
ಕಲಬುರಗಿ,ಫೆ.03: ನೀತಿ ಆಯೋಗ ಗುರುತಿಸಿರುವ ಜಿಲ್ಲೆಯ ಆಫಜಲಪೂರ, ಕಾಳಗಿ, ಶಹನಾದ ತಾಲೂಕಿನಲ್ಲಿ ಸಂಪೂರ್ಣತಾ ಅಭಿಯಾನ 2.0 ರ ಮೂಲಕ ಆರೋಗ್ಯ, ಅಪೌಷ್ಟಿಕತೆ ನಿವಾರಣೆ, ಶಿಕ್ಷಣ ಹಾಗೂ ಕೃಷಿ ಕ್ಷೇತ್ರಗಳಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸುವುದು ನಮ್ಮ ಗುರಿಯಾಗಿದ್ದು, ಅದನ್ನು ಪರಿಣಾಮಕಾರಿಯಾಗಿ ಅನುμÁ್ಠನ ಮಾಡಬೇಕು ಎಂದು ಅಧಿಕಾರಿಗಳಿಗೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಸೂಚಿಸಿದರು.
ಸೋಮವಾರ ಇಲ್ಲಿನ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ ನೀತಿ ಆಯೋಗದ ಮಹತ್ವಾಕಾಂಕ್ಷಿ ಕಾರ್ಯಕ್ರಮ “ಸಂಪೂರ್ಣತಾ ಅಭಿಯಾನ 2.0″ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೂರು ಆಕಾಂಕ್ಷಿ ಬ್ಲಾಕ್‍ಗಳಲ್ಲಿ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಅನುμÁ್ಠನಗೊಳಿಸಲು ಇಲಾಖೆಗಳ ನಡುವಿನ ಸಮನ್ವಯ ಅತ್ಯಗತ್ಯ ಎಂದು ಪ್ರತಿಪಾದಿಸಿದರು.
ಇನ್ನು ಕ್ಷೇತ್ರ ಮಟ್ಟದ ನಿರಂತರ ಮೇಲ್ವಿಚಾರಣೆ ಅತ್ಯವಶ್ಯಕವಾಗಿದೆ. ಪ್ರಮುಖವಾಗಿ ಜನರ ಸಹಭಾಗಿತ್ವ ಅತ್ಯಂತ ಅಗತ್ಯವೆಂದು ಒತ್ತಿ ಹೇಳಿದ ಅವರು, ಯಾವುದೇ ಅರ್ಹ ಫಲಾನುಭವಿಯೂ ಸರ್ಕಾರಿ ಯೋಜನೆ ಮತ್ತು ಸೌಲಭ್ಯಗಳಿಂದ ಹೊರಗುಳಿಯದಂತೆ ಎಚ್ಚರ ವಹಿಸಬೇಕೆಂದರು.
ಕಾಳಗಿಯೆ ನಮಗೆ ಪ್ರೇರಣೆ: ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವಾರ್ ಸಿಂಗ್ ಮಾತನಾಡಿ, ನೀತಿ ಆಯೋಗದ ಸಂಪೂರ್ಣತಾ ಅಭಿಯಾನ 1.0ರಲ್ಲಿ ಕಾಳಗಿ ಆಕಾಂಕ್ಷಿ ಬ್ಲಾಕ್ 6 ಸೂಚಕಗಳಲ್ಲಿ 5 ಸೂಚಕಗಳನ್ನು ಶೇ.100ರಷ್ಟು ಪ್ರಗತಿ ಸಾಧಿಸಿ ಬೆಳ್ಳಿ ಪದಕ ಪಡೆದಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದಲ್ಲದೆ 2.0 ಅಭಿಯಾನಕ್ಕೆ ಇದೇ ಪ್ರೇರಣೆಯಾಗಿದೆ ಎಂದರು.
ಸಂಪೂರ್ಣತಾ ಅಭಿಯಾನ 2.0ರಲ್ಲಿ ಶೇ.100ರಷ್ಟು ಗುರಿ ಸಾಧನೆಗೆ ಎಲ್ಲರು ಸಂಕಲ್ಪ ಮಾಡಬೇಕು. ಎಲ್ಲಾ ಇಲಾಖೆಗಳು ಪ್ರತಿ 3 ತಿಂಗಳಿಗೊಮ್ಮೆ ಕಾರ್ಯಯೋಜನೆ ರೂಪಿಸಬೇಕು. ಪ್ರತಿ ವಾರ ಪರಿಶೀಲನೆ, ಕ್ಷೇತ್ರ ಭೇಟಿ ಹಾಗೂ ನೈಜ ಫಲಿತಾಂಶ ಆಧಾರಿತ ಅನುμÁ್ಠನಕ್ಕೆ ತರವುದು ನಮ್ಮೆಲ್ಲರ ಆದ್ಯತೆ ಆಗಬೇಕು ಎಂದರಲ್ಲದೆ ದಾಖಲೆಗಿಂತ ನೆಲಮಟ್ಟದ ಸಾಧನೆ ಮುಖ್ಯ ಎಂಬುದನ್ನು ಅವರು ಸ್ಪಷ್ಟಪಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕ ಜಗದೇವಪ್ಪ, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಡಿ.ಎಚ್.ಓ ಡಾ. ಶರಣಬಸಪ್ಪ ಕ್ಯಾತನಾಳ, ಆಕಾಂಕ್ಷಿ ಬ್ಲಾಕ್ ಫೆಲೋ ಶಿವರಾಜ ಹೊಳ್ಕರ್ ಸೇರಿದಂತೆ ಕಾಳಗಿ, ಆಫಜಲಪೂರ ಹಾಗೂ ಶಹಾಬಾದ ತಾಲ್ಲೂಕಿನ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಸಿ.ಡಿ.ಪಿ.ಓ ಗಳು, ಸಹಾಯಕ ಕೃಷಿ ನಿರ್ದೇಶಕರುಗಳು, ತಾಲೂಕಾ ಆರೋಗ್ಯಾಧಿಕಾರಿಗಳು ಹಾಗೂ ಜಿಲ್ಲಾ ಹಾಗೂ ಬ್ಲಾಕ್ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

























