ಶ್ರೀ ರಾಮಲಿಂಗೇಶ್ವರ ನೂತನ ಮಠದ ಉದ್ಘಾಟನೆ ಅಂಗವಾಗಿ ಬೃಹತ್ ರೈತ ಜನೋತ್ಸವಭಾರತೀಯ ಸಂಸ್ಕೃತಿಯನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು-ಪಾಟೀಲ

ತಾಳಿಕೋಟೆ,ಫೆ.೫- ಇಂದಿನ ಆಧುನಿಕ ಯುಗದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಸರಿಸಿಕೊಂಡು ಹೋಗುತ್ತಾ ನಮ್ಮ ದೇಶದ ಸಂಸ್ಕೃತಿಯನ್ನು ಮರೆಯುತ್ತಾ ಸಾಗಿರುವದು ದೊಡ್ಡ ಅಘಾತಕಾರಿ ಸಂಗತಿಯಾಗಿದೆ ಇಂತಹ ಸಂದರ್ಬದಲ್ಲಿ ದೇಶಿಯ ಸಂಸ್ಕೃತಿಯನ್ನು ಬೆಳೆಸುವಂತಹ ರೈತ ಸೈನಿಕರನ್ನು ಗೌರವಿಸುವಂತಹ ಕಾರ್ಯಕ್ರಮ ಶ್ರೀರಾಮಲಿಂಗಯ್ಯ ಮಹಾ ಸ್ವಾಮಿಗಳು ಹಮ್ಮಿಕೊಂಡಿರುವದು ಶ್ಲಾಘನೀಯವಾಗಿದೆ ಎಂದು ಮಾಜಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಅವರು ಹೇಳಿದರು.
ಮಂಗಳವಾರರAದು ತಾಲೂಕಿನ ಚಬನೂರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸಿದ್ದಿ ಪುರುಷ ಶ್ರೀ ರಾಮಲಿಂಗೇಶ್ವರ ಮಠದ ಹಾಗೂ ನೂತನ ಸಭಾ ಭವನದ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ನೂತನ ಮಠದ ಆವರಣದಲ್ಲಿ ನಡೆದ ಬೃಹತ್ ರೈತ ಜನೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು ರೈತ ಮತ್ತು ಸೈನಿಕ ನಮ್ಮ ದೇಶಕ್ಕೆ ಅತ್ಯಮುಲ್ಯವಾದ ಆಸ್ತಿಗಳಾಗಿವೆ ರೈತ ಇಲ್ಲವೆಂದರೆ ಮಣ್ಣು ತಿನ್ನಬೇಕಾಗುತ್ತದೆ ಸೈನಿಕ ಇಲ್ಲ ಅಂದರೆ ಮಣ್ಣು ಸೇರಬೇಕಾಗುತ್ತದೆ ಅಂತಹ ಇಬ್ಬರಿಗೂ ಗೌರವಿಸುವಂತಹ ಕಾರ್ಯ ಚಬನೂರ ಗ್ರಾಮದ ಶ್ರೀ ರಾಮಲಿಂಗೇಶ್ವರ ನೂತನ ಮಠದ ಉದ್ಘಾಟನೆ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿರುವದು ಹೆವ್ಮ್ಮೆಯ ಸಂಗತಿಯಾಗಿದೆ ಇಂದಿನ ದಿನದಲ್ಲಿ ಭಾರತೀಯ ಸಂಸ್ಕೃತಿಯು ನಶಿಸಲಿಕ್ಕೆ ಹತ್ತಿದೆ ಪಾಶ್ಚಿಮಾತ್ಯ ಸಂಸ್ಕೃತಿಯ ಕಡೆಗೆ ಜನರು ವಾಲುತ್ತಿರುವದು ಆತಂಕದಾಯವಾಗಿದೆ ಇಂತಹ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ತೆಗೆದು ಹಾಕಲು ಇಂತಹ ಧಾರ್ಮಿಕ ಕಾರ್ಯಕ್ರಮಗಳು ಅವಶ್ಯವಾಗಿದೆ ಅತ್ಯಂತ ಕಷ್ಟದ ಸಂದರ್ಬದಲ್ಲಿ ಬೆಳೆದು ಬಂದು ಶ್ರೀ ರಾಮಲಿಂಗಯ್ಯ ಸ್ವಾಮಿಗಳು ಬಡವರಿಗಾಗಿ ಸಭಾ ಭವನವನ್ನು ನಿರ್ಮಿಸಿ ಸಿದ್ದಿ ಪುರುಷ ಶ್ರೀ ರಾಮಲಿಂಗೇಶ್ವರರ ನೂತನಮಠವನ್ನು ನಿರ್ಮಿಸಿ ಭಕ್ತರಿಗೆ ಅನುಕೂಲ ಮಾಡಿಕೊಟ್ಟಿರುವದು ಈ ಭಾಗದಲ್ಲಿ ಆದ್ಯಾತ್ಮೀಕ ಭಾವನೆ ಮತ್ತಷ್ಠು ಹೆಚ್ಚಿಗೆ ಮೂಡುವಂತಾಗಿದೆ ಎಂದರು.
