ಶಿಕ್ಷಕರಿಂದ ಬದಲಾವಣೆ ಸಾಧ್ಯ


ಧಾರವಾಡ, ಸೆ.೭: ಈ ಸಮಾಜದಲ್ಲಿ ಶಿಕ್ಷಕರಿಗೆ ಅಪಾರವಾದ ಗೌರವ, ವಿಶ್ವಾಸ ಮತ್ತು ಅವರಲ್ಲಿ ನಂಬಿಕೆ ಇದೆ. ಶಿಕ್ಷಕರಿಂದ ನಿರೀಕ್ಷಿತ ಬದಲಾವಣೆ ಸಾಧ್ಯ. ಪ್ರತಿಯೊಬ್ಬ ಶಿಕ್ಷಕರು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿ, ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ರೂಪಿಸಬೇಕೆಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್. ಲಾಡ್ ಅವರು ಹೇಳಿದರು.
ಅವರು ್ನ ಜೆ.ಎಸ್.ಎಸ್. ಕಾಲೇಜು ಆವರಣದಲ್ಲಿರುವ ಸನ್ನಿಧಿ ಕಲಾ ಕ್ಷೇತ್ರದಲ್ಲಿ ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಜಿಲ್ಲಾ ಮಟ್ಟದ ಶಿಕ್ಷಕರ ದಿನೋತ್ಸವ ಹಾಗೂ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ, ಮಾತನಾಡಿದರು.


ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಶಿಕ್ಷಕರು ಅಂದರೆ ಕೇವಲ ವೃತ್ತಿ, ಕೆಲಸ ಎಂದು ಭಾವಿಸಬಾರದು. ವಿದ್ಯೆಯನ್ನು ಸಮರ್ಪಿಸುವ ಅತ್ಯುತ್ತಮವಾದ ಕೆಲಸವಾಗಿದೆ. ಶಿಕ್ಷಕರಾದವರು ಪಾಠವನ್ನು ಮಾಡುವಾಗ ಮಕ್ಕಳಿಗೆ ಆ ಪಾಠದ ಬಗ್ಗೆ ಪ್ರೀತಿ, ಆಸಕ್ತಿ ಹಾಗೂ ಮನವರಿಕೆ ಆಗುವ ರೀತಿಯಲ್ಲಿ ಅಂದರೆ ಕಥೆಗಳ ಮುಖಾಂತರ ಹೇಳಿದರೆ, ಬಹಳ ವ?Àðಗಳ ಕಾಲ ಅದು ಅವರಿಗೆ ನೆನಪಿನಲ್ಲಿ ಉಳಿಯಲು ಸಾಧ್ಯವಾಗುತ್ತದೆ. ಶಿಕ್ಷಕರಾದವರು ವಿದ್ಯಾರ್ಥಿಗಳಲ್ಲಿ ಯಾರು ಹೆಚ್ಚು, ಕಡಿಮೆ ಎಂದು ಭಾವಿಸದೆ ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ತಮಗೆ ಕಲಿಸಿಕೊಟ್ಟ ಶಿಕ್ಷಕರನ್ನು ನೆನೆದು, ಅವರಿಗೆ ಧನ್ಯವಾದಗಳು ಸಮರ್ಪಿಸಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಹಾಪೌರರಾದ ಜ್ಯೋತಿ ಪಾಟೀಲ ಅವರು ಮಾತನಾಡಿ, ಶಿಕ್ಷಕರು ಮತ್ತು ಯೋಧರು ನಮ್ಮ ದೇಶದ ಎರಡು ಕಣ್ಣುಗಳು ಇದ್ದ ಹಾಗೆ. ಶಿಕ್ಷಕರು ವಿದ್ಯಾರ್ಥಿಗಳಿಂದ ಯಾವುದೇ ರೀತಿಯ ಅಪೇಕ್ಷೆಯನ್ನು ಇಟ್ಟುಕೊಳ್ಳದೇ, ಅವರಿಗೆ ವಿದ್ಯೆಯನ್ನು ದಾನ ಮಾಡುತ್ತಾರೆ. ಪ್ರತಿಯೊಬ್ಬ ಶಿಕ್ಷಕರು ಬಯಸುವುದೇನೆಂದರೆ ನಮ್ಮ ವಿದ್ಯಾರ್ಥಿಗಳು, ನಾವು ಕಲಿಸಿ ಕೊಟ್ಟ ವಿದ್ಯಾರ್ಥಿಗಳು ಸಮಾಜದಲ್ಲಿ ಒಂದು ಅತ್ಯುನ್ನತ್ತ ಸ್ಥಾನಲ್ಲಿ ಇದ್ದರೆ ಅದೇ ಅವರು ಶಿಕ್ಷಕರಿಗೆ ಕೊಡುವ ಗುರುದಕ್ಷಿಣೆ ಎಂದು ಹೇಳಿದರು.


