ರಾಜಕಾರಣಿ ಎಂದರೆ ಜನಸೇವಕ:ಜನಾನುರಾಗಿ ರಾಜಕಾರಣಿ ಎಂಎಲ್ ಸಿ ಇದ್ರೀಸ್ ನಾಯಿಕವಾಡಿ : ಶಿವಬಸವ ಸ್ವಾಮೀಜಿ

ಅಥಣಿ/ಮೀರಜ್ : ಜ.24:ಮಹಾರಾಷ್ಟ್ರದ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಇದ್ರೀಸ್ ನಾಯಿಕವಾಡಿ ಅವರು ಪ್ರಾಮಾಣಿಕತೆ, ನೇರ ನಡೆ-ನುಡಿ, ದಕ್ಷ ಆಡಳಿತ, ಮತ್ತು ಜನಪರ ಕಾಳಜಿಯಿಂದಾಗಿ ಜಾತಿ ಧರ್ಮ ಮತ ಪಂಥಗಳನ್ನು ಮೀರಿ ಜನಪ್ರಿಯತೆ ಗಳಿಸಿ ಜನನಾಯಕರಾಗಿದ್ದಾರೆ. ತಮ್ಮ ಜನಾನುರಾಗಿ ವ್ಯಕ್ತಿತ್ವದಿಂದ ಕ್ಷೇತ್ರದ ಜನರ ಹೃದಯ ಗೆದ್ದಿದ್ದಾರೆ. ಎಂದು ಗಚ್ಚಿನ ಮಠದ ಶಿವಬಸವ ಸ್ವಾಮೀಜಿ ಹೇಳಿದರು.
ಅವರು ಪಕ್ಕದ ಗಡಿಭಾಗದ ಮಹಾರಾಷ್ಟ್ರದ ರಾಜ್ಯದ ಮಿರಜ ನಗರದಲ್ಲಿರುವ ನಾಯಿಕವಾಡಿ ನಿವಾಸದಲ್ಲಿ ಇತ್ತೀಚಿಗೆ ಮಿರಜ-ಸಾಂಗಲಿ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ವಿಧಾನ ಪರಿಷತ್ ಸದಸ್ಯ ಇದ್ರೀಸ್ ನಾಯಿಕವಾಡಿಯವರ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಿರುವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು.
ರಾಜಕೀಯ ಎಂದರೆ ಕೇವಲ ಅಧಿಕಾರಕ್ಕಷ್ಟೇ ಸೀಮಿತವಾಗಿರದೆ ಸಮಾಜಸೇವೆ ಮತ್ತು ಭಾವೈಕ್ಯತೆ ಹಾಗೂ ಸೌಹಾರ್ದತೆಯ ವೇದಿಕೆಯಾಗಬೇಕು ಎಂಬುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿಯಾಗಿದೆ. ನಾಯಿಕವಾಡಿ ಕುಟುಂಬವು ಜಾತಿ-ಮತ-ಧರ್ಮದ ಭೇದವಿಲ್ಲದೆ ಜನಪರವಾಗಿ ಎಲ್ಲ ಸಮಾಜದ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸ್ಪಂದಿಸುವ ಇವರ ಮಾನವೀಯ ಗುಣ ಶ್ಲಾಘನೀಯ. ಇವರ ಜನಸೇವೆಯು ಇನ್ನು ಉತ್ತರೋತ್ತರವಾಗಿ ಬೆಳೆಯಲಿ,” ಎಂದು ಶುಭ ಹಾರೈಸಿದರು.
