Home ಜಿಲ್ಲೆ ಸಾಧನೆ ನಮ್ಮನ್ನು ಗುರುತಿಸುತ್ತದೆ:ಶಾಂತಗೌಡ ಪಾಟೀಲ

ಸಾಧನೆ ನಮ್ಮನ್ನು ಗುರುತಿಸುತ್ತದೆ:ಶಾಂತಗೌಡ ಪಾಟೀಲ

ಸೈದಾಪುರ:ಜೂ.೨೨:ಸೇವಾ ಅವಧಿಯಲ್ಲಿ ನಾವು ಮಾಡಿದ ಸಾಧನೆ ನಿವೃತ್ತಿಯ ನಂತರದಲ್ಲಿ ಗುರುತಿಸುವುದರ ಮೂಲಕ ನಮ್ಮ ವ್ಯಕ್ತಿತ್ವದ ಮಹತ್ವ ಎಚ್ಚಾಗುತ್ತದೆ. ಅದು ಇಲ್ಲಿ ಕಾಣುತ್ತಿದೆ ಎಂದು ನಿವೃತ್ತಾ ಡಿಡಿಪಿಐ ಶಾಂತಗೌಡ ಪಾಟೀಲ ಅಭಿಪ್ರಾಯಪಟ್ಟರು.
ಸಮೀಪದ ಮುನಗಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಯೋನಿವೃತ್ತಿ ಹೊಂದಿದ ಮುಖ್ಯಗುರು ಯಂಕಾರೆಡ್ಡಿ ಪಾಟೀಲ ಹಾಗೂ ವರ್ಗಾವಣೆಗೊಂಡ ಯಾಸ್ಮೀನ್ ಮುಖ್ಯಗುರುಗಳ ಬೀಳ್ಕೊಡಿಗೆ ಮತ್ತು ಶಾಲೆಗೆ ಬಡ್ತಿಹೊಂದಿ ನೂತನ ಮುಖ್ಯಗುರುಗಳಾಗಿ ಬಂದ ಲಿಂಗಣ್ಣಗೌಡ ಅವರಿಗೆ ಹಮ್ಮಿಕೊಂಡ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಶಾಲಾ ಅಭಿವೃದ್ಧಿಯಲ್ಲಿ ಗ್ರಾಮದ ಸಹಕಾರ ಅತಿ ಮುಖ್ಯವಾಗಿದ್ದೂ ಅವರ ಸಹಕಾರದೊಂದಿಗೆ ಉತ್ತಮ ಕಾರ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದುತ್ತಿರುವ ಯಂಕಾರೆಡ್ಡಿ ಅವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ಯಾದಗಿರಿ ಸರಕಾರಿ ಪ್ರೌಢ ಶಾಲಾ ಮುಖ್ಯಗುರು ಮಲ್ಲಿಕಾರ್ಜುನ ಪೂಜಾರಿ ಮಾತನಾಡಿ, ಯಂಕರೆಡ್ಡಿಯವರು ಸೇವಾ ಮನೋಭಾವನೆಯೊಂದಿಗೆ ಕಾರ್ಯ ನಿರ್ವಹಿಸಿದ್ದಾರೆ. ಅವರ ಆದರ್ಶಗಳನ್ನು ನಾವು ಪಾಲಿಸೋಣ. ಶಾಲಾ ಅಭಿವೃದ್ಧಿಗೆ ಎಲ್ಲರೂ ಪ್ರಯತ್ನ ಮಾಡೋಣ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಕನ್ನಳ್ಳಿ, ಕೇತ್ರ ಸಮನ್ವಯಧಿಕಾರಿ ಜಗದೀಶ ಸಜ್ಜನ್, ಮಲ್ಲಿಕಾರ್ಜುನ ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷ ಭೀಮಣ್ಣ ಪಾಪಣ್ಣನೋರ್, ಶಾಲಾ ಮುಖ್ಯಗುರು ಲಿಂಗಣ್ಣಗೌಡ, ಲಿಂಗರೆಡ್ಡಿ ನಾಯಕ್, ಜಿ.ಎಂ.ಗುರುಪ್ರಸಾದ, ಕರಬಸಯ್ಯ ದಂಡಗಿಮಠ, ಸಂಗಾರೆಡ್ಡಿಗೌಡ ಮಾಲಿಮಾಟೀಲ, ಶಿವುಕುಮಾರ ಹೂಗಾರ, ಮೈಹಿಪಾಲರೆಡ್ಡಿ ಹಳೇಮನಿ, ಸೈಯದ್ ಶೇರಅಲಿ, ಸಿಆರ್‌ಪಿ ಲಿಂಗಾರಡ್ಡಿ, ಷಣ್ಮುಖ ತಾಂಬೂಳ್ಕರ್, ಶುಭ್ರಮಣಿ, ಬಸವರಾಜ, ಯಾಸ್ಮೀನ, ಶಿವಕಾಂತಮ್ಮ, ಶಾಲಾ ಶಿಕ್ಷಕರಾದ ಸುಜಾತ, ಮಮತಾ ಪಾಟೀಲ, ಸುವರ್ಣ, ಗಿರೀಜಾ, ವಿವಿಧ ಶಾಲೆಗಳ ಮುಖ್ಯಗುರುಗಳು, ಗ್ರಾಮಸ್ಥರು, ಎಸ್‌ಡಿಎಂಸಿ ಪದಾಧಿಕಾರಿಗಳು, ಹಳೆ ವಿದ್ಯಾರ್ಥಿಗಳು ಸೇರಿದಂತೆ ಇತರರಿದ್ದರು. ಗಿರಿಶ ಸ್ವಾಗತಿಸಿದರು. ಭೀಮರೆಡ್ಡಿ ಪ್ರಾಸ್ತಾವಿಕ ಮಾತನಾಡಿದರು. ತಿಪ್ಪೇಸ್ವಾಮಿ ನಿರೂಪಿಸಿದರು.