
ಜೇವರ್ಗಿ,ಫೆ.23-ತಾಲೂಕಿನ ಆಂದೋಲಾ ಗ್ರಾಮದ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ನಿರ್ಮಿಸಲಾಗಿರುವ ಶಿಕ್ಷಕರ ವಸತಿ ಗೃಹ ಉದ್ಘಾಟನೆಯಾಗದೆ ಮತ್ತು ನಿರ್ವಹಣೆ ಕೊರತೆಯಿಂದ ಅನೈತಿಕ ಚಟುವಟಿಕೆಯ ತಾಣವಾಗಿದೆ ಎಂದು ದಲಿತ ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಗೋಲಾ ತಿಳಿಸಿದ್ದಾರೆ.
ಅತಿ ದೊಡ್ಡ ಪ್ರಮಾಣದ 8 ಕೊಠಡಿಗಳು ಇರುವ ವಸತಿ ಗೃಹವನ್ನು 2018-19 ರಲ್ಲಿ ನಿರ್ಮಾಣ ಮಾಡಲಾಗಿದೆ, ಕಟ್ಟಡವು ಉದ್ಘಾಟನೆ ಇಲ್ಲದೆ ಹಾಳು ಬಿದ್ದಿದೆ. ಸುಮಾರು 90 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಕಟ್ಟಡ ನಿರ್ಮಿಸಲಾಗಿದೆ. ವಸತಿ ಗೃಹದ ಕಿಟಕಿ, ಬಾಗಿಲುಗಳು, ಮೇಲ್ಛಾವಣಿ ಕುಸಿಯುವ ಹಂತದಲ್ಲಿವೆ, ಬಳಕೆಯಾಗದ ಕಾರಣಕ್ಕೆ ಬೀಳುವ ಸ್ಥಿತಿಯಲ್ಲಿದೆ, ಈ ವಿಷಯವನ್ನು ಶಾಸಕರಾದ ಡಾ. ಅಜೇಯ್ ಸಿಂಗ್ ಅವರ ಗಮನಕ್ಕೆ ತಂದರೂ ಪ್ರಯೋಜನೆಯಾಗಿಲ್ಲ, ಶಿಕ್ಷಕರ ವಸತಿ ಗೃಹಕ್ಕೆ ವಿದ್ಯುತ್ ಸಂಪರ್ಕ ಇಲ್ಲ,ಅಕ್ಕ ಪಕ್ಕದಲ್ಲಿ ಗಿಡ ಗಂಟೆಗಳು ಬೆಳೆದು ನಿಂತಿದೆ, ದಿನ ನಿತ್ಯ ಈ ಸ್ಥಳದಲ್ಲಿ ಹಂದಿ, ಜಾನುವಾರುಗಳು ತಿರುಗಾಡುತ್ತಿರುವುದರಿಂದ ಶಾಲಾ ಮಕ್ಕಳು ದಿನ ನಿತ್ಯ ತೊಂದರೆ ಅನುಭವಿಸುವಂತಾಗಿದೆ, ಕತ್ತಲಾಗುತ್ತಿದ್ದಂತೆ ಇಲ್ಲಿ ಕುಡುಕರ ದಂಡೆ ಸೇರುತ್ತದೆ, ಇಸ್ಪೀಟ್ ಆಡುವುದು ಇನ್ನಿತರ ಅನೈತಿಕ ಚಟುವಟಿಕೆಗಳು ನಡೆಯುತ್ತವೆ, ಇದರಿಂದ ವಿದ್ಯಾರ್ಥಿಗಳು ಶಿಕ್ಷಕರಿಗೂ ತುಂಬಾ ತೊಂದರೆಯಾಗುತ್ತಿದೆ, ಸರ್ಕಾರದ ಹಣ ಅನಾವಶ್ಯಕವಾಗಿ ಪೆÇೀಲಾಗುತ್ತಿದೆ. ಈಗಾದರೂ ಎಚ್ಚೆತ್ತುಕೊಂಡು ಶಾಸಕರು ಈ ಕಟ್ಠಡ ನವೀಕರಣಕ್ಕಾಗಿ ಕೆ.ಕೆ.ಆರ್.ಡಿ.ಬಿ.ಅನುದಾನದಲ್ಲಿ ಹೆಚ್ಚುವರಿಯಾಗಿ ಹಣ ಮೀಸಲಿಟ್ಟು ನವೀಕರಣಗೊಳಿಸಿ, ಉದ್ಘಾಟನೆ ಮಾಡಿ ಶಿಕ್ಷಕರ ಅನುಕೂಲಕ್ಕೆ ಬಳಕೆಯಾಗುವಂತೆ ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ. ಇಲ್ಲದಿದ್ದಲ್ಲಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು, ಗ್ರಾಮಸ್ಥರಿಂದ ತಾಲೂಕು ಆಡಳಿತ ಕಚೇರಿ, ಹಾಗೂ ಶಾಸಕರ ಕಚೇರಿ ಮುಂದೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.



