ಆನಂತರ ಸತ್ಕಾರ ಸ್ವೀಕರಿಸಿದ ವಿಧಾನ ಪರಿಷತ್ ಸದಸ್ಯ ಇದ್ರೀಸ್ ನಾಯಿಕವಾಡಿ ಮಾತನಾಡಿ ನಾನು ಸಮಾಜ ಸೇವೆಯ ಮೂಲಕ ರಾಜಕೀಯಕ್ಕೆ ಬಂದವನು. ಅಂದಿನಿಂದ ಇಂದಿನವರೆಗೆ ಪ್ರತಿಯೊಂದು ಸಮುದಾಯದ ಜನರು ಜಾತ್ಯಾತೀತವಾಗಿ ನನ್ನನ್ನು ಬೆಂಬಲಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಲಿಂಗಾಯತ ಸಮಾಜ ಪಾತ್ರ ಬಹಳ ದೊಡ್ಡದು. ನನ್ನ ಪೂರ್ವ ಜನ್ಮದ ಯಾವ ಋಣಾನುಬಂಧವೂ ಗೋತ್ತಿಲ್ಲ. ಯಾವತ್ತೂ ನನ್ನನ್ನು ಬೆಂಬಲಿಸಿದೆ. ಲಿಂಗಾಯತ ಸಮಾಜದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತೇನೆ. ಬಸವೇಶ್ವರ ಪ್ರತಿಮೆ ಅನಾವರಣದ ಜಾಗ ಅಭಿವೃದ್ಧಿ ಹಾಗೂ ಮಲ್ಲಿಕಾರ್ಜುನ ದೇವಸ್ಥಾನದ ಅಭಿವೃದ್ಧಿಗೆ ಅನುದಾನ ನೀಡಿದ್ದು. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ತಂದು ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಅಭಿವೃದ್ಧಿಯ ವಿಷಯದಲ್ಲಿ ಯಾವುದೇ ಭೇದಭಾವ ಮಾಡದೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವುದೇ ನನ್ನ ಗುರಿ. ಜನರು ನನ್ನ ಮೇಲೆ ಇಟ್ಟಿರುವ ನಂಬಿಕೆ ವಿಶ್ವಾಸ ಹಾಗೂ ಪ್ರೀತಿಯ
ಋಣವನ್ನು ತೀರಿಸಲು ನನ್ನ ಜೀವನದುದ್ದಕ್ಕೂ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನನ್ನ ಜೊತೆ ನನಗೆ ಬೆನ್ನೆಲುಬಾಗಿ ನಿಂತಿರುವ ಪ್ರತಿಯೊಬ್ಬ ಕಾರ್ಯಕರ್ತನೂ. ಅಭಿಮಾನಿಯೂ ಉನ್ನತ ಮಟ್ಟಕ್ಕೆ ಬೆಳೆಯಬೇಕು ಎಂಬುದು ನನ್ನ ಆಶಯವಾಗಿದೆ ಎಂದು ಹೇಳಿದರು.
ನಂತರ ಬೆಳ್ಳಂಕ್ಕಿ ಮಠದ ಶ್ರೀ ಶಿವಾಚಾರ್ಯ ಸ್ವಾಮೀಜಿ ಅವರು ಆಶೀರ್ವಚನ ನೀಡಿ ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಪಕ್ಷದ ಭೇದ ಮರೆತು ಹಲವು ಮುಖಂಡರು ಭಾಗವಹಿಸಿದ್ದು ವಿಶೇಷವಾಗಿತ್ತು. ರಾಷ್ಟ್ರವಾದಿ ಪಾರ್ಟಿಯ ಅಥರ್ ಇದ್ರೀಸ್ ನಾಯಿಕವಾಡಿ, ಪ್ರಮುಖರಾದ ರೇಖಾ ವಿವೇಕ ಕಾಂಬಳೆ. ಶ್ವೇತಪದ್ಮ ಕಾಂಬಳೆ. ಅಶ್ವಿನಿ ವಿನೋದ್ ಕೋಳಿ ಸೇರಿದಂತೆ ಕಾಂಗ್ರೆಸ್‍ನ ಸಂಜಯ್ ಮೆಂಡೆ, ಬಬಿತಾ ಮೆಂಡೆ, ಬಿಜೆಪಿಯ ಗಣೇಶ ಮಾಳಿ, ಈಶ್ವರ ಜನವಾಡೆ ಉಪಸ್ಥಿತರಿದ್ದರು.
ಜೊತೆಗೆ ರಾಮಗೊಂಡ ಕೇಸರಖಾನೆ, ನಿಶಕಾಂತ ಪಾಟೀಲ್, ಸಚಿನ ಕೇರಿಪಾಳೆ, ಪ್ರದೀಪ ಕೇರಿಪಾಳೆ, ಶ್ರೀಕಾಂತ ಪವಾರ, ರಿಯಾಜ ಸನದಿ, ಪ್ರಮೋದ ಬೀಳ್ಳೂರ, ನವೀದ ಖಾಜಿ, ಇರ್ಷಾದ ಮನಗೂಳಿ, ಅಬ್ದುಲ ಅಜೀಜ್ ಮುಲ್ಲಾ, ಶಮ್ಮು ಕರೋಲಿ ಹಾಗೂ ನಗರ ಪಾಲಿಕೆಯ ಅನೇಕ ಸದಸ್ಯರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.