ಮಳೆ ಲೆಕ್ಕಿಸದೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಎಸಿ ತಹಸಿಲ್ದಾರ್ ಬೇಟಿ

ಸೇಡಂ, ಸೆ,27: ಇಂದು ಮತ್ತು ನಾಳೆ ಅತೀ ಹೆಚ್ಚು ಮಳೆ ಬರುವುದುರಿಂದ ಹಳ್ಳಕೊಳ್ಳಲು ಉಕ್ಕಿ ಹರಿಯುತ್ತಿದ್ದು ನದಿ ಸಮೀಪ ಇರುವ ಗ್ರಾಮಗಳ ಜನರು ಎತ್ತರದ ಸ್ಥಳದಲ್ಲಿ ಉಳಿದುಕೊಳ್ಳಲು ಈಗಾಗಲೇ ಸೂಚನೆ ನೀಡಲಾಗಿದೆ ಜೊತೆಗೆ ಮಳಖೇಡ ತೇಲ್ಕೂರ್ ಗ್ರಾಮಗಳಲ್ಲಿ ಕಾಳಜಿ ಕೇಂದ್ರದ ಮೂಲಕ ಊಟ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸಹಾಯಕ ಉಪ ವಿಭಾಗ ಆಯುಕ್ತರಾದ ಪ್ರಭು ರೆಡ್ಡಿ ಅವರು ಹೇಳಿದರು.ಇಂದು ಬೆಳಗ್ಗೆ ಸಹಾಯಕ ಆಯುಕ್ತರು ಮತ್ತು ತಹಶೀಲ್ದಾರ್ ಸೇರಿದಂತೆ ತಾಲೂಕ ಆಡಳಿತ ಅಧಿಕಾರಿಗಳು ಮಳಖೇಡ ಗ್ರಾಮಕ್ಕೆ ಭೇಟಿ ನೀಡಿ ಕಾಗಿಣಾ ನದಿಯ ನೀರು ದರ್ಗಾದ ಸಮೀಪದಲ್ಲಿರುವ ಮನೆಗಳಿಗೆ ನೀರು ನುಗ್ಗಿರುವುದನ್ನು ಪರಿಶೀಲಿಸಿ ಜನರಿಗೆ ಅವರಿಗೆ ಬೇರೆ ಕಡೆ ಉಳಿದುಕೊಳ್ಳಲು ಸಲಹೆ ನೀಡಿರುವುದರಿಂದ ಕಾಳಜಿ ಕೇಂದ್ರಗಳಲ್ಲಿ ಎರಡು ದಿನಗಳ ಕಾಲ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು. ಈ ವೇಳೆಯಲ್ಲಿ ತಹಸಿಲ್ದಾರ್ ಶ್ರೇಯಾಂಕ್ ಧನುಶ್ರೀ,ಮಳಖೇಡ ಗ್ರಾಪಂ ಅಧ್ಯಕ್ಷರಾದ ದಿನೇಶ್ ಪಾಟೀಲ್ ಸಣ್ಣೂರು, ಗ್ರಾಮ್ ಲೆಕ್ಕಾಧಿಕಾರಿ ಚಂದ್ರಕಾಂತ್ ಬಾವೆ, ಗ್ರಾಮ ಪಂಚಾಯತ್ ಸದಸ್ಯರು, ಪೆÇಲೀಸ್ ಸಿಬ್ಬಂದಿ ಸೇರಿದಂತೆ ಅನೇಕರು ಇದ್ದರು