ಇನ್ನೋರ್ವ ಪ್ರಸಾದ ದಾಸೋಹಿ ಬಿಜೆಪಿ ನಿಕಟಪೂರ್ವ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಅವರು ಮಾತನಾಡಿ ಸಮಾಜದಲ್ಲಿ ಮಠ ಮಾನ್ಯಗಳ ಪಾತ್ರ ಅತ್ಯಂತ ಹಿರಿಯದ್ದಾಗಿದೆ ಶಾಲೆಯಲ್ಲಿ ಅಕ್ಷರ ಜ್ಞಾನ ಮೂಡಿಸಿದರೆ ಸಮಾಜದಲ್ಲಿ ಹೇಗೆ ಬಧುಕಬೇಕೆಂಬ ದಾರಿಯನ್ನು ಮಠ ಮಾನ್ಯಗಳು ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಕಲಿಸುತ್ತಾ ಸಾಗಿವೆ ಮನುಷ್ಯನ ದೇಹಕ್ಕೆ ಮನಸ್ಸಿಗೆ ಸಂಸ್ಕಾರ ಸಿಕ್ಕಾಗ ಜೀವನ ಪಾವನವಾಗಲಿದೆ ಅಂತಹ ನಮ್ಮ ದೇಶದ ಸಂಸ್ಕಾರದ ಜೊತೆಗೆ ಧಾರ್ಮಿಕ ಸಂಸ್ಕಾರ ಬಿತ್ತುವ ಕಾರ್ಯ ಚಬನೂರಿನ ಶ್ರೀ ರಾಮಲಿಂಗಯ್ಯ ಮಹಾಸ್ವಾಮಿಗಳು ಮಾಡುತ್ತಾ ಸಾಗಿದ್ದಾರೆಂದರು.
ಇನ್ನೋರ್ವ ಬಿಜೆಪಿ ರೈತ ಮೂರ್ಚಾ ರಾಜ್ಯಾಧ್ಯಕ್ಷ ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಮಾತನಾಡಿ ಇಂದಿನ ಆಧುನಿಕ ತಂತ್ರಜ್ಞಾನದಲ್ಲಿ ರೈತರಿಗಾಗಿ ಸಾಕಷ್ಟು ಅನುಕಲತೆಗಳು ಬಂದಿದ್ದರೂ ಕೂಡಾ ನೀರಿನ ಕೊರತೆಯಿಂದ ಈ ಭಾಗದಲ್ಲಿ ರೈತ ಸಂಕಷ್ಟಕ್ಕೆ ಸಿಲುಕುತ್ತಾ ಸಾಗಿದ್ದಾನೆ ಎಲ್ಲ ರಂಗಗಳಲ್ಲಿ ಆಧುನಿಕತೆ ಮೂಲಕ ಸಾಕಷ್ಟು ಮುಂದುವರೆಯುತ್ತಾ ಸಾಗಿದ್ದೇವೆ ಅದೇ ರೀತಿ ರೈತ ಬಾಂದವರು ಇಂದಿನ ಆಧುನಿಕ ಯಂತ್ರೋಪಕರಣಗಳನ್ನು ಅಳವಡಿಸಿಕೊಳ್ಳುವದರೊಂದಿಗೆ ಮುಂದೆ ಸಾಗಬೇಕಾಗಿದೆ, ಇದರಿಂದ ಏಕರೆ ಜಮೀನಿನಲ್ಲಿ ಲಕ್ಷಾಂತರ ಮೌಲ್ಯದ ಬೆಳೆಗಳನ್ನು ಬೆಳೆಯಬಹುದಾಗಿದೆ ಎಂದರು. ಪಂಚ ನಧಿಗಳ ಬೀಡು ಎಂದು ಕರೆಸಿಕೊಳ್ಳುವ ವಿಜಯಪುರ ಜಿಲ್ಲೆಯಲ್ಲಿ ಎರಡು ಡ್ಯಾಂಗಳಿದ್ದರೂ ಕೂಡಾ ಜಮೀನುಗಳಿಗೆ ನೀರು ಬರುತ್ತಿಲ್ಲಾ ಇದು ಜನಪ್ರತಿನಿಧಿಗಳ ಇಚ್ಚಾ ಶಕ್ತಿಯ ಜೊತೆಗೆ ರೈತರಲ್ಲಿ ಹೋರಾಟ ಮನೋಭಾವನೆ ಎಂಬುದು ಕುಗ್ಗಿದ್ದೆ ಕಾರಣವಾಗಿದೆ ನಮ್ಮಲ್ಲಿ ಹೋರಾಟದ ಮನೋಭಾವನೆ ಎಂಬುದು ಬರಬೇಕು ಪ್ರತಿ ಹಕ್ಕನ್ನು ಪಡೆದುಕೊಳ್ಳುವ ರೀತಿ ತಿಳಿದುಕೊಳ್ಳುವಂತಹ ಕಾರ್ಯವಾಗಬೇಕು ಅಂದಾಗ ಮಾತ್ರ ಜಗತ್ತಿಗೆ ಅನ್ನ ನೀಡುವ ರೈತ ಮುಂದೆ ಬರಲು ಸಾದ್ಯವಾಗಲಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ ಜಾಲಹಳ್ಳಿಯ ಶ್ರೀ ಜಗದರಾಧ್ಯ ಜಯಶಾಂತಲಿAಗ ಶಿವಾಚಾರ್ಯ ಮಹಾ ಸ್ವಾಮಿಗಳು ಮಾತನಾಡಿ ಸಿದ್ದಿ ಪುರುಷ ಶ್ರೀ ರಾಮಲಿಂಗೇಶ್ವರ ಶ್ರೀಗಳ ಪವಾಡ ಅವಿಸ್ಮರಣಿಯವಾಗಿದೆ ಅವರು ಭಕ್ತರಿಗಾಗಿ ಮಾಡಿದ ತ್ಯಾಗದ ಜೀವನ ಭಕ್ತೋದ್ದಾರವನ್ನು ಹೊಂದಿದೆ ಯಾವಾಗ ಧರ್ಮದ ಅವನತಿ ಯಾಗುತ್ತಿರುತ್ತದೆ ಅವಾಗ ಮಹಾತ್ಮರ ರೂಪದಲ್ಲಿ ಹುಟ್ಟಿ ಬಂದು ಕಾಪಾಡುತ್ತಾರೆ ಎಂಬAತೆ ಈಗೀನ ಶ್ರೀ ರಾಮಲಿಂಗೇಶ್ವರ ಸ್ವಾಮಿಗಳು ಭಕ್ತರ ಬಾಳಿನಲ್ಲಿ ಬೆಳಕನ್ನು ಚೆಲ್ಲುವಂತಹ ಕಾರ್ಯ ಮಾಡಿದ್ದಾರೆಂದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸೋಮನಗೌಡ ಪಾಟೀಲ(ಮನಗೂಳಿ), ಪ್ರವಚನಕಾರರಾಗಿ ಆಗಮಿಸಿದ ಗದಗ ಕದಮನಹಳ್ಳಿ ವಿರೇಶ್ವರ ಪುಣ್ಯಾಶ್ರಮದ ಪಂಡಿತ ವೇ.ಪಂಚಾಕ್ಷರಿ ಶಾಸ್ತಿçÃಗಳು ಹಿರೇಮಠ ಅವರು ಮಾತನಾಡಿದರು.
