ವೃಕ್ಷಮಾತೆ ತಿಮ್ಮಕ್ಕನಿಗೆ ನುಡಿನಮನ

ಕಮಲನಗರ: ನ.17:ವೃಕ್ಷಮಾತೆ ಸಾಲುಮರದ ತಿಮ್ಮಕ್ಕ(30 ಜೂನ್ 1911-14ನವೆಂಬರ್2025) ಇವರು ಕರ್ನಾಟಕದಲ್ಲಿ ಜನಿಸಿ ನೆಲೆಸಿರುವ ಒಬ್ಬ ಭಾರತೀಯ ಪರಿಸರವಾದಿ ಎಂದು ಖ್ಯಾತಿ ಪಡೆದಿದ್ದಾರೆ ಎಂದು ಮುಖ್ಯಶಿಕ್ಷಕ ಮನೋಜಕುಮಾರ ಹಿರೇಮಠ ಹೇಳಿದರು.

ಪಟ್ಟಣದ ಭಾಗಿರಥಿ ಪಬ್ಲಿಕ್ ಶಾಲೆಯಲ್ಲಿ ಶನಿವಾರ ನಡೆದ ಸಾಲುಮರದ ತಿಮ್ಮಕ್ಕ ಅವರಿಗೆ ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಮಗೆ ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಸಸಿಗಳನ್ನು ಪೆÇೀಷಣೆ ಮಾಡಿದ ಕಾರ್ಯ ಅಮೋಘ ಎಂದು ಬಣ್ಣಿಸಿದರು.

ಅನಕ್ಷರಸ್ಥೆಯಾಗಿದ್ದರೂ ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿದ್ದಕ್ಕೆ ಹಲವಾರು ರಾಷ್ಟ್ರೀಯ ಮತ್ತು ಅತರರಾಷ್ಟ್ರೀಯ ಸಂಸ್ಥೆಗಳು ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಪುರಸ್ಕರಿಸಿವೆ ಎಂದು ತಿಳಿಸಿದರು.

ಶಿಕ್ಷಕಿ ಶ್ರೀದೇವಿ ಸೋನಕಾಂಬಳೆ, ಸಂಗೀತಾ ಗ್ಯಾನೋಬಾ ಕಾಂಬಳೆ,ರಾಜಶ್ರೀ ಪ್ರಭು ಸಿರಗಿರೆ, ಪಂಚಫುಲಾ ಇದ್ದರು.