ಸಿಯುಕೆಯಲ್ಲಿ ಒಂದು ವಾರದ ಅಭಿಯಂತರೋತ್ಸವ ಸಂಪನ್ನ

ಕಲಬುರಗಿ,ಸೆ.21: ಅಣೆಕಟ್ಟುಗಳು, ಸೇತುವೆಗಳು, ಪ್ರವಾಹ ರಕ್ಷಣಾ ವ್ಯವಸ್ಥೆ, ಅನೇಕಸಂಸ್ಥೆಗಳನ್ನು ಮತ್ತು ಉಕ್ಕಿನ ಸ್ಥಾವರಗಳನ್ನು ನಿರ್ಮಿಸುವ ಮೂಲಕಸುಸ್ಥಿರ ಭಾರತವನ್ನು ಸೃಷ್ಟಿಸಿದ ಸರ್ ಎಂ ವಿಶ್ವೇಶ್ವರಯ್ಯನವರನ್ನು
ಮಾದರಿಯಾಗಿ ತೆಗೆದುಕೊಂಡು ಜಗತ್ತಿನಲ್ಲಿ ಅದ್ಭುತಗಳನ್ನು ಸೃಷ್ಟಿಸಿ ಎಂದು ಸಿಯುಕೆಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣಹೇಳಿದರು.
ಅವರು ಇಂಜಿನಿಯರ್ಸ ದಿನದ ಅಂಗವಾಗಿಸಿಯುಕೆಯ ಇಂಜಿನಿಯರಿಂಗ್ ನಿಕಾಯ ಆಯೋಜಿಸಿದ್ದ ತಾಂತ್ರಿಕ ಮತ್ತುಸಾಂಸ್ಕøತಿಕ ಕಾರ್ಯಕ್ರಮಗಳ ಸಂಗಮವಾದ ಒಂದು ವಾರದಅಭಿಯಂತರೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಅವರು ಮುಂದುವರೆದು ಮಾತನಾಡಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸರ್ ಎಂವಿಶ್ವೇಶ್ವರಯ್ಯನವರ ಮಾರ್ಗವನ್ನು ಅನುಸರಿಸಬೇಕು ಮತ್ತು ಅವರಂತೆಆಗಬೇಕು. ಅವರು ವಿನಮ್ರ ಮತ್ತು ಶ್ರೇಷ್ಠ ವ್ಯಕ್ತಿಯಾಗಿದ್ದರು. ಅವರುಎಲ್ಲಾ ಎಂಜಿನಿಯರ್‍ಗಳಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಅತಿಥಿ ಭಾಷಣಕಾರರಾಗಿ ಆಗಮಿಸಿದ ಇಸ್ಕಾನ್ ಯುವ ವೇದಿಕೆಯ ಬೆಂಗಳೂರಿನ ಎಸ್ ಜಿಹರಿದಾಸ್ ಮತ್ತು ಕುಲಸಚಿವ ಪೆÇ್ರ. ಆರ್ ಆರ್ ಬಿರಾದಾರ್ ಕೂಡ ಮಾತನಾಡಿದರು.
ಈ ಕಾರ್ಯಕ್ರಮದ ಭಾಗವಾಗಿ ಕ್ಯಾಂಪಸ್‍ನಲ್ಲಿ ಗಿಡ ನೆಡುವ ಮತ್ತು ಹಸಿರುಅಭಿಯಾನ,ಪ್ರಾಜೆಕ್ಟ್ ಎಕ್ಸ್‍ಪೆÇೀ ಮತ್ತುಆಪರೇಷನ್ ಸಿಂಧೂರ್ ಪ್ರದರ್ಶನವನ್ನು ಸಹ ಆಯೋಜಿಸಲಾಗಿತ್ತು. ಸುಂಟನೂರ
ಸರ್ಕಾರಿಶಾಲೆ, ಮೌಂಟ್ ಕಾರ್ಮೆಲ್ ಶಾಲೆ ಮತ್ತು ಕಡಗಂಚಿಸರ್ಕಾರಿ ಶಾಲೆ, ಅಜೀಂಪ್ರೇಮ್‍ಜಿ ಶಾಲೆ, ಪಟ್ಟಣ ಶಾಲೆಗಳ ವಿದ್ಯಾರ್ಥಿಗಳು ಪ್ರದರ್ಶನದಲ್ಲಿಭಾಗವಹಿಸಿದ್ದರು. ಪ್ರದರ್ಶನ ಯೋಜನೆಯ ಮಾದರಿಗಳಲ್ಲಿ ಐಒಟಿ ಆಧಾರಿತಹೋಮ್ ಆಟೊಮೇಷನ್ ಸಿಸ್ಟಮ್, ಎಐ ಬಳಸುವ ರೋಬೋಟಿಕ್ ಆರ್ಮ್, ಮೋಷನ್‍ಸೆನ್ಸಿಂಗ್ ವೆಹಿಕಲ್, ರೆಟಿನಲ್ ವೆಸೆಲ್ ಸೆಗ್ಮೆಂಟೇಶನ್ ಮಾದರಿ, ಆರ್‍ಎಫ್‍ಐಡಿ ಆಧಾರಿತಡೋರ್ ಲಾಕಿಂಗ್ ಸಿಸ್ಟಮ್‍ಗಳನ್ನು ಪ್ರದರ್ಶಿಸಲಾಯಿತು. ಆಪರೇಷನ್ ಸಿಂಧೂರ್
ಪ್ರದರ್ಶನ ಮಾದರಿಗಳಲ್ಲಿ ಐಎನ್‍ಎಸ್ ವಿಕ್ರಾಂತ್, ರಫೇಲ್, ಬ್ರಹ್ಮೋಸ್, ಎಸ್ 400,ಅರ್ಜುನ್ ಟ್ಯಾಂಕ್, ಎಂಕ್ಯೂ 9 ಅನ್ನು ಪ್ರದರ್ಶಿಸಲಾಯಿತು. ಹ್ಯಾಕಥಾನ್ ಮತ್ತುಕೋಡಿಂಗ್ ರಸಪ್ರಶ್ನೆಯನ್ನು ಸಹ ನಡೆಸಲಾಯಿತು. ಇತರವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಸಹ ಇದರಲ್ಲಿ ಭಾಗವಹಿಸಿದರು.ಈ ಸಂದರ್ಭದಲ್ಲಿ ಡೀನ ಪೆÇ್ರ.ಪರಮೇಶ, ಪೆÇ್ರ.ವೀರೇಶ ಕಸಬೇಗೌಡರ,ಪೆÇ್ರ.ಅಮರೇಂದ್ರ ಮತ್ಸ, ಡಾ. ಲಾಯಕ ಅಲಿ, ಡಾ.ಸಂಗಮೇಶ,
ಡಾ.ಅರುಣಕುಮಾರ ಪಾಟೀಲ್, ಡಾ.ನಶಿರ್ಂಗ್, ಡಾ.ಮಲ್ಲಿಕಾರ್ಜುನ, ಡಾ.ಉದಯ್ ಪಾಟೀಲ್,
ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.