
ವಿಜಯಪುರ, ಜ. 19: ನಿತ್ಯೋತ್ಸವ ಕವಿ ನಿಸ್ಸಾರ್‍ಅಹಮ್ಮದ ಅವರ ಜಯಂತ್ಯೋತ್ಸವ ನಿಮಿತ್ತ ಅಮ್ಮ ಫೌಂಡೇಶನ್ ವತಿಯಿಂದ ನಿತ್ಯೋತ್ಸವ ಕವಿಗೆ ನುಡಿನಮನ ಹಾಗೂ ಜಿಲ್ಲಾಮಟ್ಟದ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ.
ಫೆಬ್ರುವರಿ ಮೊದಲ ವಾರದಲ್ಲಿ ಪೆÇ್ರ. ಕೆ ಎಸ್ ನಿಸ್ಸಾರ್‍ಅಹಮ್ಮದ ಅವರ ಜಯಂತ್ಯೋತ್ಸವ ಇದ್ದು, ನಿತ್ಯೋತ್ಸವ ಕವಿಯೆಂದೆ ಖ್ಯಾತನಾಮರಾದ ಪೆÇ್ರ. ಕೆ ಎಸ್ ನಿಸ್ಸಾರ್‍ಅಹಮ್ಮದ ಅವರ ಬದುಕು ಬರಹ ಕುರಿತು ಚಿಂತನಾಗೋಷ್ಠಿ ನಡೆಯಲಿದೆ.
ಇಡೀ ನಾಡಿಗೆ ‘ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ ಗೀತೆ ರಚಿಸಿ ಕನ್ನಡಿಗರ ಜನಮಾನಸದಲ್ಲಿ ವಿರಾಜಮಾನರಾಗಿದ್ದಾರೆ. ಇವರ ಸ್ಮರಣೆಗಾಗಿ ನಿತ್ಯೋತ್ಸವ ಕವಿಗೆ ನುಡಿನಮನ ಹಾಗೂ ಜಿಲ್ಲಾಮಟ್ಟದ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದ್ದು, ನಾಡಿನ ಹೆಸರಾಂತ ಸಾಹಿತಿಗಳು, ಬುದ್ದಿಜೀವಿಗಳ ಸಮ್ಮುಖದಲ್ಲಿ ಸಮಾರಂಭ ಆಯೋಜಿಸಲಾಗುತ್ತಿದೆ. ಜಿಲ್ಲಾಮಟ್ಟದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳುವವರಿಗೆ ಸಮಾರಂಭದಲ್ಲಿ ಪ್ರಶಸ್ತಿ ಫಲಕ ನೆನಪಿನ ಕಾಣಿಕೆಯೊಂದಿಗೆ ವಿಶಿಷ್ಠವಾಗಿ ಗೌರವಿಸಲಾಗುವುದು. ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳುವವರು ಜನೆವರಿ 26ರ ಒಳಗಾಗಿ ಮೊಬೈಲ್ ಸಂಖ್ಯೆ: 9972115502, 9880809755 ಸಂಪರ್ಕಿಸಬೇಕೆಂದು ಅಮ್ಮ ಫೌಂಡೇಶನ್ ಗೌರವಾಧ್ಯಕ್ಷ ಯು. ಐ. ಶೇಖ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
























