
ಶಿಡ್ಲಘಟ್ಟ:-ಫೆ,೨೧- ಸೂರಿಲ್ಲದ ಬಡ ಕುಟುಂಬಕ್ಕೆ ಮನೆ ನಿರ್ಮಾಣ ಸಾಮಾಗ್ರಿಗಳನ್ನು ನೀಡುವ ವಿಶೇಷ ಕಾರ್ಯಕ್ರಮವನ್ನು ಶನಿವಾರ ೨೧ ರಂದು ತಾಲ್ಲೂಕಿನ ಅಬ್ಲೂಡು ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾನವ ಹಕ್ಕುಗಳ ಕಮಿಟಿ ಸಂಸ್ಥಾಪಕ ಅಧ್ಯಕ್ಷ ಚೀಮನಹಳ್ಳಿ ಸಿ.ಎಂ.ಬೈರೇಗೌಡ ತಿಳಿಸಿದರು.
ದಿನಾಂಕ ೨೧ ರಂದು ಸಾಂಕೇತಿಕವಾಗಿ ಹತ್ತು ಪಲಾನುಭವಿಗಳಿಗೆ ಮನೆ ನಿರ್ಮಾಣ ವಸ್ತುಗಳನ್ನು ನೀಡುವ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಜಿ.ಪ್ರಭು, ಸಿಇಒ ವೈ.ನವೀನ್ ಭಟ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆಯವರು ಚಾಲನೆ ನೀಡುವರು.
ಅನೇಕ ವರ್ಷಗಳಿಂದ ಬಡವರ ಪರ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನತೆಯ ಪರ ನಿಂತು ರಾಜ್ಯಾದಂತ ಸಂಘಟಿತರಾಗಿ ಕೆಲಸ ಮಾಡುತ್ತಿದ್ದು ಗ್ರಾಮಗಳಿಗೆ ಬೇಟಿ ನೀಡಿದ ಸಂದರ್ಶನದಲ್ಲಿ ಕೆಲವು ಗ್ರಾಮಗಳಲ್ಲಿ ಗುಡಿಸಲು ಮನೆಗಳಲ್ಲಿ ವಾಸ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ಬಂದಿದ್ದೇನೆ.
ಇಂದಿನ ದಿನಗಳಲ್ಲಿ ಬಡವನ ಬದುಕು ತುಂಬಾ ದುಸ್ಥರವಾಗಿದ್ದು ಸಣ್ಣ ವಯಸ್ಸಿನಲ್ಲಿ ನಾನು ಬೆಳೆದು ಬಂದ ಕಷ್ಟದ ದಿನಗಳು ನೆನಪಿಗೆ ಬಂದಿದೆ. ಯಾವುದೇ ರಾಜಕೀಯ ಉದ್ದೇಶ ಇಲ್ಲದೆ ಬಡವರಿಗಾಗಿ ಮನೆ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದು ಬಡವರ ಪರವಾಗಿ ದುಡಿಯುವ ಕೆಲಸಕ್ಕೆ ಮುಂದಾಗಿದ್ದೇನೆ.
ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಹ ಬಡವರಿಗೆ ಯಾವುದೇ ತೋಂದರೆ ನೀಡದೆ ಸರ್ಕಾರಿ ಇಲಾಖೆಗಳು ಅಲೆದಾಡಲು ಅವಕಾಶ ನೀಡದೆ ತ್ವರಿತವಾಗಿ ಕೆಲಸ ಕಾರ್ಯಗಳು ಮಾಡಲು ಮನವಿ ಮಾಡಿದರು.
ಚಿಕ್ಕಬಳ್ಳಾಪುರ ಜಿಲ್ಲಾದ್ಯಂತ ಬರುವ ಪ್ರತಿ ಗ್ರಾಮದಲ್ಲಿ ಮನೆ ಇಲ್ಲದ ಬಡ ಕುಟುಂಬವನ್ನು ಗುರುತಿಸಿ ಅವರಿಗೆ ಎಂಸೆಂಡ್, ಇಟ್ಟಿಗೆ, ಶೀಟ್, ಕಂಬಿ, ಬಾಗಿಲು, ಕಿಟಕಿಗಳು ನೀಡುವ ಮೂಲಕ ಜಿಲ್ಲಾದ್ಯಂತ ಹತ್ತು ಸಾವಿರ ಮನೆಗಳ ನಿರ್ಮಾಣ ಮಾಡಲು ಅಂದಾಜಿಸಲಾಗಿದ್ದು ಶನಿವಾರ ಸಾಂಕೇತಿಕವಾಗಿ ಹತ್ತು ಪಲಾನುಭವಿಗಳಿಗೆ ನೀಡುವ ಮೂಲಕ ಬಡ ಕುಟುಂಬಕ್ಕೆ ಆಸರೆಯಾಗಲು ಮುಂದಾಗಿದ್ದೇನೆ ಎಂದರು.






























