Home ಜಿಲ್ಲೆ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಜ್ಞಾನಪ್ರಸಾರದ ಮಾಧ್ಯಮ: ಡಾ. ಕುಶಾಲ ಬರಗೂರು

ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಜ್ಞಾನಪ್ರಸಾರದ ಮಾಧ್ಯಮ: ಡಾ. ಕುಶಾಲ ಬರಗೂರು

ಸಂಜೆವಾಣಿ ವಾರ್ತೆ,
ವಿಜಯಪುರ, ಮೇ. ೧೭:ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವಾಕಾಂಕ್ಷಿ ಯೋಜನೆ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮ ರಾಜ್ಯವ್ಯಾಪಿ ಶರವೇಗದಲ್ಲಿ ನಡೆಯುತ್ತಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ರಾಜ್ಯ ಸದಸ್ಯ ಡಾ. ಕುಶಾಲ್ ಬರಗೂರು ಹೇಳಿದರು.
ವಿಜಯಪುರದ ಗಣೇಶ ನಗರ ಬಡಾವಣೆಯ ಶಿಕ್ಷಕ ಸಾಹಿತಿ ಸಿದ್ದನಗೌಡ ಪೊಲೀಸಪಾಟೀಲ ಅವರ ನಿವಾಸದಲ್ಲಿ ಮನೆಗೊಂದು
ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಒಂದು ಲಕ್ಷಕ್ಕೂ ಅಧಿಕ ಮನೆಯಲ್ಲಿ ಗ್ರಂಥಾಲಯವನ್ನು ಸ್ಥಾಪಿಸುವ ಗುರಿಯನ್ನು ಪ್ರಾಧಿಕಾರ ಹೊಂದಿದೆ. ಇದು ಬೇರೆ ಬೇರೆ ರಾಜ್ಯಗಳಿಗಷ್ಟೇ ಅಲ್ಲ. ಅಂತರಾಷ್ಟ್ರೀಯ ಮಟ್ಟದಲ್ಲೂ ಒಳ್ಳೆಯ ಮಾದರಿಯ ಸುದ್ದಿಯಾಗಿದೆ. ಅದೇ ರೀತಿ ನೀವುಗಳೆಲ್ಲರೂ ಒಬ್ಬರಿಗೊಬ್ಬರು
ಮನೆಗೊಂದು ಗ್ರಂಥಾಲಯವಾಗಬೇಕೆAದು ಮಾತಾಡಿಕೊಂಡರೆ ಈ ಯೋಜನೆ ತಾನಾಗೆ ವಿಸ್ತರಿಸಿಕೊಳ್ಳುತ್ತದೆ. ಇದು ನಾಳೆ ಹಣದ ಸಂಪತ್ತಿಗಿAತಲೂ ಜ್ಞಾನ ಸಂಪತ್ತಿನ ಆಸ್ತಿಯಾಗಿ, ಮುಂದಿನ ಮಕ್ಕಳು ಆತ್ಮ ಗೌರವದಿಂದ, ಸ್ವಾಭಿಮಾನಿಗಾಗಿ ಸಮಾಜದ ದೊಡ್ಡ ಆಸ್ತಿಯಾಗಿ ಬಾಳುತ್ತಾರೆ. ಅದಕ್ಕಾಗಿ ಎಲ್ಲರ ಮನೆಯಲ್ಲಿಯೂ ಗ್ರಂಥಾಲಯ ಸ್ಥಾಪನೆವಾಗಲಿ. ಈ ಕಾರ್ಯಕ್ರಮ ಜ್ಞಾನ ಪ್ರಸಾರದ ಮಾಧ್ಯಮವಾಗುತ್ತದೆ ಎಂದು ಬರಗೂರು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಶಂಕರಗೌಡ ಬಿರಾದಾರ ಮಾತನಾಡಿ, ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸಿಕೊಂಡರೆ ಬಹುದೊಡ್ಡ
ವ್ಯಕ್ತಿಯಾಗಿ ಭವಿಷ್ಯವನ್ನು ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತದೆ. ಅಂತಹ ಯುವ ಮನಸ್ಸುಗಳ ಚೈತನ್ಯ ತುಂಬುವAತಹ ಎರಡು
ಸಿದ್ದನಗೌಡ ಪೊಲೀಸಪಾಟೀಲ ಅವರ ಅಪ್ರಕಟಿತ ಕವನ ಸಂಕಲನಗಳಬಗ್ಗೆ ಮಾತನಾಡಿ, ಅವರನ್ನು ಪ್ರೋತ್ಸಾಹಿಸಿದರು.
ಸಿದ್ದನಗೌಡ ಪೊಲೀಸಪಾಟೀಲ ಮಾತನಾಡಿ, ಪುಸ್ತಕಗಳು ನಮ್ಮ ಉತ್ತಮ ಸ್ನೇಹಿತರು ಇದ್ದಂತೆ. ನಮ್ಮ ಮನೆಯಲ್ಲಿ ಉತ್ತಮ
ಪುಸ್ತಕಗಳನ್ನು ಸಂಗ್ರಹಿಸಿದ್ದರ ಸಂತಸ ನಮ್ಮದಾಗಿದೆ ಎಂದರು.ಸಮಾರAಭದ ಅಧ್ಯಕ್ಷತೆ ವಹಿಸಿದ್ದ ಪುಸ್ತಕ ಪ್ರಾಧಿಕಾರದ ಜಿಲ್ಲಾ
ಸಂಚಾಲಕ ಶಂಕರ ಬೈಚಬಾಳ ಮಾತನಾಡಿ, ಎಲ್ಲರ ಮನೆಯಲ್ಲಿ ದೇವರಕೋಣೆ ಇದ್ದಂತೆ ಪ್ರತಿಯೊಬ್ಬರ ಮನೆಯಲ್ಲಿ ಗ್ರಂಥಾಲಯ
ಸ್ಥಾಪನೆಯಾಗಬೇಕು. ಪುಸ್ತಕಗಳು ಸರ್ವರ ಜ್ಞಾನದ ಆಸ್ತಿ ಎಂದು, ಶ್ರೀರಂಗರ ‘ಹರಿ ಜನಿವಾರ’ ನಾಟಕವನ್ನು ನೆನಪಿಸಿಕೊಂಡರು.
ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತ ಸಮಿತಿಯ ಸದಸ್ಯರಾದ ಪ್ರೊ. ಎ. ಎಚ್. ಕೊಳಮಲಿ, ಸುಜ್ಞಾನಿ ಪಾಟೀಲ, ಸಿದ್ರಾಮ ಯರನಾಳ, ಡಾ, ಬಸವರಾಜ ಸಾಲೋಡಗಿ, ಪರಶುರಾಮ ಶಿವಶರಣ, ಲಾಯಪ್ಪ ಇಂಗಳೆ ಹಾಗೂ ಬಡಾವಣೆಯ ಗಣ್ಯರು ಉಪಸ್ಥಿತರಿದ್ದರು.