ವಿದ್ಯಾ ಕಾಶಿಯನ್ನು ಉನ್ನತ ಶಿಖರಕ್ಕೆ ತೆಗೆದುಕೊಂಡು ಹೋಗಬೇಕು ಅಂದರೆ ಅದರಲ್ಲಿ ಅತ್ಯಂತ ಪ್ರಮುಖ ಪಾತ್ರ ಶಿಕ್ಷಕರದ್ದಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯುತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಮಾತನಾಡಿ, ಶಿಕ್ಷಕರು ಕೇವಲ ಪಾಠ ಮಾಡುವ ವ್ಯಕ್ತಿಗಳಲ್ಲ, ಬದಲಿಗೆ ವಿದ್ಯಾರ್ಥಿಗಳ ಭವಿ?À್ಯವನ್ನು ರೂಪಿಸುವ ಶಿಲ್ಪಿಗಳು, ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡುವ ಮಾರ್ಗದರ್ಶಕರು ಎಂದು ಹೇಳಿದರು.
ಮಕ್ಕಳಿಗೆ ಜೀವನದಲ್ಲಿ ಪ್ರೇರಣೆ ನೀಡುವ ಶಿಕ್ಷಕರು, ದೇವಸ್ವರೂಪಿಗಳು ಇದ್ದಂತೆ. ಒಬ್ಬ ವಿದ್ಯಾರ್ಥಿಯನ್ನು ನಾಯಕನ್ನಾಗಿ ರೂಪಿಸುವುದು ಶಿಕ್ಷಕರ ಸಾಮರ್ಥ್ಯವನ್ನು ಅವಲಂಭಿಸಿದೆ ಎಂದು ತಿಳಿಸಿದರು.
ಧಾರವಾಡ ಮುರುಘಾಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಆರ್ಶಿವಚನ ನೀಡಿ, ಗುರು ಎಂದರೆ ಕೇವಲ ಪಾಠ ಬೋಧಿಸುವ ವ್ಯಕ್ತಿ ಅಲ್ಲ. ಗುರು ಎಂದರೆ ಜೀವನಕ್ಕೆ ಬೆಳಕು ತರುವವನು. ಒಂದು ದೀಪ ಇನ್ನೊಂದು ದೀಪ ಬೆಳಗುವಂತೆ, ಒಬ್ಬ ಗುರು ತನ್ನ ಜ್ಞಾನದಿಂದ ಸಾವಿರಾರು ವಿದ್ಯಾರ್ಥಿಗಳ ಜೀವನ ಬೆಳಗಿಸುತ್ತಾನೆ. ಶಿಕ್ಷಣ ಕೇವಲ ಅಂಕಗಳು ಅಥವಾ ಪರೀಕ್ಷೆಗಳಿಗಾಗಿ ಅಲ್ಲ. ಅದು ವ್ಯಕ್ತಿತ್ವ ನಿರ್ಮಾಣದ ಸಾಧನ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಜಿಲ್ಲಾಮಟ್ಟದ ಶಿಕ್ಷಕ ಪ್ರಶಸ್ತಿ ವಿಜೇತರನ್ನು ಪ್ರಮಾಣ ಪತ್ರ ನೀಡಿ, ಗೌರವಿಸಲಾಯಿತು.


ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ರೇಣುಕಾ ಅಮಲಝರಿ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ವೇದಿಕೆಯಲ್ಲಿ ಡೆಯಟ್ ಪ್ರಾಚಾರ್ಯ ಜಯಶ್ರೀ ಕಾರೇಕರ, ಧಾರವಾಡ ತಹಶೀಲ್ದಾರ ಡಾ. ಡಿ.ಎಚ್.ಹೂಗಾರ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಎಫ್.ಚುಳಕಿ, ಪ್ರದಾನ ಕಾರ್ಯದರ್ಶಿ ರಾಜಶೇಖರ ಹೊನ್ನಪ್ಪನವರ, ಸರ್ಕಾರಿ ನೌಕರ ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಎಫ್. ಸಿದ್ದನಗೌಡರ, ಪ್ರೌಢಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ಭಜಂತ್ರಿ, ಬಣವಿ, ಪಾಂಡುರAಗ ಅಂಕಲಿ, ಹುದ್ದಾರ ಅವರು ಇದ್ದರು.