ಬೆಂಗಳೂರು, ಅ.೧೪- ಕೋರಮಂಗಲದ ಸಂತ ಫ್ರಾನ್ಸಿಸ್ ಪದವಿ ಕಾಲೇಜಿನ ಕನ್ನಡ ವಿಭಾಗದ ಕನ್ನಡ ಸಹ ಪ್ರಾಧ್ಯಾಪಕರಾದ ಜಗದೀಶ್ ಬಾಬು ಬಿ.ವಿ ರವರ ಸಂಚಾಲಕತ್ವದಲ್ಲಿ “ರೆವರೆಂಡ್ ಫರ್ಡಿನಾಂಡ್ ಕಿಟೆಲ್ ರವರ ಜೀವನ ಮತ್ತು ಸಾಧನೆ ಕುರಿತು ಸಾಕ್ಷ್ಯಚಿತ್ರ ಹಾಗೂ ಸಂವಾದ ಅತಿಥಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ನಿರ್ದೇಶಕರಾದ ಬ್ರದರ್, ಟೈಟಸ್ ಆಂಟೋ ರವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪ್ರಶಾಂತ್ ಪಂಡಿತ್ ಅವರು ಭಾಗವಹಿಸಿ ಅಧ್ಯಾಪಕರು ಹಾಗೂ ವಿದ್ಯಾರ್ಥಿ ಗಳಿಗೆ ತಾವು ನಿರ್ದೇಶನ ಮಾಡಿರುವ ಕನ್ನಡ-ಇಂಗ್ಲಿಷ್ ಮತ್ತು ಜರ್ಮನ್ ಭಾಷೆಯಲ್ಲಿರುವ ಕಿಟೆಲ್ ಅವರ ೮೦ ನಿಮಿಷಗಳ ಚಲನಚಿತ್ರವನ್ನು ತೋರಿಸಿ ಆನಂತರ ವಿದ್ಯಾರ್ಥಿಗಳೊಂದಿಗೆ ಪ್ರಶ್ನಾವಳಿ ಮತ್ತು ಸಂವಾದಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. . ೩೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.


























