
ಕೋಲಾರ,ಫೆ,೧- ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಮೀಪದ ವಾಲ್ಮೀಕಿ ವೃತ್ತದಲ್ಲಿ ಹಿಂದೂ ಸಮಾಜೋತ್ಸವದ ಶೋಭಾ ಯಾತ್ರೆಗೆ ಚಾಲನೆ ನೀಡಲಾಯಿತು. ನಗರದ ವಿವಿಧ ವೃತ್ತಗಳು ಕೇಸರಿಮಯವಾಗಿ ಹಬ್ಬದ ವಾತವರಣ ಕಂಡು ಬಂದಿತು. ಸಾವಿರಾರು ಮಂದಿಯ ಜನಸಾಗರವು ಯಾತ್ರಗೆ ಜಿಲ್ಲೆಯ ವಿವಿಧ ತಾಲ್ಲೂಕುಗಳು, ಗ್ರಾಮದಿಂದ ಹರಿದು ಬಂದಿತು.
ಹಿಂದೂ ಸಮಾಜೋತ್ಸವದ ಪ್ರಯುಕ್ತ ಕೋಲಾರ ನಗರದ ಪ್ರಮುಖ ರಸ್ತೆಗಳು ಸಮಾಜೋತ್ಸವದ ಶೋಭ ಯಾತ್ರಗೆ ಸ್ವಾಗತದ ಕಮಾನುಗಳು, ಕೇಸರಿ ತೋರಣಗಳು, ಕೇಸರಿ ಬ್ಯಾನರ್ ಫ್ಲೀಕ್ಸಿಗಳು ಅಳವಡಿಸುವ ಮೂಲಕ ಕೇಸರಿ ಬಣ್ಣವೇ ಎಲ್ಲೆಡೆ ರಾರಾಜಿಸುವ ಮೂಲಕ ನಗರದ ವಾತವರಣವೇ ಬದಲಾಗಿತ್ತು.
ಪತ್ರಿಯೊರ್ವ ಹಿಂದು ಪರ ಸಂಘಟನೆಗಳ ಯುವಕರು ಕೇಸರಿ ಶಾಲು, ಟವಲ್. ಮುಖಂಡರು ಹಾಗೂ ನಾಯಕರುಗಳು ಕೇಸರಿಯ ಪೇಟಾ ಮತ್ತು ಮಹಿಳೆಯರು ಕೇಸರಿ ಬಣ್ಣದ ಸೀರೆಯನ್ನು ಧರಿಸಿ ಪೂರ್ಣಕುಂಭದ ಕಳಸದೊಂದಿಗೆ ಶೋಭಾಯಾತ್ರಯ ಮುಂಭಾಗ ಮೂಲಕ ನಗರದ ಅಧಿದೇವತೆ ಕೋಲಾರಮ್ಮ ವಿಗ್ರಹ ಸೇರಿದಂತೆ ವಿವಿಧ ದೇವರ ಮೂರ್ತಿಗಳನ್ನು ಹೊತ್ತ ಪಲ್ಲಕ್ಕಿಗಳು, ಶ್ರೀ ಚಾಮುಂಡೇಶ್ವರಿಯ ಭಾವ ಚಿತ್ರವನ್ನು ಹೊತ್ತ ಎತ್ತಿನ ಬಂಡಿಯೊಂದಿಗೆ , ಆಯೋಧ್ಯೆಯ ಶ್ರೀರಾಮ ಮಂದಿರ ಕಲಾಕೃತಿಯ ಪ್ರದರ್ಶನವು ಮೆರೆವಣಿಗೆಯಲ್ಲಿ ಎಲ್ಲರ ಗಮನ ಸೆಳೆಯಿತು.

ಪುಠಾಣಿ ಮಕ್ಕಳು ಕೋಲಾಟದ ನೃತ್ಯ ಪ್ರದರ್ಶನ ನೀಡಿದರೆ ಯುವಕ ದಂಡು ಕೇಸರಿ ಬಾವುಟಗಳನ್ನು ಬೀಸುವ ಮೂಲಕ ಕುಣಿಯುತ್ತಿದ್ದರು. ಚಂಡೇ ವಾದ್ಯ, ನಾದ ಸ್ವರ ಗಾರುಡಿ ಗೊಂಬೆಗಳ ಕಲಾ ತಂಡಗಳು ಡೊಳ್ಳು ಕುಣಿತ, ಕರಡಿ ಕುಣಿತ ಮುಂತಾದ ಕಲಾ ತಂಡಗಳ ಪ್ರಕಾರಗಳು ಮೆರವಣಿಗೆಯಲ್ಲಿ ಸಾರ್ವಜನಿಕರನ್ನು ಆಕರ್ಷಿಸಿದವು, ನಗರದ ಜೂನಿಯರ್ ಕಾಲೇಜಿನಿಂದ ಮೆಕ್ಕೆ ವೃತ್ತ, ಎಂ.ಬಿ. ರಸ್ತೆ, ಅಮ್ಮವಾರಿ ಪೇಟೆ ವೃತ್ತ ಮೂಲಕ ಕಾಳಮ್ಮ ಗುಡಿ ರಸ್ತೆ.ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಶಾರದ ಟಾಕೀಸ್, ದೊಡ್ಡ ಪೇಟೆ., ಚಂಪಕ್ ವೃತ್ತ. ಎಂ.ಜಿ.ರಸ್ತೆ, ಡೊಮ್ ಲೈಟ್ ಸರ್ಕಲ್ ಬಂಗಾರ ಪೇಟೆ ವೃತ್ತ, ಇ.ಟಿ.ಸಿ.ಎಂ. ಸರ್ಕಲ್ ಮೂಲಕ ಸರ್ಕಾರಿ ಜೂನಿರ್ ಕಾಲೇಜಿ ಮೈದಾನಕ್ಕೆ ವಾಪಸ್ಸಾಗುವ ಶೋಭಾಯಾತ್ರೆಯನ್ನು ಅಂತ್ಯ ಗೊಳಿಸಲಾಯಿತು.
