
ಇಂಡಿ :ನ.10: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕಬ್ಬು ಬೆಳೆ ರೂ 3300 ಬೆಲೆ ನೀಡ ಬೇಕೆಂಬ ಕರ್ನಾಟಕ ರಾಜ್ಯ ರೈತ ಸಂಘದಿಂದ ನಡೆದ ಅನೀರ್ದೀಷ್ಟ ಧರಣಿ ಸತ್ಯಾಗ್ರಹ ಇಂದು ಅಂತ್ಯಗೊಂಡಿದೆ
ಇಂದು ಕಂದಾಯ ಉಪವಿಬಾಗಾಧಿಕಾರಿ ಅನುರಾಧಾ ವಸ್ತ್ರದರವರು ಹೋರಾಟ ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾಧಿಕಾರಿಗಳು ನೀಡಿದ ಆದೇಶ ಪ್ರತಿಯನ್ನು ನೀಡಿ ಧರಣಿ ಹಿಂದೆ ಪಡೆಯಲು ವಿನಂತಿಸಿದ ನಿಮಿತ್ಯ ಧರಣಿ ಹಿಂದೆ ಪಡೆದಿದ್ದಾರೆ.
ಎಸಿ ಅನುರಾಧಾ ವಸ್ತ್ರದರವರು ಮಾತನಾಡಿ ಕಬ್ಬಿನ ಬೆಲೆ ಕುರಿತು ಜಿಲ್ಲಾಧಿಕಾರಿಗಳು ಆದೇಶ ಪತ್ರ ನೀಡಿದ್ದು ಸರಕಾರ ರೈತರು ಬೆಳೆದ ಕಬ್ಬಿಗೆ ಬೆಲೆ ನೀಡಲು ಪ್ರಾಮಾಣಿಕ ಪ್ರಯತ್ನ ನೀಡಿದೆ. ಅದರ ಆದೇಶ ಪ್ರತಿ ತಮಗೆ ನೀಡುತ್ತಿದ್ದು ಧರಣಿ ಹಿಂದೆ ಪಡೆಯಲು ಕೇಳಿಕೊಂಡರು. ಮತ್ತು ಕಬ್ಬಿನ ತೂಕದಲ್ಲಿ ಪಾರದರ್ಶಕತೆಗೆ ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ಕ್ರಮ ತೆಗೆದುಕೊಳ್ಳುವಾಗಿ ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎಸ್.ಬಿ.ಕಂಬೋಗಿ ಮಾತನಾಡಿಇಂಡಿ ತಾಲೂಕಿನ ಭೀಮಾಶಂಕರ ಕಾರ್ಖಾನೆ ಮರಗೂರ, ಇಂಡಿಯನ ಕೇನ್ ಪಾವರ ಲಿಮಿಟೆಡ ಘಟಕ ಮೂರು ಹಿರೇಬೇವನೂರ ಸಕ್ಕರೆ ಕಾರ್ಖಾನೆ ಮತ್ತು ಜಮಖಂಡಿ ಸುರ್ಸ ಘಟಕ 2 ನಾದದ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗೆ ಪ್ರತಿ ಟನ್ ಗೆ ಎಷ್ಟು ಹಣ ನೀಡುತ್ತಾರೆಂದು ತಿಳಿಸಿದ ನಂತರ ರೈತರಿಗೆ ಸಮಾಧಾನವಾಗದಿದ್ದರೆ ಹೋರಾಟ ಮತ್ತೆ ಮುಂದುವರೆಸುತ್ತೇವೆ ಈಗ ತಾತ್ಪೂರ್ತಿಕ ಹಿಂದೆ ಪಡೆಯುತ್ತೇವೆ ಎಂದರು.
ಕರವೇ ಅಧ್ಯಕ್ಷ ಬಾಳು ಮುಳಜಿ ಮಾತನಾಡಿ ಹೋರಾಟ ತಾತ್ಪೂರ್ತಿಕ ಅಂತ್ಯ ಗೊಂಡಿದೆ. ಇಂಡಿ ತಾಲೂಕಿನ ಕಾರ್ಖಾನೆಗಳು ಎಫ್‍ಆರ್‍ಪಿ ಬೆಲೆಯ ಮೇಲೆ ಕಬ್ಬಿನ ಬೆಲೆ ನೀಡುತ್ತಾರೆ. ಸರಿಯಾದ ಬೆಲೆ ನೀಡದಿದ್ದರೆ ಮತ್ತೆ ಹೋರಾಟ ಪ್ರಾರಂಭಿಸುತ್ತೇವೆ ಎಂದರು. ಮತ್ತು ಕಂದಾಯ ಉಪ ವಿಬಾಗಾಧಿಕಾರಿಗಳು ತೂಕದ ಬಗ್ಗೆ ಕಾಳಜಿ ವಹಿಸಬೇಕು. ತೂಕದಲ್ಲಿ ರೈತರಿಗೆ ಮೋಸ ಆಗುತ್ತಿದೆ ಎಂದರು.
ಜೆಡಿ ಎಸ್ ಮುಖಂಡ ಬಿ ಡಿ ಪಾಟೀಲ, ಮಲ್ಲು ಗುಡ್ಲ, ಅನೀಲಗೌಡ ಬಿರಾದಾರ, ಅಯೂಬ ನಾಟಿಕಾರ, ರಾಮಸಿಂಗ ಕನ್ನೊಳ್ಳಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಸೋಮಣ್ಣ ಗುಡ್ಲೆನವರ, ಸಿದ್ದರಾಮ ತಳವಾರ, ಮಲ್ಲಿಕಾರ್ಜುನ ನಾವದಗಿ, ಮಲ್ಲೇಶಗೌಡ ಪಾಟೀಲ, ಮಹೇಶ ಹೂಗಾರ, ಮಲ್ಲಿಕಾರ್ಜುನ ಹೊರ್ತಿ, ಅದೃಷ್ಯಪ್ಪಾ ವಾಲಿ ಮತ್ತಿತರಿದ್ದರು.

























