
ಕಮಲನಗರ:ಡಿ.10: ತಾಲ್ಲೂಕಿನ ಚಿಮ್ಮೇಗಾಂವ್ ಕ್ರಾಸ್ ಬಳಿ ಭಾನುವಾರ ಬೆಳಿಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಓರ್ವನ ಸಾವುನೊಪ್ಪಿದ ಘಟನೆ ಜರುಗಿದೆ.
ಮಹಾರಾಷ್ಟ್ರದ ಮುಖ್ಖೇಡ್ ತಾಲ್ಲೂಕಿನ ಚಾಂಡೋಳ ತಾಂಡಾ ಗ್ರಾಮದ ಅತೀಶ ವೆಂಕಟ ರಾಠೋಡ್(25) ಮೃತಪಟ್ಟ ದುರ್ಧೈವಿ ಎಂದು ಗುರುತಿಸಲಾಗಿದೆ.
ಅತೀಶ ಬೆಳಿಗ್ಗೆ ಖಾಸಗಿ ಔಷಧಿ ತರಲು ಉದಗೀರದಿಂದ ಖಂಡಿಕೇರಾ ಗ್ರಾಮಕ್ಕೆ ಬೈಕ್ ಮೇಲೆ ತೆರಳುತ್ತಿದ್ದನು. ಚಿಮ್ಮೆಗಾಂವ್ ಗ್ರಾಮದಿಂದ ಗುಡ್ ಸಾಬ್ ಮೈನೋದ್ದೀನ್ ಶೇಖ್(40) ಪಕ್ಕದ ರಸ್ತೆಯಿಂದ ಬೈಕ್ ಮೇಲೆಬರುತ್ತಿರುವಾಗ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಸುದ್ಧಿ ತಿಳಿಯುತ್ತಿದ್ದಂತೆ ಹೊಕರಣಾ ಪೆÇಲೀಸ್ ಠಾಣೆ ಎಎಸ್‍ಐ ಮಾಧವ ಬಿರಾದಾರ, ಎಎಸ್‍ಐ ಮಲ್ಲಿಕಾರ್ಜುನ ಬಿರಾದರ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಮೃತನ ತಂದೆ ವೆಂಕಟ ರಾಮರಾವ ರಾಠೋಡ್ ನೀಡಿದ ದೂರಿನ ಮೇರೆಗೆ ಹೊಕರಣಾ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.


























