ಒಗ್ಗಟ್ಟಿನ ಹೋರಾಟ ಅಗತ್ಯ

ಚನ್ನಮ್ಮನ ಕಿತ್ತೂರು,ನ17: ರೈತರೆಲ್ಲರೂ ಒಂದಾದಾಗ ಮಾತ್ರ ಸರ್ಕಾರಗಳು ಬಾಗುತ್ತವೆ ಎಂದು ರಾಜಗುರು ಸಂಸ್ಥಾನ ಕಲ್ಮಠ ಮಡಿವಾಳ ರಾಜಯೋಗೀಂದ್ರ ಸ್ವಾಮಿಜೀ ಖಡಕ್ಕಾಗಿ ಹೇಳಿದರು.


ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಕ್ಕರೆ ಕಾರ್ಖಾನೆಗಳಿಗೆ ರೈತರು ಕಬ್ಬು ಪೂರೈಕೆ ಮಾಡುತ್ತಾರೆ ಆದರೆ ತೂಕದಲ್ಲಿ ಮೋಸ ಇದಾಗಬಾರದೆಂದರೆ ರೈತರೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಿದಾಗ ಮಾತ್ರ ಇದು ನಿಲ್ಲುತ್ತದೆ ಮತ್ತು ಇದರೊಂದಿಗೆ ರೈತ ವಿವಿಧ ಬೆಳೆಗಳನ್ನು ಬೆಳೆಯುತ್ತಾನೆ ಅದಕ್ಕೆ ಯೋಗ್ಯ ಬೆಲೆ ಇಲ್ಲದಂತಾಗಿದೆ. ಸರ್ಕಾರ ಕ್ರಮವಹಿಸಬೇಕೆಂದು ಎಚ್ಚರಿಕೆ ನೀಡಿದರು. ಇಲ್ಲದಿದ್ದರೆ ರೈತರೆಲ್ಲರೂ ಹೋರಾಟಕ್ಕೆ ಸಿದ್ದರಿದ್ದಾರೆ ಅವರ ಜೊತೆಗೆ ನಾವಿರುತ್ತೇವೆಂದರು.


ನಿಚ್ಣಕಿ ಮಡಿವಾಳೇಶ್ವರ ಮಠ ಪಂಚಾಕ್ಷರಿ ಸ್ವಾಮಿಜೀ ಸಾನಿಧ್ಯ ವಹಿಸಿ ಮಾತನಾಡಿದರು. ಕಬ್ಬಿಗೆ ಬೆಲೆ ನಿಗದಿಯಾಗಿದೆ ಎಂದು ರೈತರು ಮನೆಯಲ್ಲಿ ಕುಳಿತಿಲ್ಲ. ಹೋರಾಟ ಮುಂದುವೆರೆಸಿದ್ದಾರೆ. ಇದು ಸರ್ಕಾರಕ್ಕೆ ಎಚ್ಚರವಿರಲಿ ಮತ್ತು ಅದರೊಂದಿಗೆ ಇನ್ನೂಳಿದ ಬೆಳೆಗಳನ್ನು ಬೆಳೆದು ಮಾರುಕಟ್ಟೆಗೆ ತಂದರೆ ಬೆಲೆ ಇಲ್ಲದಂತಾಗಿದ್ದು ಅದಕ್ಕೆ ಯೋಗ್ಯ ಬೆಲೆ ನಿಗದಿಮಾಡಬೇಕು. ತಾಲೂಕಿನ ಕುಲವಳ್ಳಿ ಗ್ರಾಪಂ ವ್ಯಾಪ್ತಿಯ 9 ಹಳ್ಳಿಗಳ ಭೂಮಿ ಹಕ್ಕಿಗಾಗಿ ಹೋರಾಟ ಮಾಡುತ್ತಿರುವ ಈ ಭಾಗದ ರೈತರಿಗೆ ನಾವೆಲ್ಲರೂ ಜೊತೆಗಿರೋಣವೆಂದರು.


ರೈತ ಮುಖಂಡ ಇಂಗಳಗುಪ್ಪೆ ಕೃಷ್ಣೇÉಗೌಡ ಮಾತನಾಡಿದರು.
ಮುಖಂಡರಾದ ಮೆಹಬೂಬ ನವಲಗುಂದ, ಬಸವರಾಜ ಮೊಕಾಶಿ, ಶಿವಸಿಂಗ ಮೊಕಾಶಿ, ನಿಂಗಪ್ಪ ತಡಕೋಡ, ಮಲ್ಲಿಕಾರ್ಜುನ ಕೊಡಳ್ಳಿ, ಎಂ.ಎಫ್ ಜಕಾತಿ, ಅಪ್ಪೇಶ ದಳವಾಯಿ, ಬೀರಪ್ಪ ದೇಶನೂರ, ಸಿದ್ದಲಿಂಗಯ್ಯಾ ವಕ್ಕುಂದಮಠ, ಇನ್ನೂ ಹಲವರು ಮಾತನಾಡಿದರು.


ಸಭೆಯಲ್ಲಿ ನಾಗರತ್ನಾ ಪಾಟೀಲ, ರಘುನಾಥ ನಡುವಿನಮನಿ, ವಿಜಯಕುಮಾರ ಶಿಂದೆ, ಮಡಿವಾಳಪ್ಪ ದೇವರಮನಿ, ಮಹಾದೇವಿ, ಹುಯಿಲಗೋಳ, ಫಕ್ಕೀರಪ್ಪ ಜಾಗಂಟಿ, ಈರಣ್ಣಾ ಅಂಗಡಿ, ಕಮ್ಮಾರ ಸೇರಿದಂತೆ ವಿವಿಧ ಜಿಲ್ಲೆ-ತಾಲೂಕ-ಹಳ್ಳಿಗಳಿಂದ ರೈತರು ಪಾಲ್ಗೊಂಡಿದ್ದರು. ಇದೇ ವೇಳೆ ಕಾರ್ಖಾನೆಯಲ್ಲಿ ಕಬ್ಬಿನ ತೂಕದಲ್ಲಾಗುವ ಮೋಸ ಹಾಗೂ ಡಿ. 23ರಂದು ರೈತರ ದಿನಾಚರಣೆ ಆಚರಿಸುವ ಕುರಿತು ಚರ್ಚಿಸಲಾಯಿತು.