಂಡು ವಿದ್ಯಾರ್ಥಿಗಳು ಮುಂದೆ ಸಾಗಬೇಕು ಬ್ರಿಲಿಯಂಟ್ ಶಿಕ್ಷಣ ಸಂಸ್ಥೆಯಲ್ಲಿ ಉತ್ತಮ ಗುರು ಇದ್ದಾರೆ ವಿದ್ಯಾರ್ಥಿಗಳು ಮುಂದೆ ಗುರಿ ಇಟ್ಟುಕೊಂಡು ಬನ್ನಿ ನಿಮ್ಮ ಸಾಧನೆ ಅಚಲವಾಗಲಿದೆ ಎಂದರು.
ಇದೇ ಸಮಯದಲ್ಲಿ ಮರು ಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಗಂಗಾ ಶಿವನಗೌಡ ಕೊಳೂರ ಹಾಗೂ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದ ಅಶ್ವಿನಿರೆಡ್ಡಿ ವಂದಲಿ ಅವರಿಗೆ ಬ್ರಿಲಿಯಂಟ್ ಶಿಕ್ಷಣ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಮಯದಲ್ಲಿ ಶ್ರೀ ಮಾರುತಿ ಶಿಕ್ಷಣ ಸಂಸ್ಥೆ(ಬ್ರಿಲಿಯಂಟ್)ನ ಉಪಾಧ್ಯಕ್ಷ ಆರ್.ಬಿ.ನಡುವಿನಮನಿ, ನಿರ್ದೇಶಕರಾದ ಎಸ್.ಎಚ್.ಪಾಟೀಲ, ಶ್ರೀಮತಿ ಎಲ್.ಎಂ.ಬಿರಾದಾರ, ಶ್ರೀಮತಿ ಎನ್.ಎಸ್.ಗಡಗಿ, ಮುಖ್ಯಗುರುಗಳಾದ ಬಿ.ಜಿ.ಕರಕಳ್ಳಿ, ಡಾ.ವಿನಾಯಕ ಪಟಗಾರ, ಸಂಪನ್ಮೂಲ ವ್ಯಕ್ತಿ ಪ್ರಕಾಶ ಹಟ್ಟಿ, ಮೊದಲಾದವರು ಉಪಸ್ಥಿತರಿದ್ದರು.

ಶಿಕ್ಷಕ ಸಿದ್ದು ಕರಡಿ ನಿರೂಪಿಸಿದರು.

ಬ್ರಿಲಿಯಂಟ್ ಅನ್ನುವದು ಜ್ಞಾನವನ್ನು ಹುಟ್ಟು ಹಾಕುವಂತಹದ್ದಾಗಿದೆ ಅಚಲವಾದ ನಂಬಿಕೆ ಶಿಕ್ಷಕರೊಂದಿಗೆ ನಾವು ನಿತ್ಯ ಚರ್ಚಿಸುವ ವಿಷಯಗಳು ನಮ್ಮಲ್ಲಿಯ ಜ್ಞಾನದ ಹೊತ್ತಿಗೆ ಗಟ್ಟಿಗೊಳಿಸಲಿದೆ ನನ್ನ ಈ ಪ್ರೌಢ ಶಿಕ್ಷಣದಲ್ಲಿ ಯಾವುದೇ ಸಂದರ್ಬದಲ್ಲಿಯೂ ವಿಷಯವಾರು ಚರ್ಚೆಗೆ ಬಂದಾಗ ಎಲ್ಲ ಶಿಕ್ಷಕರು ಸಿಟ್ಟಿಲ್ಲದೇ ಉತ್ತರಿಸಿ ತಿಳಿ ಹೇಳಿದ್ದರಿಂದ ಎಸ್‍ಎಸ್‍ಎಲ್‍ಸಿ ಪರಿಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಬರಲು ಸಾಧ್ಯವಾಗಿದೆ. 
                                        ಕುಮಾರಿ ಗಂಗಾ ಕೊಳೂರ 
                                                               ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