Home ಜಿಲ್ಲೆ ಬೆಂಗಳೂರು ನಗರದ ಕಠಾರಿಪಾಳ್ಯದಲ್ಲಿ ಗಮನಸೆಳೆದ ಹೂವಿನ ಕರಗ

ನಗರದ ಕಠಾರಿಪಾಳ್ಯದಲ್ಲಿ ಗಮನಸೆಳೆದ ಹೂವಿನ ಕರಗ

ಕೋಲಾರ,ಏ,೩- ನಗರದ ಕಠಾರಿಪಾಳ್ಯದ ಶ್ರೀ ದ್ರೌಪದಮ್ಮ ಧರ್ಮರಾಯಸ್ವಾಮಿ ಕರಗ ಮಹೋತ್ಸವ ಸಮಿತಿ ನೇತ್ರತ್ವದಲ್ಲಿ ಆಯೋಜಿಸಿದ್ದ ಹೂವಿನ ಕರಗವು ಅಪಾರ ಜನಸ್ತೋಮದ ಹಷೋದ್ದಾರಗಳ ನಡುವೆ ವಿಜೃಂಭಣೆಯಿಂದ ನೆರವೇರಿತು.


ಹೂವಿನ ಕರಗವನ್ನು ಬೇತಮಂಗಲದ ಕರಗದ ಪೂಜಾರಿ ನಾಗರಾಜ್ ಅವರ ಪುತ್ರ ಕೃಷ್ಣಮೂರ್ತಿ ಈ ಭಾರಿಯ ಕರಗವನ್ನು ಗುರುವಾರ ರಾತ್ರಿ ೮ ಗಂಟೆಗೆ ಹೊತ್ತು ಅದ್ಬುತವಾದ ವಿವಿಧ ಭಂಗಿಯಲ್ಲಿ ನೃತ್ಯ ಪ್ರದರ್ಶಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.


ಮೊದಲು ಶ್ರೀದೌಪದಮ್ಮ ಧರ್ಮರಾಯಸ್ವಾಮಿ ದೇವಾಲಯದಿಂದ ಪೂಜೆ, ಸಂಪ್ರಾದಗಳ ಪ್ರಕಾರ ಹೂವಿನ ಕರಗಕ್ಕೆ ಭಕ್ತಿಯಿಂದ ನಮನ ಸಲ್ಲಿಸಿದ ಪೂಜಾರಿ ಕೃಷ್ಣಮೂರ್ತಿಯವರು ದೇವಾಲದ ಮುಂಭಾಗ ಪ್ರತಿವರ್ಷದಂತೆ ಈ ವರ್ಷವು ಸಿದ್ದಪಡೆಸಿದ್ದ ವೇದಿಕೆಯಲ್ಲಿ ತಮಟೆ ಹಲಗೆಯ ಸದ್ದಿಗೆ ತಕ್ಕಂತೆ ಹೆಜ್ಜೆ ಹಾಕಿ ಐತಿಹಾಸಿಕ ದಾಖಲೆಯ ನೃತ್ಯ ಪ್ರದರ್ಶಿಸಿ ಸಾರ್ವಜನಿಕರ ಮನರಂಜಿಸುವಲ್ಲಿ ಯಶಸ್ವಿಯಾದರು.


ಕರಗದ ಪೂಜಾರಿಯು ತಮಟೆಯ ತಾಳಕ್ಕೆ ಹೆಜ್ಜೆ ಹಾಕಿ ನೃತ್ಯದ ಪ್ರದರ್ಶನ ನೀಡುತ್ತಿದ್ದರೆ ಕತ್ತಿ ಹಿಡಿದ ವೀರ ಕುಮಾರರು ಗೋವಿಂದಾ,,,ಗೋವಿಂದಾ ಎಂಬ ಉದ್ಗಾರಗಳ ನಡುವೆ ಕರಗದ ನೃತ್ಯಕ್ಕೆ ಕಿಕ್ಕಿರಿದ ಸಾವಿರಾರು ಸಂಖ್ಯೆಯ ಜನಸ್ತೋi ಹರ್ಷದಿಂದ ಶಿಳ್ಳೆ, ಚಪ್ಪಾಳೆಯ ಕರಡಾತನದೊಂದಿಗೆ ಜೈಕಾರ ಮೊಳಗಿಸುತ್ತಿದ್ದದ್ದು ಮುಗಿಲು ಮುಟ್ಟುವಂತಿತ್ತು.


ನಂತರದಲ್ಲಿ ಕಠಾರಿಪಾಳ್ಯದಿಂದ ಡೊಮ್ ಲೈಟ್ ಸರ್ಕಲ್, ಧರ್ಮರಾಯ ವೃತ್ತ ಬಡಾವಣೆ, ಕಠಾರಿಪಾಳ್ಯ ಶಾಲಾ ಅವರಣದಲ್ಲಿ ವೇದಿಕೆಯಲ್ಲಿ ಕರಗದ ನೃತ್ಯ ಪ್ರದರ್ಶನ ನೀಡುವ ಮೂಲಕ ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಮನೆ ಮನೆಯಲ್ಲಿ ಪೂಜೆಗಳನ್ನು ಸ್ವೀಕರಿಸಿತು.


ಕರಗದ ಮಹೋತ್ಸವದಲ್ಲಿ ಯಾವೂದೇ ರೀತಿ ಅಹಿತಕರ ಘಟನೆಗಳಿಗೆ ಅವಕಾಶ ಇಲ್ಲದಂತೆ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿತ್ತು.

.