ಸಂಸ್ಕೃತಿಯ ಸರಳ ನಿರೂಪಣೆ ವಚನದಲ್ಲಿದೆ : ಪ್ರಭುಲಿಂಗ ಸ್ವಾಮೀಜಿ

ಕಮಲನಗರ,ಡಿ.೨: ಆದರ್ಶ ಸಂಸ್ಕೃತಿಯ ಸರಳ ನಿರೂಪಣೆ. ಸ್ವಚ್ಛಂದ ಮಾನವೀಯ ಮೌಲ್ಯ ಬಿತ್ತಿ ಬೆಳಕು ಚೆಲ್ಲಿದ ವಚನಕಾರರು ಮಾನವನಿಗೆ ದಟ್ಟ ಅನುಭವ ನೀಡಿದ್ದಾರೆ. ಗಂಭೀರ ಸಂವಾದವೂ ಸೇರಿ ವಿಶಾಲ ತಾತ್ವಿಕ ಚಿಂತನೆ ನೀಡಿದ ಅವರ ಹಾದಿ ಮನುಕುಲಕ್ಕೆ ಸದಾ ಪ್ರೇರಣಾದಾಯಕ ಎಂದು ರಾಜಗೀರಾದ ಪ್ರಭುಲಿಂಗ ಸ್ವಾಮೀಜಿ ಹೇಳಿದರು.
ಮುಧೋಳ(ಬಿ) ಗ್ರಾಮದಲ್ಲಿ ಈಚೆಗೆ ನಡೆದ ೨೦೧ನೇ ಶರಣ ಸಂಗಮ ಪ್ರಯುಕ್ತ ನಡೆದ ವಚನ ಪ್ರವಚನ ಮತ್ತು ಬಸವನೀಲಗಂಗಾ ಪ್ರಶಸ್ತಿ ಪುರಸ್ಕೃತ ಹಿನ್ನಲೆ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಸಾನಿಧ್ಯ ವಹಿಸಿ ಮಾತನಾಡಿದರು.
ಕಾಯಕ ಸಂಸ್ಕೃತಿಯ ಪ್ರತಿನಿಧಿಗಳಾಗಿ ಇಡೀ ನಾಡಿನ ತುಂಬ ಪ್ರಗತಿಪರ ಹೆಜ್ಜೆ ಗುರುತು ಮೂಡಿಸಿದ ಶರಣರ ನಡೆ-ನುಡಿಗಳು ಈ ದೇಶದ ಸಾಂಸ್ಕೃತಿಕ, ಸಾಹಿತ್ಯಕ ಇತಿಹಾಸಕ್ಕೆ ದೊಡ್ಡ ಕೊಡುಗೆ ಎಂದರು.
ಔರಾದ್ ಏಕತಾ ಫೌಂಡೇಷನ್ ಟ್ರಸ್ಟ್ನ ಅಧ್ಯಕ್ಷ ರವೀಂದ್ರ ಸ್ವಾಮಿ ಹಾಲಹಳ್ಳಿಕರ್ ಉದ್ಘಾಟಿಸಿ ಮಾತನಾಡಿ, ಶರಣರ ಸಂದೇಶಗಳನ್ನು ಮನೆ ಮನೆಗೆ ತಲುಪಿಸುವ ಕ್ರೀಯಾಶೀಲ ಸಂಘಟನೆ. ಈ ಮೂಲಕ ಮಕ್ಕಳು, ಯುವಕರು ಮನಸ್ಸಿನಲ್ಲಿ ಸರಳ ಸಾತ್ವಿಕ ಜೀವನದ ಸಂದೇಶ ಪಸರಿಸುತ್ತಿದೆ ಎಂದರು.
ಮಾಧವರಾವ ಪಾಟೀಲ ಅಧ್ಯಕ್ಷತೆ ವಹಿಸಿದರು. ಮುಖ್ಯಶಿಕ್ಷಕ ಸೂರ್ಯಕಾಂತ ಸಿಂಗೆ, ಪ್ರಕಾಶ ದೇಶಮುಖ, ಸುರೇಖಾ ಮಲ್ಲಾಪುರ, ಸಚಿಜೀವಕುಮಾರ ಜುಮ್ಮಾ, ನಾಗಯ್ಯ ಸ್ವಾಮಿ, ಮುನ್ನಕ್ಕಾ, ಮಲ್ಲಮ್ಮಾ, ನೀಲಮ್ಮಾ ಬೆಂಬುಳಗೆ, ರಾಜಶೇಖರ ಅಜ್ಜ, ಗುರುನಾಥ ವಟಗೆ, ಹಾವಗಿರಾವ ವಟಗೆ ಇದ್ದರು,
ಶಿವಲೀಲಾ ಕುಂಬಾರ ವಚನ ನೃತ್ಯ ಪ್ರಸ್ತೂತ್ ಪಡಿಸಿದರು. ಹೌಗಿರಾವ ಶೆಂಬೆಳ್ಳಿ ವಚನಗಾಯನ ನಡೆಸಿಕೊಟ್ಟರು.
ನಾಗನಾಥ ಶಂಕರ ನಿರೂಪಿಸಿದರು. ನಾಗನಾಥ ಸ್ವಾಮಿ ಸ್ವಾಗತಿಸಿದರು. ಬಸವರಾಜ ಒಂಟೆ ವಂದಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಶರಣ-ಶರಣೆಯರು ಹಾಗೂ ಮಕ್ಕಳಿಗೆಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.