ವೇದಿಕೆಯ ಮೇಲೆ ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞವೈಧ್ಯರಾದ ಡಾ.ಪ್ರಭುಗೌಡ ಲಿಂಗದಳ್ಳಿ, ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಮಹಾಸ್ವಾಮಿಗಳು, ನೂತನಮಠದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಕೊಡೇಕಲ್ಲ ದುರದುಂಡೇಶ್ವರ ಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳು, ನಾವದಗಿ ಹಿರೇಮಠದ ರಾಜಗುರು ಶ್ರೀ ರಾಜೇಂದ್ರ ಒಡೆಯರ ಶಿವಾಚಾರ್ಯ ಮಹಾಸ್ವಾಮಿಗಳು, ದೇವರ ಹಿಪ್ಪರಗಿ ಪರದೇಶಿಮಠದ ಶ್ರೀ ಶಿವಯೋಗಿ ಮಹಾಸ್ವಾಮಿಗಳು, ಜಡಿಮಠದ ಶ್ರೀ ಜಡಿಸಿದ್ದೇಶ್ವರ ಮಹಾಸ್ವಾಮಿಗಳು, ಸಿದ್ದಿ ಪುರುಷ ಶ್ರೀ ರಾಮಲಿಂಗೇಶ್ವರ ಮಠದ ಶ್ರೀ ರಾಮಲಿಂಗಯ್ಯ ಮಹಾಸ್ವಾಮಿಗಳು, ಬಸನಗೌಡ ಪಾಟೀಲ(ಚಬನೂರ), ಸೋಮನಗೌಡ ಪಾಟೀಲ, ವಿಜುಗೌಡ ಪಾಟೀಲ(ಬಬಲೇಶ್ವರ), ಗುರಲಿಂಗಪ್ಪ ಅಂಗಡಿ, ಬಸನಗೌಡ ವಣಕ್ಯಾಳ, ಸಾಹೇಬಗೌಡ ವಣಕ್ಯಾಳ, ಸಿದ್ರಾಮಪ್ಪಮುತ್ಯಾ ಒಡೆಯರ, ಶಿವು ಮುತ್ಯಾ ಒಡೆಯರ, ಮೊದಲಾದವರು ಉಪಸ್ಥಿತರಿದ್ದರು.

ನಾಗರಾಜ ಹೂಗಾರ, ಪ್ರವೀಣ ಪತ್ತಾರ ಸಂಗೀತ ಸೇವೆ ಸಲ್ಲಿಸಿದರು. ಕೊಡೇಕಲ್ಲ ಶ್ರೀ ಶಿವಕುಮಾರ ಮಹಾಸ್ವಾಮಿಗಳು ನಿರೂಪಿಸಿ ವಂದಿಸಿದರು.

ರೈತರಿಗೆ ಹುಮ್ಮಸ್ಸು ತುಂಬಿದ ಬಂಡಿ ಯಾತ್ರೆ
ಶ್ರೀ ರಾಮಲಿಂಗೇಶ್ವರ ನೂತನ ಮಠದ ಉದ್ಘಾಟನೆ ಅಂಗವಾಗಿ ನಡೆದ ರೈತ ಜನೋತ್ಸವ ಕಾರ್ಯಕ್ರಮಕ್ಕೂ ಮೊದಲು ಚಬನೂರ ಗ್ರಾಮದ ಶಾಲಾ ಆವರಣದಿಂದ ಪ್ರಾರಂಭಗೊAಡ ಬೃಹತ್ ರೈತರ ಬಂಡಿಯಾತ್ರೆಗೆ ಮಾಜಿ ಶಾಸಕ ಸೋಮನಗೌಡ ಪಾಟೀಲ, ರಮೇಶ ಭೂಸನೂರ, ಡಾ.ಪ್ರಭುಗೌಡ ಲಿಂಗದಳ್ಳಿ, ಅವರು ಚಾಲನೆ ನೀಡಿದರು. ರೈತನ ಬಂಡಿಯಲ್ಲಿ ಸಿದ್ದಿ ಪುರುಷ ಶ್ರೀ ರಾಮಲಿಂಗೇಶ್ವರರ ಭಾವಚಿತ್ರದ ಮೇರವಣಿಗೆಯನ್ನು ಆಯೋಜಿಸಲಾಗಿತ್ತು ಮೇರವಣಿಗೆಯಲ್ಲಿ ನೂರಾರು ರೈತಾಪಿ ಜನರು ಪಾಲ್ಗೋಂಡು ಹುಮ್ಮಸ್ಸಿನೊಂದಿಗೆ ಹರ್ಷೋದ್ಗಾರ ವ್ಯಕ್ತಪಡಿಸಿದರು. ಮೇರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನೂತನ ಮಠದ ಆವರಣಕ್ಕೆ ಆಗಮಿಸಿತು.