
ಜಮಖಂಡಿ: ನ.20:ವಿದ್ಯುತ್ ತಂತಿ ತಗುಲಿದ ಪರಿಣಾಮ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಗೆ ಬೆಂಕಿ ಕಾಣಿಸಿಕೊಂಡು ಘಟನೆ ಜಮಖಂಡಿ ನಗರದ ಚಂದ್ರಗಿರಿ ಪೇಠೆಯಲ್ಲಿ ಜರುಗಿದೆ.
ತಾಲೂಕಿನ ಸಿದ್ದಾಪುರ ಗ್ರಾಮದ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದ ವೇಳೆ ಟ್ರ್ಯಾಕ್ಟರಗೆ ವಿದ್ಯುತ್ ತಂತಿಗೆ ತಗುಲಿ ಬೆಂಕಿ ಹೊತ್ತಿಕೊಂಡಿದೆ. ಟ್ರ್ಯಾಲಿಗೆ ಬೆಂಕಿ ತಗುಲಿ ಭಾರಿ ಬೆಂಕಿ ಕಾಣಿಸಿಕೊಂಡಾಗ ಚಂದ್ರಗಿರಿ ಪೇಠದ ಯುವಕರು ಸಾಹಸದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಘಟನೆಯ ಸಂದರ್ಭವನ್ನು ಗಮನಿಸಿದ ಚಾಲಕ ನಗರದ ಶಿವಾಜಿ ವೃತ್ತದ ಸಮೀಪ ಟ್ರ್ಯಾಕ್ಟರ್ ಅನ್ನು ನಿಲ್ಲಿಸಿ ಬೆಂಕಿಯನ್ನು ಸಂಪೂರ್ಣ ಹತೋಟಿಗೆ ತರಲು ಪ್ರಯತ್ನಿಸಿದರು. ಈ ವೇಳೆ ಸ್ಥಳಿಯರು ಹಾಗೂ ಪೆÇೀಲಿಸ್ ಸಿಬ್ಬಂದ್ದಿಗಳು ಅಗ್ನಿಶಾಮಕ ದಳವನ್ನು ಸಂಪರ್ಕಿಸಿ,ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ನಿಂಗಪ್ಪ ಹೂಗಾರ, ಟಿ.ವೈ.ಭಂಡಾರಿ, ಎಂ.ಡಿ.ಹಳೆಗೌಡರ,ಕೆ.ಬಿ.ಮುಲ್ಲಾ,
ಎಸ್.ಎಸ್.ವಾಜಂತ್ರಿ,
ಶ್ರೀಶೈಲ ಹಿರೇಮಠ ಹಾಗೂ ಪೆÇೀಲಿಸ್ ಸಿಬ್ಬಂದ್ದಿಗಳಾದ ಸದಾಶಿವ ಹೊಸೂರ, ಶಂಕರ್ ಆಸಂಗಿ,ಪೂಜಾರಿ ಆಗಮಿಸಿ ಬೆಂಕಿಯನ್ನು ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಬಕವಿ ಬನಹಟ್ಟಿ ತಾಲೂಕಿನಿಂದ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಓವರ್ ಲೋಡ್ ಕಬ್ಬನ್ನು ಸಾಗಿಸುತ್ತಿತ್ತು. ಹಾಗಾಗಿ ಮುಖ್ಯ ವಿದ್ಯುತ್ ತಂತಿಗೆ ಕಬ್ಬು ತಗುಲಿದೆ ಎಂದು ಹೇಳಲಾಗುತ್ತಿದೆ. ಈ ಟ್ರ್ಯಾಕ್ಟರ್ ಮಹಾದೇವ ಲಕ್ಷ್ಮಣ ಕುರಾದಿ ಎಂಬುವರ ಮಾಲಕತ್ವದಲ್ಲಿದ್ದು, ವಿಠ್ಠಲ ಗಸ್ತಿ ಚಾಲಕ ಚಲಾಯಿಸುತಿದ್ದ ಎಂದು ತಿಳಿದುಬಂದಿದೆ.
ಜಮಖಂಡಿ ಶಹರ ಪೆÇಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.






















