
ಚನ್ನಮ್ಮನ ಕಿತ್ತೂರು,ಜು3: ತಹಶೀಲ್ದಾರರಾಗಿ ಕಾರ್ಯನಿರ್ವಹಿಸುತ್ತಿದ್ದ ರವೀಂದ್ರ ಹಾದಿಮನಿ ನೂತನ ಕಾಗವಾಡ ತಾಲೂಕಿಗೆ ವರ್ಗಾವಣೆಗೊಂಡಿದ್ದರಿಂದ ತೆರವಾದ ಸ್ಥಾನಕ್ಕೆ ಹೊಸದಾಗಿ ತಹಶೀಲ್ದಾರರಾಗಿ ಕಲ್ಲನಗೌಡ ಪಾಟೀಲ ಅವರು ಅಧಿಕಾರವಹಿಸಿಕೊಂಡರು. ಇವರನ್ನು ಸರ್ಕಾರಿ ನೌಕರರ ಸಂಘ, ಕಂದಾಯ ಇಲಾಖೆ, ಗ್ರಾಮಲೆಕ್ಕಿಗರು, ಡಿ ಗ್ರೂಪ್ ನೌಕರರು ಸನ್ಮಾನಿಸಿದರು. ನಂತರ ಪಪಂ ಅಂಬೇಡ್ಕರ ಭವನದಲ್ಲಿ ಅಧ್ಯಕ್ಷ-ಉಪಾಧ್ಯಕ್ಷ, ಸರ್ವಸದಸ್ಯರು ಪೌರಕಾರ್ಮಿಕರು, ಸಿಬ್ಬಂದಿ, ನಿರ್ಗಮಿತ ತಹಶೀಲ್ದಾರರನ್ನು ಹಾಗೂ ಹೊಸದಾಗಿ ಆಗಮಿಸಿದ ತಹಶೀಲ್ದಾರರನ್ನು ಸನ್ಮಾನಿಸಿದರು.
ನಂತರ ಸನ್ಮಾನ ಸ್ವೀಕರಿಸಿ ನೂತನ ತಹಶೀಲ್ದಾರ ಕಲ್ಲನಗೌಡ ಪಾಟೀಲ ಮಾತನಾಡಿ, ತಾಲೂಕಿನ ಅಭಿವೃದ್ಧಿಗಾಗಿ ಶ್ರಮಿಸೋಣ. ನಿಮ್ಮೇಲ್ಲರ ಸಹಕಾರ ಮುಖ್ಯ ಎಂದರು.
ವರ್ಗಾವಣೆಗೊಂಡ ತಹಶೀಲ್ದಾರ ರವೀಂದ್ರ ಹಾದಿಮನಿ ಮಾತನಾಡಿದರು. ಪಪಂ ಸ್ಥಾಯಿ ಸಮಿತಿ ಚೇರಮನ್ ಎಫ್.ಎಂ. ಜಕಾತಿ ಪ್ರಾಸ್ತಾವಿಕ ನುಡಿಯನ್ನಾಡಿದರು.
ಇದೇ ವೇಳೆ ತಾಲೂಕಾ ನೂತನ ಅಧಿಕಾರಿಯಾಗಿ ಪಶು ಇಲಾಖೆ ಮುಖ್ಯಾಧಿಕಾರಿ ರಮೇಶ ಕದಂ ಅವರನ್ನು ಸತ್ಕರಿಸಲಾಯಿತು. ನಿರೂಪಣೆ, ಸ್ವಾಗತ, ವಂದನಾರ್ಪಣೆ ಪಪಂ ಮುಖ್ಯಾಧಿಕಾರಿ ಮಲ್ಲಯ್ಯಾ ಹಿರೇಮಠ ಮಾಡಿದರು.
ಈ ವೇಳೆ ಪಪಂ ಅಧ್ಯಕ್ಷ ಜೈಸಿದ್ರಾಮ ಮಾರಿಹಾಳ ಸಭೆ ಅಧ್ಯಕ್ಷತೆ ವಹಿಸಿದ್ದರು, ಪಿಎಸ್‍ಐ ಪ್ರವೀಣ ಗಂಗೋಳ ಹಾಗೂ ಪ್ರವೀಣ ಕೋಟಿ, ಉಪಾಧ್ಯಕ್ಷ ಎಸ್. ಸುತ್ತಗಟ್ಟಿ, ಸಂಗಪ್ಪ ನರಗುಂದ, ಶಾರದಾ.ಪ್ರ.ಜಕ್ಕನ್ನಗೌಡರ, ರಾಜು ಕಲ್ಲವಡ್ಡರ, ಆಸ್ಮಾ ನದಿಮುಲ್ಲಾ, ಎಸ್.ಆರ್.ಗಂಗಪ್ಪನವರ, ಸಿಬ್ಬಂದಿ ಎಸ್.ಎಸ್.ಮ್ಯಾಗೇರಿ, ಬಾಲು ಸಾಣಿಕೊಪ್ಪ, ವೇಕಟೇಶ ಕಾಮಣ್ಣವರ, ಮಂಜುನಾಥ ಬೂದಿಹಾಳ, ಸುನೀಲ ಕಾದ್ರೋಳ್ಳಿ, ವiಹಾಂತೇಶ ವಕ್ಕುಂದ, ಐಶ್ವರ್ಯಾ ಬೂದಿಹಾಳ, ಬಸು ಬೈಲೂರ, ಶಿಲ್ಪಾ ಮೊರಬದ, ಆಶ್ರಪ್ ವೀರಾಪೂರ, ಮಂಜುನಾಥ ಹಡಪದ, ಪೌರಕಾರ್ಮಿಕರು, ತಹಶೀಲ್ದಾರ ಕಚೇರಿ ಸರ್ವಸಿಬ್ಬಂದಿ, ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.