ನಗರದಲ್ಲಿ ಬಹುತೇಕ ಖಾಸಗಿ ಶಾಲೆಗಳು ರಜೆ ಘೋಷಿಸಿದ್ದವು. ಹಿಂದೂ ವ್ಯಾಪಾರಿಗಳು ಅಂಗಡಿ ಮುಂಗಟ್ಟುಗಳ ಬಾಗಿಲನ್ನು ಹಾಕುವ ಮಧ್ಯಾಹ್ನ ನಂತರ ಶೋಭಾ ಯಾತ್ರೆಯಲ್ಲಿ ಪಾಲ್ಗುಂಡಿದ್ದರು. ವಿವಿಧ ಹಿಂದು ಪರ ಸಂಘಟನೆಗಳಾದ ವಿ.ಹೆಚ್.ಪಿ. ಆರ್.ಎಸ್.ಎಸ್. ಬಜರಂಗದಳ, ಶ್ರೀರಾಮ ಸೇನೆ. ಎ.ಬಿ.ವಿ.ಪಿ. ವಿದ್ಯಾರ್ಧಿಗಳ ಸಂಘಟನೆಗಳು ಸೇರಿದಂತೆ ಮಹಿಳಾ ಸಂಘಟನೆಗಳು, ಹಿಂದೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಮೆರವಣಿಯ ಉದ್ದಕ್ಕೂ ಹಿಂದೂ ಪರ ಘೋಷಣೆಗಳನ್ನು ಕೊಗುತ್ತಿದ್ದರು.
ಮೆರವಣಿಗೆಯಲ್ಲಿ ಹಿಂದೂ ಸಮಾಜೋತ್ಸವ ಸಮಿತಿ ಅಧ್ಯಕ್ಷ ಬಿ.ಎಸ್.ವೆಂಕಟೇಶ್, ಮಾಜಿ ಸಂಸದ ಎಸ್.ಮುನಿಸ್ವಾಮಿ, ಮಾಜಿ ಸಚಿವ ವರ್ತೂರ್ ಪ್ರಕಾಶ, ಡಾ, ಶಂಕರ್ ನಾಯಕ್, ಡಾ.ಜನಾರ್ಧನ್, ಡಾ. ವಂದನ ಕೃಷ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ, ಸಮಾಜೋತ್ಸವ ಸಮಿತಿ ಪದಾಧಿಕಾರಿಗಳಾದ ವೆಂಕಟಚಲಪತಿ, ಎಸ್.ಕೆ.ಚಂದ್ರಶೇಖರ್, ಎಂ.ಜಿ. ಮಂಜುಳ ಕೃಷ್ಣಪ್ಪ ಎ. ಉದಯ್ ಕುಮಾರ್ ಹೆಚ್. ಪ್ರಭು ಎಂ.ಎನ್. ನಂದೀಶ್, ಶಿವಕುಮಾರ್. ಮುನಿಚನ್ನಪ್ಪ, ರವಿ.ಕೆ.ಆರ್. ಟಿ.ಚಂದ್ರಪ್ಪ ಶಂಕರ್ ಭರತ್ ಭೋಷಣ್ ಮುರಳೀಧರ್, ಗುಣಶೇಖರ್, ಬೆಳ್ಳೂರು ಮಂಜುನಾಥ್, ಕಲ್ವಮಂಜಲಿ ರಾಮಚಂದ್ರ ಎಂ.ಎನ್. ನಾರಾಯಣಸ್ವಾಮಿ, ಸರ್ವೋದಯ. ಪಿ.ಚಂದ್ರ ಪ್ರಕಾಶ್, ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ನಗರದಲ್ಲಿ ಹಿಂದೂ ಸಮಾಜೋತ್ಸವ ಬೈಕ್ ರ್‍ಯಾಲಿ, ಶೋಭಾ ಯಾತ್ರೆ, ಸಮಾವೇಶಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕನ್ನಿಕಾ ಸುಕ್ರಿತ್ ಮಾರ್ಗದರ್ಶನದಲ್ಲಿ ಎ.ಎಸ್.ಪಿ. ಶಿವಶಂಕರ್, ಜಗದೀಶ್ ಮತ್ತು ಡಿ.ವೈ.ಎಸ್.ಪಿ. ಹೆಚ್.ಎಂ. ನಾಗ್ತೆ ನೇತ್ರತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ಆಯೋಜಿಸುವ ಮೂಲಕ ನಗರದಲ್ಲಿ ಯಾವೂದೇ ಗಲಭೆಗಳಿಗೆ ಅವಕಾಶ ಇಲ್ಲದಂತೆ ಶಾಂತಿಯುತವಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.



























